ಬಾಯಿ ಮಾತಿನ ಮೂಲಕ ಆಸ್ತಿ ಹಂಚಿಕೊಂಡಿದ್ದೀರಾ ಯಾವುದೇ ದಾಖಲೆಗಳಿಲ್ಲ ಎನ್ನುವವರು ಈ ಮಾಹಿತಿ ತಪ್ಪದೇ ನೋಡಿ..

ಬಾಯಿ ಮಾತಿನ ಮೂಲಕ ಆಸ್ತಿ ಹಂಚಿಕೊಂಡಿದ್ದೀರಾ…..? ಯಾವುದೇ ದಾಖಲೆಗಳಿಲ್ಲ ಎನ್ನುವವರು ಈ ಮಾಹಿತಿ ತಿಳಿಯಿರಿ…..||

WhatsApp Group Join Now
Telegram Group Join Now

ಬಹಳ ಹಿಂದಿನ ಕಾಲದಲ್ಲಿ ಯಾವುದೇ ರೀತಿಯಾದಂತಹ ಆಸ್ತಿ ಹಂಚಿಕೆಯನ್ನು ಮಾಡಿಕೊಳ್ಳುತ್ತಿರಲಿಲ್ಲ. ಬದಲಿಗೆ ಕುಟುಂಬದವರೆಲ್ಲ ಒಟ್ಟಿಗೆ ಕೂಡು ಕುಟುಂಬದಲ್ಲಿ ಇರುತ್ತಿದ್ದರು. ಆದ್ದರಿಂದ ಎಲ್ಲರೂ ಸಹ ಒಂದೇ ಸಮನೆ ದುಡಿದು, ಅದರಲ್ಲಿಯೇ ತಮ್ಮ ಜೀವನವನ್ನು ಸಾಗಿಸುತ್ತಿದ್ದರು. ಯಾವುದೇ ರೀತಿಯಾದಂತಹ ಆಸ್ತಿ ಹಂಚಿಕೆಯನ್ನು ಮಾಡಿಕೊಳ್ಳುತ್ತಿರಲಿಲ್ಲ.

ಹಾಗೂ ಆಗ ಅವರೆಲ್ಲರಲ್ಲಿಯೂ ಸಹ ಒಗ್ಗಟ್ಟು ಎನ್ನುವುದು ಬಲವಾಗಿತ್ತು. ಆದರೆ ಇತ್ತೀಚಿನ ದಿನದಲ್ಲಿ ವಿಭಕ್ತ ಕುಟುಂಬಗಳೆ ಹೆಚ್ಚಾಗುತ್ತಿದ್ದು. ಇದರಲ್ಲಿ ಅಣ್ಣ ತಮ್ಮಂದಿರು ಯಾರು ಕೂಡ ಒಟ್ಟಾಗಿ ಇರುವುದಿಲ್ಲ ಬದಲಿಗೆ ಅವರವರೆ ವಿಭಾಗವಾಗಿ ಬೇರೆ ಕಡೆ ಇರುತ್ತಾರೆ. ಆದ್ದರಿಂದ ಅವರಲ್ಲಿರುವಂತಹ ಆಸ್ತಿಗಳು ಸಹ ವಿಭಾಗ ಆಗಿರುತ್ತದೆ. ಕೆಲವೊಂದಷ್ಟು ಜನ ಇತ್ತೀಚಿನ ದಿನದಲ್ಲಿ ಯಾವುದೇ ರೀತಿಯ ಆಸ್ತಿಯನ್ನು ಹಂಚಿಕೊಳ್ಳಬೇಕು ಎಂದರೆ ಕೆಲವೊಂದಷ್ಟು ರೂಲ್ಸ್ ಗಳನ್ನು ತಿಳಿದು.

ಅದನ್ನು ಅನುಸರಿಸುವುದರ ಮೂಲಕ ಕೂಲಂಕುಶವಾಗಿ ಪತ್ರಗಳನ್ನು ಮಾಡಿಸಿಕೊಂಡು ಅದಕ್ಕೆ ಸೂಕ್ತವಾದಂತಹ ಎಲ್ಲ ವಿಧಾನಗಳನ್ನು ಅನುಸರಿಸಿ ಆಸ್ತಿ ಹಂಚಿಕೆಯನ್ನು ಮಾಡಿಕೊಂಡಿರುತ್ತಾರೆ. ಆದರೆ ಕೆಲವೊಂದಷ್ಟು ಜನ ಆ ಒಂದು ಆಸ್ತಿಗೆ ಸಂಬಂಧಿಸಿದ ಯಾವುದೇ ದಾಖಲಾತಿಗಳು ಇಲ್ಲದೆ ಇದ್ದರೂ ಆ ಆಸ್ತಿಯನ್ನು ಅಣ್ಣ ತಮ್ಮಂದಿರು ಬಾಯಿ ಮಾತಿನ ಮೂಲಕ ಹಂಚಿಕೊಂಡಿರುತ್ತಾರೆ.

ಹಾಗಾದರೆ ಇಂತಹ ಸಂದರ್ಭದಲ್ಲಿ ಯಾವ ರೀತಿಯಾದಂತಹ ವಿಧಾನ ಗಳನ್ನು ಅನುಸರಿಸಬೇಕಾಗುತ್ತದೆ ಹಾಗೇನಾದರೂ ಬಾಯಿ ಮಾತಿನ ಮೂಲಕ ಆಸ್ತಿ ವಿಭಾಗ ಮಾಡಿಕೊಂಡಿದ್ದರೆ. ಆ ಆಸ್ತಿ ಬೇರೆಯವರು ಪಡೆದುಕೊಳ್ಳುವುದಕ್ಕೆ ಅರ್ಹರಿರುತ್ತಾರ ಅಥವಾ ಅರ್ಹರಿರುವುದಿಲ್ಲವ ಹಾಗೇನಾದರೂ ಬಾಯಿ ಮಾತಿನ ಮೂಲಕ ನೀವು ಆಸ್ತಿಯನ್ನು ಹಂಚಿಕೊಂಡಿದ್ದರೆ ಅದನ್ನು ಹೇಗೆ ನಿಮ್ಮ ಹೆಸರಿಗೆ ಮಾಡಿಸಿಕೊಳ್ಳುವುದು ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ.

See also  ಹದ್ದು ಮೀರಿದ ಕಲ್ಪನೆ..ಪುನರ್ಜನ್ಮಕ್ಕಾಗಿ ಅದು ಅಷ್ಟು ಯಾತನೆ ಅನುಭವಿಸುತ್ತಾ ? ಇದು ಗರುಡನ ಜಾತಿಯ ಮಾಹಿತಿ

ಮೊದಲೇ ಹೇಳಿದಂತೆ ಬಹಳ ಹಿಂದಿನ ದಿನದಲ್ಲಿ ಯಾವುದೇ ರೀತಿಯಾ ದಂತಹ ರಿಜಿಸ್ಟ್ರೇಷನ್ ವಿಧಾನ ಇರಲಿಲ್ಲ. ಬದಲಿಗೆ ಬಾಯಿ ಮಾತಿನ ಮೂಲಕ ಆಸ್ತಿಯನ್ನು ವಿಭಾಗ ಮಾಡಿಕೊಳ್ಳುತ್ತಿದ್ದರು. ಅದರಲ್ಲೂ ಮದುವೆಯಾಗಿರುವಂತಹ ಹೆಣ್ಣು ಮಕ್ಕಳು ನನಗೆ ಈ ಆಸ್ತಿಯಲ್ಲಿ ಯಾವುದೇ ರೀತಿಯಾದಂತಹ ಹಕ್ಕು ಬೇಡ ನೀವೇ ಇಟ್ಟುಕೊಳ್ಳಿ ಎಂದು ಅವರ ಅಣ್ಣತಮ್ಮಂದಿರಿಗೆ ಬರಿ ಬಾಯಿ ಮಾತಿನಲ್ಲಿ ಹೇಳಿದರೆ ಅಂತ ಸಮಯದಲ್ಲಿ ಆ ಆಸ್ತಿಯನ್ನು ಅಣ್ಣತಮ್ಮಂದಿರು ಇಬ್ಬರು ವಿಭಾಗ ಮಾಡಿಕೊಂಡು ಇಟ್ಟುಕೊಂಡಿರುತ್ತಾರೆ.

ತದನಂತರ ಈಗ ಭೂಮಿಯ ಬೆಲೆ ಹಣಕಾಸಿನ ಬೆಲೆ ಹೆಚ್ಚಾಗುತ್ತಿದ್ದಂತೆ ಆ ಹೆಣ್ಣು ಮಗಳು ನನಗೆ ಆಸ್ತಿಯಲ್ಲಿ ಪಾಲು ಬೇಕು ಎಂದು ಕೇಳಿದಂಥ ಸಮಯದಲ್ಲಿ ಅವಳ ಒಂದು ಮಾತಿನ ವಿಚಾರವನ್ನು ಕೋರ್ಟ್ ಗಮನಿ ಸಿ ಅದನ್ನು ಕೊಡಬಹುದಾ ಕೊಡಲು ಸಾಧ್ಯವಿಲ್ಲವಾ ಎನ್ನುವುದನ್ನು ಕೋರ್ಟ್ ನಿರ್ಧಾರ ಮಾಡಿ ಅದಕ್ಕೆ ಸಮಂಜಸವಾದoತಹ ತೀರ್ಪನ್ನು ಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">