ಸಿನಿಮ್ಮಾಕ್ಕಿಂತಲೂ ಮೊದಲು ಬರುವ ಈ ಮುಕೇಶ್ ಹಾಗೂ ಸುನೀತಾ ನಿಜಕ್ಕೂ ಯಾರು ಗೊತ್ತಾ? ಇವರ ಬಗ್ಗೆ ನಿಮಗೆ ಗೊತ್ತೆ ಇಲ್ಲ » Karnataka's Best News Portal

ಸಿನಿಮ್ಮಾಕ್ಕಿಂತಲೂ ಮೊದಲು ಬರುವ ಈ ಮುಕೇಶ್ ಹಾಗೂ ಸುನೀತಾ ನಿಜಕ್ಕೂ ಯಾರು ಗೊತ್ತಾ? ಇವರ ಬಗ್ಗೆ ನಿಮಗೆ ಗೊತ್ತೆ ಇಲ್ಲ

ಸಿನಿಮಾ ಕ್ಕಿಂತಲೂ ಮೊದಲು ಬರುವ ಈ ಮುಕೇಶ್ ಹಾಗೂ ಸುನಿತಾ ನಿಜಕ್ಕೂ ಯಾರು? ಇವರೆಲ್ಲ ಎಲ್ಲಿ ಸಿಕ್ಕಿದರೂ ಗೊತ್ತಾ…..??

WhatsApp Group Join Now
Telegram Group Join Now

ಜಾಹೀರಾತಿನಲ್ಲಿ ಬರುವಂತಹ ಈ ಮುಕೇಶ್ ಎಂಬ ವ್ಯಕ್ತಿಯನ್ನು ನೋಡಿ ಹಂಗಿಸಿದವರಿಗೆ ಲೆಕ್ಕವೇ ಇಲ್ಲ. ಆದರೆ ಅಸಲಿಗೆ ವಿಷಯಕ್ಕೆ ಬರುವುದಾದರೆ ಈ ತಂಬಾಕಿನಿಂದಾಗಿ ಕೇವಲ ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತ ಹತ್ತಾರು ಲಕ್ಷಕ್ಕೂ ಹೆಚ್ಚಿನ ಮಂದಿ ಪ್ರತಿ ವರ್ಷವೂ ಸಾವನ್ನಪ್ಪುತ್ತಿದ್ದಾರೆ.

ಇದರಲ್ಲಿ ಅರ್ಧದಷ್ಟು ಜನ ಈ ತಂಬಾಕಿನ ಸೇವನೆ ಮಾಡದೆ ಕೇವಲ ಅದರ ಹೊಗೆ ಸೇವಿಸಿ ಸಾಯುತ್ತಿದ್ದಾರೆ. ಇದು ನಿಜಕ್ಕೂ ಆತಂಕ ಪಡುವ ಸಂಗತಿ. ಅಂದರೆ ಇಲ್ಲಿ ತಂಬಾಕು ಸೇವಿಸದೆಯೇ ಕೇವಲ ಅದರ ಕಲುಷಿತ ಗಾಳಿ ಸೇವಿಸಿಯೇ ಎಷ್ಟೋ ಜನ ಸಾಯುತ್ತಿದ್ದಾರೆ. ಇದರಲ್ಲಿ ಮಕ್ಕಳೇ ಹೆಚ್ಚು 2010ರಲ್ಲಿ ಅಡಲ್ಟ್ ಗ್ಲೋಬಲ್ ಟೊಬ್ಯಾಕೋ ಸರ್ವೆ ನಡೆಸಿದ ಸರ್ವೆಯ ಪ್ರಕಾರ.

ಹೀಗೆ ದಿನ ಪ್ರತಿ ಸಾಯುವವರಲ್ಲಿ ಶೇಕಡ 25ರಷ್ಟು ಅಡಲ್ಟ್ ಗಳು, ಶೇಕಡ 33 ರಷ್ಟು ಪುರುಷರು ಹಾಗೂ ಶೇಕಡ 18ರಷ್ಟು ಸ್ತ್ರೀಯರು ಇದ್ದಾರೆ. ಇದಿಷ್ಟು ಜನ ಕೈನಿ, ಪಂಪಾರಾಕ್, ಬೀಡಿ, ಸಿಗರೇಟ್, ಹೀಗೆ ವಿವಿಧ ಬಗೆಯಲ್ಲಿ ತಂಬಾಕು ಸೇವಿಸುತ್ತಾ ಕ್ಯಾನ್ಸರ್ ರೋಗಕ್ಕೆ ಬಲಿಯಾಗುತ್ತಲೇ ಇದ್ದಾರೆ ಎಂಬ ಈ ಭಯಂಕರ ವರದಿ ತಿಳಿದು ಬಂತು.

ಇದರಿಂದಲೇ ವಿಶ್ವದಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಜನರ ಸಾವು ಸಂಭವಿಸುತ್ತಿದೆ ಹಾಗೂ ಅಷ್ಟೇ ಪ್ರಮಾಣದಲ್ಲಿ ಜನ ಅನಾರೋಗ್ಯ ಪೀಡಿತರಾಗುತ್ತಿದ್ದಾರೆ. ಇದನ್ನೆಲ್ಲ ಗಮನಿಸಿದಂತಹ ಸೂಕ್ತ ಅಥಾರಿಟಿಗಳು ಈ ಬಗ್ಗೆ ಜನರು ಸದಾ ಎಚ್ಚರದಿಂದಿರುವ ಹಾಗೆ ಮಾಡಬೇಕು ಎಂದು ನಿರ್ಧರಿಸಿದವು. ಈ ವರದಿ ನೋಡಿದ ಕೂಡಲೇ ಭಾರತ ಸರ್ಕಾರ 2010 ಹಾಗೂ 11ರ ಸಮಯದಲ್ಲಿ ಜನರಿಗೆ ಎಚ್ಚರಿಕೆಯನ್ನು ನೀಡಲು ಮುಂದಾಯಿತು.

See also  ನಟಿ ಹರ್ಷಿಕಾ ಪೊಣ್ಣಚ್ಚ ಕುಟುಂಬದ ಮೇಲೆ ದುಷ್ಕರ್ಮಿಗಳ ದಾಳಿ..ಇದು ಪಾಕಿಸ್ತಾನ ಅಲ್ಲ..ದಾಳಿಯಿಂದ ಆಘಾತಕ್ಕೊಳಗಾದ ನಟ ನಟಿ

ಆದರೆ ಈ ಎಚ್ಚರಿಕೆ ಬೆದರು ಗೊಂಬೆಯ ಹಾಗೆ ಇರಬಾರದು ಅದು ಹೆಚ್ಚು ಎಫೆಕ್ಟಿವ್ ಆಗಿ ಇರಬೇಕು ಎಂದು ತೀರ್ಮಾನಿಸಿದ ಆಗ ಅದರ ಕಣ್ಣಿಗೆ ಬಿದ್ದ ವ್ಯಕ್ತಿಯೇ ಈ ಮುಕೇಶ್. ಈತ ಮೂಲತಃ ಮಹಾರಾಷ್ಟ್ರದ ಬುಸನೂರ್ ಎಂಬ ಹಳ್ಳಿಯವನು ತಂಬಾಕು ಸೇವನೆ ರೂಡಿಸಿಕೊಂಡಿ ದ್ದಂತಹ ಈತನಿಗೆ ಇನ್ನೂ ಕೇವಲ 24 ವರ್ಷ ವಯಸ್ಸು. ಹೆಚ್ಚು ಓದದೇ ಇರುವಂತಹ ಈ ವ್ಯಕ್ತಿ.

ದೈನಂದಿನ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಆತನ ಆದಾಯದಿಂದಲೇ ಅವನ ಇಡೀ ಸಂಸಾರ ನಡೆಯಬೇಕಿತ್ತು. ಹೀಗಿರು ವಾಗ ಅವನ ಕೆಲವು ಸ್ನೇಹಿತರ ಸಹವಾಸದಿಂದಾಗಿ ಅವನಿಗೆ ಗುಟ್ಕಾ ಸೇವನೆಯ ಅಭ್ಯಾಸ ಆಗುತ್ತದೆ, ಗುಟ್ಕಾ ಸೇವನೆಗೆ ಬಿದ್ದಂತಹ ಮುಕೇಶ್ ಅದಕ್ಕೆ ದಾಸನಾಗಿ ಮುಂದಿನ ಒಂದು ವರ್ಷದ ಕಾಲ ಅದನ್ನು ಸೇವಿಸುತ್ತಾ ಕಾಲ ಕಳೆಯುತ್ತಾನೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">