ಮುಖ್ಯಮಂತ್ರಿ ಯಾರು ಅನ್ನೋ ಲೆಕ್ಕಾಚಾರದಲ್ಲೇ ಕಾಲ ಕಳೆದ್ರಿ ಪಾಪ ಇವರ ಬಗ್ಗೆ ಯೋಚಿಸಿ…..!!
ನೀ ಮಾಯೆಯೋಳಗೋ ನಿನ್ನೊಳು ಮಾಯೆಯೋ ಎಂಬ ದಾಸರ ವಾಣಿಯಂತೆ ಇವತ್ತು ಇಡೀ ಸಮಾಜ ಹಾಗೂ ಜಗತ್ತು ತೋರ್ಪಡಿಕೆ ಎಂಬ ಮಾಯೆಯ ಹಿಂದೆ ಬಿದ್ದಿದೆ. ಈ ಸೋಶಿಯಲ್ ಮೀಡಿಯಾದಲ್ಲಿ ದಿನ ಪ್ರತಿ ನಾವು ಒಂದಲ್ಲ ಒಂದು ಅತಿರೇಕವನ್ನು ನಾವು ಗಮನಿಸುತ್ತಿರು ತ್ತೇವೆ. ಒಂದು ಕಾಲದಲ್ಲಿ ಯಾರಾದರೂ ನ್ಯೂ ಸೆನ್ಸ್ ಅನ್ನು ಮಾಡಿದರೆ ಅದು ನ್ಯೂಸ್ ಆಗುತ್ತಿತ್ತು.
ಆದರೆ ಈಗ ನ್ಯೂ ಸೆ ಈಗ ಒಂದು ನ್ಯೂ ಸೆನ್ಸ್ ಆಗಿ ಹೋಗಿದೆ. ಅಂತ ರ್ಜಾಲದಲ್ಲಿ ಇವತ್ತು ಯಾರು ಹೇಗೆ ಬೇಕಾದರೂ ಫೇಮಸ್ ಆಗಬಹುದು. ಅನೇಕರು ತಾವು ಮುಂದೆ ಬರಬೇಕು ಎಂದೇ ಇದನ್ನು ಆರಿಸಿಕೊಳ್ಳುತ್ತಾರೆ ಅಂಥವರು ಇದರ ಮುಖಾಂತರ ಹೆಚ್ಚು ಜನಪ್ರಿಯರೂ ಸಹ ಆಗುತ್ತಾರೆ. ಹಾಗೂ ಅನೇಕ ವೇಳೆ ಅಷ್ಟೇ ವೇಗವಾಗಿ ಕಣ್ಮರೆಯು ಸಹ ಆಗುತ್ತಾರೆ.
ಈ ರೀತಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಂತಹ ಹೈಕ್ ಗಳಿಂದ ದಿಡೀರ್ ವೈರಲ್ ಆಗಿ ಬಳಿಕ ಜನಪ್ರಿಯತೆಯನ್ನು ಕಳೆದುಕೊಂಡಂತಹ ಒಂದಷ್ಟು ಜನ ಸೋಶಿಯಲ್ ಮೀಡಿಯಾದ ಅತಿಥಿಗಳ ಬಗ್ಗೆ ಇವತ್ತು ಈ ದಿನ ತಿಳಿದುಕೊಳ್ಳೋಣ. ಮೊದಲನೆಯದಾಗಿ ಸೋಶಿಯಲ್ ಮೀಡಿಯಾದಲ್ಲಿ ಅತ್ಯಂತ ಹೆಚ್ಚು ಜನಪ್ರಿಯತೆಯನ್ನು ಗಳಿಸಿದಂತಹ ಹುಚ್ಚ ವೆಂಕಟ್ ಬಗ್ಗೆ. ಈ ಹೆಸರನ್ನು ಕೇಳದೆ ಇರುವಂತಹ ಕನ್ನಡಿಗರು ಬಹುಶಹ ಇಲ್ಲ ಅನ್ನಿಸುತ್ತದೆ.
ಕಾರಣ ಒಂದು ಕಾಲದಲ್ಲಿ ಹುಚ್ಚ ವೆಂಕಟ್ ಸೋಶಿಯಲ್ ಮೀಡಿಯಾ ಹಾಗೂ ಇತರ ಮಾಧ್ಯಮಗಳಲ್ಲಿ ಎಬ್ಬಿಸಿದಂತಹ ಧಾಂದಲೆ ಮತ್ತು ಹವಾ ಅಷ್ಟಿಷ್ಟಲ್ಲ. ಇವರನ್ನು 2015ರ ಕನ್ನಡದ ಮೂರನೇ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಅಭ್ಯರ್ಥಿಯಾಗಿ ಆರಿಸಿಕೊಳ್ಳಲಾಗಿತ್ತು. ಈ ವ್ಯಕ್ತಿ ತಾನು ಕಾಲಿಟ್ಟ ಕಡೆಎಲ್ಲ ರಂಪ ರಾಮಾಯಣ ಹಾಗೂ ಧಾಂದಲೆ ಮಾಡುವುದರಲ್ಲಿ ನಿಸ್ಸೀಮ.
ಇವರ ಹಿನ್ನೆಲೆ ಬಗ್ಗೆ ಹೇಳುವುದಾದರೆ ಇವರು ಮೊದಲಿಗೆ 2005ರ ಮೆಂಟಲ್ ಮಂಜ ಎಂಬ ಸಿನಿಮಾದಲ್ಲಿ ಒಂದು ಸಣ್ಣ ಸೈಡ್ ರೋಲ್ ನಲ್ಲಿ ನಟಿಸಿದ್ದರು. ಇದಾದ ನಂತರ 2009ರಲ್ಲಿ ಸ್ವತಂತ್ರ ಪಾಳ್ಯ ಎಂಬ ಚಿತ್ರವನ್ನು ನಿರ್ದೇಶಿಸಿ ಹೊರ ತರುವ ಮೂಲಕ ಡೈರೆಕ್ಷನ್ ಡೆಬ್ಯು ಅನ್ನು ಶುರು ಮಾಡಿದರು. ಹಾಗೂ ಈ ಚಿತ್ರದ ಒಂದು ದೃಶ್ಯದಲ್ಲಿ ಸ್ವತಃ ನಟಿಸಿದ್ದರು ಸಹ.
ಈ ಸಮಯದಲ್ಲಿ ಹುಚ್ಚ ವೆಂಕಟ್ ಆಗಿ ಅವರನ್ನು ಯಾರು ಸಹ ಗುರುತಿಸುತ್ತಿರಲಿಲ್ಲ. ಹುಚ್ಚ ವೆಂಕಟ್ ಅವರು ನಿಜಕ್ಕೂ ಸೋಶಿಯಲ್ ಮೀಡಿಯಾದಲ್ಲಿ ಬೆಳಕಿಗೆ ಬಂದದ್ದು 2014ರ ಸಮಯದಲ್ಲಿ. ಆಗಷ್ಟೇ ಅವರ ನಟನೆ ಹಾಗೂ ನಿರ್ದೇಶನದ ಹುಚ್ಚ ವೆಂಕಟ್ ಎಂಬ ಚಿತ್ರ ಬಿಡುಗಡೆ ಕಂಡಿತ್ತು. ಇದನ್ನು ಕೆ ಜಿ ರಸ್ತೆ ಚಿತ್ರಮಂದಿರ ಒಂದರಲ್ಲಿ ಅವರು ಅದ್ದೂರಿಯಾಗಿ ರಿಲೀಸ್ ಮಾಡಿದ್ದರು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.