ಸೂರ್ಯ ತನ್ನ ಶತ್ರು ಮನೆ ವೃಷಭ ರಾಶಿ ಪ್ರವೇಶ ಈ ರಾಶಿಗಳಿಗೆ ಅದೃಷ್ಟ ಹುಡುಕಿ ಬಂದರೆ ಈ ಕೆಲವು ರಾಶಿಗಳಿಗೆ ತುಂಬಾ ತೊಂದರೆ….||
ಸೌರಮಂಡಲಕ್ಕೆ ಅಧಿಪತಿಯಾಗಿರುವಂತಹ ಸೂರ್ಯ ಈಗ ಮೇಷ ರಾಶಿಯನ್ನು ಬಿಟ್ಟು ವೃಷಭ ರಾಶಿಯನ್ನು ಪ್ರವೇಶ ಮಾಡುತ್ತಿದ್ದಾನೆ. ಮೇ 15ನೇ ತಾರೀಖು ಅಂದರೆ ಇವತ್ತಿನ ದಿನ 11 ಗಂಟೆ 15 ನಿಮಿಷದಿಂದ 8 ಗಂಟೆ 10 ನಿಮಿಷದವರೆಗೆ ಸೂರ್ಯ ವೃಷಭ ರಾಶಿಯನ್ನು ಪ್ರವೇಶ ಮಾಡುತ್ತಿದ್ದಾನೆ.
ಸೋಮವಾರದ ದಿನ ಏಕಾದಶ ತಿಥಿಯಲ್ಲಿ ಪೂರ್ವಭಾದ್ರಪದ ನಕ್ಷತ್ರದಲ್ಲಿ ಸೂರ್ಯ ವೃಷಭ ರಾಶಿಯನ್ನು ಪ್ರವೇಶ ಮಾಡಿದಾಗ 12 ರಾಶಿ ಚಕ್ರದ ಮೇಲೆ ಯಾವ ರೀತಿಯಾದಂತಹ ಪರಿಣಾಮವನ್ನು ಬೀರುತ್ತದೆ ಹಾಗೆ ಆ ಪರಿಣಾಮ ರಾಶಿಯವರಿಗೆ ಎಷ್ಟರಮಟ್ಟಿಗೆ ಒಳ್ಳೆಯದಾಗುತ್ತದೆ ಹಾಗೂ ಎಷ್ಟರಮಟ್ಟಿಗೆ ಕೆಡಕಾಗುತ್ತದೆ. ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ.
ವೈದಿಕ ಜ್ಯೋತಿಷ್ಯದ ಬಗ್ಗೆ ನೋಡುವುದಾದರೆ ಭೂಮಿಯನ್ನು ನಾವು ಸ್ಥಿರ ಗ್ರಹ ಎಂದು ಕರೆಯುತ್ತೇವೆ. ವೃಷಭ ರಾಶಿಯಲ್ಲಿ ಸೂರ್ಯ ಸಂಚಾರವನ್ನು ಮಾಡಿದಾಗ ಇದು ವೃಷಭಾಯಣ ಎಂದು ಹೇಳುತ್ತೇವೆ ಅಂದರೆ ವೃಷಭ ಸಂಕ್ರಮಣ ಎಂದು ಹೇಳಿ ಕರೆಯುತ್ತಾರೆ. ವೃಷಭ ರಾಶಿಯ ಅಧಿಪತಿಯಾಗಿರುವಂತಹ ಶುಕ್ರ ಸೂರ್ಯನಿಗೆ ಶತ್ರು ಎಂದು ಹೇಳುತ್ತೇವೆ. ಅಂದರೆ ಈಗ ಸೂರ್ಯ ತನ್ನ ಶತ್ರು ಮನೆಯನ್ನು ಪ್ರವೇಶ ಮಾಡಿದ್ದಾನೆ.
ಹೀಗಾಗಿ ಕೆಲವೊಂದಷ್ಟು ರಾಶಿಯವರಿಗೆ ಅತ್ಯಂತ ಘೋರವಾದ ನೋವುಗಳು ಕಷ್ಟಗಳು ಬರುತ್ತದೆ. ಕೆಲವು ರಾಶಿಯವರಿಗೆ ಒಳ್ಳೆಯ ದ್ದನ್ನು ಮಾಡಿದರೆ ಇನ್ನು ಉಳಿದ ರಾಶಿಯವರಿಗೆ ತಟಸ್ಥ ರೀತಿಯಲ್ಲಿಯೇ ಇರುತ್ತಾನೆ. ಹಾಗಾದರೆ ಯಾವ ಯಾವ ರಾಶಿಯವರಿಗೆ ಯಾವ ರೀತಿಯ ಫಲ ಸಿಗುತ್ತದೆ ಎಂದು ಈ ಕೆಳಗಿನಂತೆ ತಿಳಿಯೋಣ ಮೊದಲನೆಯದಾಗಿ.
ಮೇಷ ರಾಶಿ ಮೇಷ ರಾಶಿಯ ಸೂರ್ಯನು ಐದನೇ ಮನೆಯ ಅಧಿಪತಿ ಯಾಗಿದ್ದಾನೆ. ಆದರೆ ಈಗ ಎರಡನೇ ಮನೆಯಲ್ಲಿ ಆತನ ಸಂಚಾರ ಆಗುತ್ತಿರುವುದರಿಂದ ಜಾತಕದಲ್ಲಿ ನೋಡುವುದಾದರೆ ಈ ಎರಡನೇ ಮನೆಯನ್ನು ವ್ಯಕ್ತಿಯ ಸಂಪತ್ತು ಹಾಗೂ ಕುಟುಂಬದ ಬಗ್ಗೆ ನೋಡ ಬೇಕಾದರೆ ಜಾತಕದಲ್ಲಿ ಎರಡನೇ ಮನೆಯನ್ನು ನೋಡಲಾಗುತ್ತದೆ. ಇವರಿಗೆ ಯಾವುದೇ ರೀತಿಯಾದಂತಹ ಹಣಕಾಸಿನ ತೊಂದರೆ ಇರುವುದಿಲ್ಲ. ಆದರೆ ನಿಮ್ಮ ಕುಟುಂಬದ ನಡುವೆ ಮನೆ ಸದಸ್ಯರಲ್ಲಿ ವಾದ ವಿವಾದ ಜಗಳಗಳು ಆಗುವಂತಹ ಸನ್ನಿವೇಶಗಳು ಎದುರಾಗುತ್ತದೆ.
ಇದರ ಜೊತೆ ನೀವು ಕೆಲಸ ಮಾಡುವಂತಹ ಸ್ಥಳದಲ್ಲಿ ನಿಮ್ಮ ಮೇಲಧಿ ಕಾರಿಗಳು ನಿಮ್ಮ ಮೇಲೆ ಜಗಳ ಮಾಡುವಂತಹ ಸನ್ನಿವೇಶ ಬರುತ್ತದೆ. ಅವರು ನಿಮ್ಮ ಒಂದು ಕೆಲಸಕ್ಕೆ ಸರಿಯಾದ ಮಾನ್ಯತೆಯನ್ನು ಕೊಡುವು ದಿಲ್ಲ ಎನ್ನುವ ಕಾರಣಕ್ಕಾಗಿ ನೀವು ಕೆಲವೊಮ್ಮೆ ವಾದ ವಿವಾದಕ್ಕೆ ಇಳಿಯುವಂತಹ ಸಾಧ್ಯತೆ ಕೂಡ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.