ಗುರು ರಾಹು ಸಂಧಿ ರಾಶಿ ಫಲ ಇದು ರೋಗ ನಿವಾರಿಣಿ ಕೂಡ..12 ರಾಶಿಗಳಿಗೆ ಹೇಗಿರಲಿದೆ ಗೊತ್ತಾ ಅದೃಷ್ಟ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

2023 ಮೇ ಗುರು ರಾಹು ಸಂಧಿ ರಾಶಿ ಫಲ – ಇದು ರೋಗ ನಿವಾರಣೆ ಕೂಡ…….||

ಇದೇ ತಿಂಗಳು ಅಂದರೆ ಮೇ 27ನೇ ತಾರೀಖು ಶನಿವಾರ ಸಂಜೆ 7 ಗಂಟೆ 32 ನಿಮಿಷಕ್ಕೆ ಮೇಷ ರಾಶಿಯಲ್ಲಿ ಗುರು ಮತ್ತು ರಾಹುವಿನ ಸಂಧಿ ಉಂಟಾಗುತ್ತದೆ. ಹಾಗೆಯೇ ಮೇಷ ರಾಶಿಯ ಅಧಿಪತಿ ಕುಜ ಆಗುತ್ತಾನೆ. ಕರ್ಕಾಟಕ ರಾಶಿಯಲ್ಲಿ ನೀಚ ರಾಶಿಯಲ್ಲಿ ಇರುತ್ತಾನೆ ಈ ಒಂದು ಸಂಧಿ ನಡೆದಾಗ.

ಕುಜ ಕರ್ಕಾಟಕ ರಾಶಿಯಲ್ಲಿ ಜೂನ್ 28 ನೇ ತಾರೀಖಿನವರೆಗೂ ಇರುತ್ತಾನೆ. ಹಾಗಾದರೆ ಈ ಒಂದು ಸಂಧಿಯಲ್ಲಿ ಏನು ವಿಶೇಷತೆ ಎಂದು ನೀವು ಕೇಳಬಹುದು. ಜೂನ್ 27ನೇ ತಾರೀಖು ಗುರು 15 ಡಿಗ್ರಿಯಲ್ಲಿ ಇರುತ್ತಾನೆ ಹಾಗೆಯೇ ರಾಹು 8 ಡಿಗ್ರಿಯಲ್ಲಿ ಮೇಷ ರಾಶಿಯಲ್ಲಿ ಇರುತ್ತಾನೆ. ಒಟ್ಟಾರೆಯಾಗಿ ಮೇ 27 ನೇ ತಾರೀಖಿನಿಂದ ಜೂನ್ 28ನೇ ತಾರೀಖಿನವರೆಗೆ.

ಈ ಗುರು ಮತ್ತು ರಾಹುವಿನ ಸಂಧಿಯ ಪರಿಣಾಮ ಇರುತ್ತದೆ ಎಂದು ತಿಳಿಯಬಹುದು. ಜ್ಯೋತಿಷ್ಯ ಶಾಸ್ತ್ರದಲ್ಲಿ ಇದಕ್ಕೆ ಬಹಳ ಮಹತ್ವ ಇದೆ ಎಂದೇ ಹೇಳಬಹುದು. ಯಾಕೆ ಎಂದರೆ ಈ ಎರಡು ಗ್ರಹಗಳ ಸಮ್ಮಿಲನಕ್ಕೆ ಶಪಿತ ಯೋಗ ಅಥವಾ ಧರ್ಮ ವಿಷ ಯೋಗ ಎಂದು ಹೆಸರು ಬರುತ್ತದೆ. ಸಾಧಾರಣವಾಗಿ ಈ ಯೋಗ ಉಂಟಾದಾಗ

ಪ್ರಪಂಚಕ್ಕೆ ಸಂಬಂಧಪಟ್ಟ ಹಾಗೆ ಧರ್ಮ ಕಡಿಮೆಯಾಗುತ್ತದೆ ಏಕೆಂದರೆ ಗುರುವಿಗೆ ನಾವು ಧರ್ಮಕಾರಕ ಎಂದು ಕರೆಯುತ್ತೇವೆ. ಮನುಷ್ಯನ ಮನಸ್ಸು ಅಧರ್ಮದ ಕಡೆಗೆ ಸಾಗುತ್ತಿರುತ್ತದೆ ಎಂದು ಸ್ಪಷ್ಟವಾಗಿ ಆಧಾ ರಿತ ಗ್ರಂಥಗಳು ನಮಗೆ ತಿಳಿಸುತ್ತದೆ. ಮನುಷ್ಯ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡು ಇನ್ನಷ್ಟು ಕಷ್ಟದ ಪರಿಸ್ಥಿತಿಗಳಿಗೆ ಗುರಿಯಾಗುತ್ತಾನೆ. ಹಾಗಾದರೆ ಇದರ ಒಂದು ಪರಿಣಾಮ ರಾಶಿ ಚಕ್ರದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂದು ಈ ಕೆಳಗೆ ತಿಳಿಯೋಣ.

ಮೊದಲನೆಯದಾಗಿ ಮೇಷ ರಾಶಿ ಈ ರಾಶಿಯ ಜನರಿಗೆ ಈ ಒಂದು ತಿಂಗಳು ಮನೆಯಲ್ಲಿ ಹಾಗೂ ಅವರು ವೃತ್ತಿ ಮಾಡುವಂತಹ ಸ್ಥಳದಲ್ಲಿ ಉತ್ತಮವಾದ ಏಳಿಗೆಯನ್ನು ಕಾಣಬಹುದು. ಮನೆ ಬದಲಾವಣೆ ಸಹ ಸಾಧ್ಯ. ಈ ರಾಶಿಯಲ್ಲಿರುವಂತಹ ಗರ್ಭಿಣಿಯರು ಆದಷ್ಟು ಎಚ್ಚರಿಕೆ ಯನ್ನು ವಹಿಸಬೇಕಾಗುತ್ತದೆ. ಎರಡನೆಯದಾಗಿ ವೃಷಭ ರಾಶಿ ಈ ರಾಶಿಯವರಿಗೆ ಸಣ್ಣ ಪುಟ್ಟ ವ್ಯಾಜ್ಯಗಳು ಕಾಣಿಸಿಕೊಳ್ಳುವುದು.

ಹತ್ತಿರದ ಸಂಬಂಧಿಗಳು ದೂರ ಆಗುವ ಸನ್ನಿವೇಶಗಳು ಸಹ ಬರುತ್ತದೆ. ಇವರು ಎಷ್ಟೇ ಕಷ್ಟ ಪಟ್ಟರೂ ನೌಕರಿ ಸಿಗುವಂತದ್ದು ಕಷ್ಟ. ಇವರು ಯಾರನ್ನೂ ಸಹ ವಿರುದ್ಧವಾಗಿ ಎದುರು ಹಾಕಿಕೊಳ್ಳಬಾರದು ಎಲ್ಲ ರೊಂದಿಗೂ ಸಮಾನಾಂತರವಾಗಿ ತಾಳ್ಮೆಯಿಂದ ಇರುವ ಹಾಗೆ ವರ್ತಿಸ ಬೇಕಾಗುತ್ತದೆ. ಇಲ್ಲವಾದರೆ ನಿಮಗೆ ತೊಂದರೆಗಳು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *