ಹಳೆಯ ಚಪ್ಪಲಿಗಳನ್ನು ಶೂಗಳನ್ನು ಇಲ್ಲಿ ಇಡಿ ಸಾಕು ಕಷ್ಟಗಳು ಮಂಜಿನಂತೆ ಕರಗುತ್ತೆ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಹಳೆಯ ಚಪ್ಪಲಿಗಳನ್ನು ಶೂಗಳನ್ನು ಇಲ್ಲಿ ಬಚ್ಚಿಡಿ ಕಷ್ಟ ಕರಗುತ್ತವೆ….!!

ಜ್ಯೋತಿಷ್ಯದ ಪ್ರಕಾರ ವ್ಯಕ್ತಿಯ ಜೀವನದಲ್ಲಿ ನಡೆಯುವಂತಹ ಪ್ರತಿ ಯೊಂದು ಘಟನೆಯು ದೈನಂದಿನ ಚಟುವಟಿಕೆಗಳು ಆಗುಹೋಗುಗಳು ನಿರ್ದಿಷ್ಟ ಗ್ರಹಗಳು ಮತ್ತು ನಕ್ಷತ್ರಗಳಿಗೆ ಸಂಬಂಧಪಟ್ಟಿರುತ್ತದೆ. ಅಲ್ಲದೆ ಈ ಚಪ್ಪಲಿಯ ಮೇಲು ಅದೃಷ್ಟ ಮತ್ತು ನತದೃಷ್ಟಗಳನ್ನು ತಾಳೆ ಹಾಕಬಹುದು. ನಾವು ಕಾರ್ಯನಿರ್ವಹಿಸುವಂತಹ ಜಾಗದಲ್ಲಿ ಸದಾ ಚಪ್ಪಲಿಯನ್ನು ಧರಿಸಿಕೊಂಡಿರುವುದರಿಂದ ಕೆಲಸಕ್ಕೆ ಹೋಗುವಾಗ ಧರಿಸುವಂತಹ ಚಪ್ಪಲಿ.

ಅದರ ಬಣ್ಣ ಅದರ ಗುಣಮಟ್ಟ ಎಲ್ಲವೂ ನಮ್ಮ ಜಾತಕದ ಮೇಲೆ ಪ್ರಭಾವ ಬೀರುತ್ತದೆ. ಇದರ ಜೊತೆಗೆ ನಮ್ಮ ಚಪ್ಪಲಿ ಶನಿ ಗ್ರಹದೊಂದಿಗೆ ಸಂಪರ್ಕ ಹೊಂದಿರುತ್ತದೆ. ಯಾರು ಶನಿ ದೋಷದಿಂದ ಬಳಲುತ್ತಿರು ತ್ತಾರೋ ಅವರು ಚಪ್ಪಲಿಯನ್ನು ದಾನ ಮಾಡುವುದು ತುಂಬಾ ಒಳ್ಳೆ ಯದು ಅಂತ ಹೇಳಲಾಗುತ್ತದೆ. ಹಾಗಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶೂಗಳಿಗೆ ಸಂಬಂಧಿಸಿದ ಕೆಲವು ವಿಷಯಗಳ ಬಗ್ಗೆ ಕಾಳಜಿಯನ್ನು ವಹಿಸಿದರೆ ಅದು ನಿಮ್ಮ ಅದೃಷ್ಟವನ್ನು ಹೆಚ್ಚಿಸಬಹುದು.

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಈಶಾನ್ಯ ದಿಕ್ಕಿನಲ್ಲಿ ಸ್ಲಿಪ್ಪರ್ ಸ್ಟ್ಯಾಂಡ್ ಇಡಬಾರದು. ಈ ದಿಕ್ಕಿನಲ್ಲಿ ಸೂರ್ಯನ ಮೊದಲ ಕಿರಣಗಳು ಬೀಳುತ್ತದೆ ಮನೆಯಲ್ಲಿ ಧನಾತ್ಮಕ ಶಕ್ತಿ ಆಗಮಿಸುವಂತಹ ಸ್ಥಳದಲ್ಲಿ ಚಪ್ಪಲಿ ಇರಬಾರದು. ಹೀಗೆ ಮಾಡುವುದರಿಂದ ಮನೆಯಲ್ಲಿ ಸಮಸ್ಯೆ ಗಳು ಉಂಟಾಗುತ್ತದೆ. ಮಲಗುವ ಕೋಣೆಯಲ್ಲಿ ಚಪ್ಪಲಿಗಳನ್ನು ಇಡಬಾರದು ಅನ್ನುವುದನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಿ.

ಈ ರೀತಿ ಮಾಡೋದ್ರಿಂದ ಗಂಡ ಮತ್ತು ಹೆಂಡತಿಯ ನಡುವೆ ಜಗಳ ಪ್ರಾರಂಭವಾಗುತ್ತದೆ. ಯಾವಾಗಲೂ ಸಹ ಚಪ್ಪಲಿಗಳನ್ನು ವ್ಯವಸ್ಥಿತ ಸ್ಥಳದಲ್ಲಿ ಇಡಬೇಕು. ವಾಸ್ತು ಶಾಸ್ತ್ರದ ಪ್ರಕಾರ ಪಾದರಕ್ಷೆಗಳನ್ನು ಮನೆಯ ನೈರುತ್ಯ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇಡಬೇಕು. ಫ್ಯಾಶನ್ ಯುಗದಲ್ಲಿ ಇಂದಿನ ದಿನಗಳಲ್ಲಿ ಅನೇಕ ಬಣ್ಣದ ಶೂಗಳು ಮತ್ತು ಚಪ್ಪಲಿಗಳು ಬರುವುದಕ್ಕೆ ಪ್ರಾರಂಭಿಸಿದೆ. ಆದರೆ ಯಾವಾಗಲೂ ಹಳದಿ ಬಣ್ಣದ ಶೂಗಳು ಅಥವಾ ಚಪ್ಪಲಿಗಳನ್ನು ಧರಿಸುವುದು ಶುಭವಲ್ಲ.

ಅನ್ನುವುದನ್ನು ನೆನಪಿನಲ್ಲಿಡಿ. ಯಾಕೆ ಎಂದರೆ ಹಳದಿ ಬಣ್ಣವು ಗುರು ಗ್ರಹಕ್ಕೆ ಸಂಬಂಧಿಸಿದೆ. ಹಳದಿ ಬಣ್ಣದ ಶೂಗಳು ಮತ್ತು ಚಪ್ಪಲಿಗಳು ಪಾದಗಳಿಗೆ ಧರಿಸಿದರೆ ಜಾತಕದಲ್ಲಿ ಗುರುವಿನ ಪ್ರಭಾವವು ಅಶುಭವಾಗಿ ಅದರ ಅಶುಭ ಪರಿಣಾಮವು ಸಂತೋಷ ಮತ್ತು ಸಮೃದ್ಧಿಯ ಮೇಲೆ ಬೀಳುತ್ತದೆ. ಉಡುಗೊರೆಯಾಗಿ ಕೊಟ್ಟಂತಹ ಶೂಗಳು ಮತ್ತು ಚಪ್ಪಲಿಗಳನ್ನು ಎಂದಿಗೂ ಧರಿಸಬೇಡಿ.

ಎಷ್ಟೋ ಮನೆ ಮಂದಿ ಒಬ್ಬರಿಗೊಬ್ಬರು ಶೂ ಗಳನ್ನು ಮತ್ತು ಚಪ್ಪಲಿಗಳ ನ್ನು ಉಡುಗೊರೆಯಾಗಿ ಕೊಡುತ್ತಾರೆ. ಆದರೆ ಹೀಗೆ ಮಾಡುವುದರಿಂದ ಕೊಡುವವರಿಗೂ ಹಾಗೂ ಸ್ವೀಕರಿಸುವವರಿಗೂ ಹೆಚ್ಚು ತೊಂದರೆ ಉಂಟು ಮಾಡುತ್ತದೆ ಅಂತ ಹೇಳಲಾಗುತ್ತದೆ. ಹಾಗಾಗಿ ಯಾರಿಗೂ ಸಹ ಪಾದರಕ್ಷೆಗಳನ್ನು ಉಡುಗೊರೆಯಾಗಿ ನೀಡಬೇಡಿ. ಹೀಗೆ ಮಾಡುವುದ ರಿಂದ ಜಾತಕದಲ್ಲಿ ಶನಿಯ ಸ್ಥಾನ ಹದಗೆಡುತ್ತೆ ಮತ್ತು ಶನಿ ದೋಷವನ್ನು ಎದುರಿಸಬೇಕಾಗಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *