ತುಪ್ಪದ ದೀಪ ಮನೆಯಲ್ಲಿ ನಿತ್ಯ ಹಚ್ಚುವುದರಿಂದ ಸಕಲ ಸೌಭಾಗ್ಯ ಪ್ರಾಪ್ತಿಯಾಗುತ್ತದೆ.. ಹೇಗೆ ಹಚ್ಚಬೇಕು ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ತುಪ್ಪದ ದೀಪವನ್ನು ಮನೆಯಲ್ಲಿ ನಿತ್ಯ ಹಚ್ಚುವುದರಿಂದ ಸಕಲ ಸೌಭಾಗ್ಯ ಪ್ರಾಪ್ತಿ, ಲಕ್ಷ್ಮಿವಾಸ…….!!

ಹಿಂದೂ ಧರ್ಮದಲ್ಲಿ ಈ ಒಂದು ತುಪ್ಪದ ದೀಪಕ್ಕೆ ಎಷ್ಟು ದೊಡ್ಡದಾದ ಮಹತ್ವವಾದ ಸ್ಥಾನ ಇದೆ ಎಂದರೆ ಪ್ರತಿನಿತ್ಯ ಯಾರ ಮನೆಯಲ್ಲಿ ಹಸುವಿನ ತುಪ್ಪವನ್ನು ಬಳಸಿ ದೀಪವನ್ನು ಹಚ್ಚಿ ಆ ಒಂದು ದೀಪದ ಬೆಳಕಿನಲ್ಲಿ ದೇವರ ದರ್ಶನವನ್ನು ಪಡೆಯುತ್ತಾರೋ ಅವರು ತಮ್ಮ ಜೀವನದಲ್ಲಿ ಯಾವತ್ತಿಗೂ ಸಹ ಕಷ್ಟವನ್ನು ಅನುಭವಿಸುವುದಿಲ್ಲ ಎಂದೇ ಹೇಳಬಹುದು.

ಅದೇ ರೀತಿಯಾಗಿ ಪ್ರತಿಯೊಬ್ಬರೂ ಸಹ ಪ್ರತಿನಿತ್ಯ ತುಪ್ಪದ ದೀಪವನ್ನು ಹಚ್ಚುವುದರಿಂದ ನಿಮ್ಮ ಮನೆಯಲ್ಲಿ ಸಕಾರಾತ್ಮಕ ಅಂಶ ಹೆಚ್ಚಾಗುತ್ತದೆ ಎಂದೇ ಹೇಳಬಹುದು. ನಿಮ್ಮ ಮನೆಯಲ್ಲಿರುವಂತಹ ನಕಾರಾತ್ಮಕ ಅಂಶ ದೂರವಾಗುತ್ತದೆ ಆದ್ದರಿಂದ ಪ್ರತಿನಿತ್ಯ ಪ್ರತಿಯೊಬ್ಬರು ತುಪ್ಪದ ದೀಪವನ್ನು ಹಚ್ಚುವುದು ಬಹಳ ಶ್ರೇಷ್ಠ ಎಂದೇ ಹೇಳಬಹುದು. ಪುರಾಣದ ಪ್ರಕಾರ ನೋಡುವುದಾದರೆ ದೇವರ ಮುಂದೆ ಒಂದು ತಿಪ್ಪದ ದೀಪವನ್ನು ಹಚ್ಚಿ

ನಿಮ್ಮಲ್ಲಿರುವಂತಹ ಎಲ್ಲಾ ಸಮಸ್ಯೆಗಳು ದೂರವಾಗಲಿ ನಮ್ಮ ಮನೆ ಯಲ್ಲಿ ಸುಖ ಶಾಂತಿ ನೆಮ್ಮದಿ ಹೆಚ್ಚಾಗಲಿ ವ್ಯಾಪಾರ ವ್ಯವಹಾರಗಳಲ್ಲಿ ಅಭಿವೃದ್ಧಿಯಾಗಲಿ ಹೀಗೆ ಯಾವುದೇ ಒಂದು ವಿಷಯವನ್ನು ನೀವು ದೇವರಲ್ಲಿ ಕೇಳಿಕೊಂಡರು ಅವೆಲ್ಲವೂ ಸಹ ನೆರವೇರುತ್ತದೆ ಎಂದೇ ಹೇಳುತ್ತದೆ. ಅದರಲ್ಲೂ ಮನೆಯಲ್ಲಿರುವಂತಹ ಎಲ್ಲಾ ಜನರ ಆರೋಗ್ಯ ದಲ್ಲಿ ಸುಧಾರಣೆ ಉಂಟಾಗುತ್ತದೆ ಕುಟುಂಬದಲ್ಲಿನ ಸದಸ್ಯರಲ್ಲಿ ಪರಸ್ಪರ ಹೊಂದಾಣಿಕೆ ಹೆಚ್ಚಾಗುತ್ತದೆ.

ಮೇಲೆ ಹೇಳಿದಂತೆ ಈ ಒಂದು ತುಪ್ಪದ ದೀಪವನ್ನು ಇಷ್ಟೊಂದು ಶ್ರೇಷ್ಠ ಎಂದು ಏಕೆ ಕರೆಯುತ್ತಾರೆ ಎಂದು ನೋಡುವುದಾದರೆ ತುಪ್ಪಕ್ಕೆ ಅಭಿಮಾನಿ ದೇವತೆಯಾಗಿರುವಂತಹ ಮಹಾಲಕ್ಷ್ಮಿ ಮತ್ತು ಇಂದ್ರ ದೇವರು ಇಬ್ಬರು ಸಹ ಐಶ್ವರ್ಯವನ್ನು ಕೊಡುವಂತವರು ಅದಕ್ಕಾಗಿ ಪ್ರತಿನಿತ್ಯ ಮನೆಯಲ್ಲಿ ತುಪ್ಪದ ದೀಪವನ್ನು ಹಚ್ಚಿದಾಗ ಮನೆಯಲ್ಲಿ ಸೌಭಾಗ್ಯಗಳು ಭಾಗ್ಯಗಳು ಅಭಿವೃದ್ಧಿಯಾಗುತ್ತಾ ಹೋಗುತ್ತದೆ. ಆದ್ದರಿಂದಲೇ ನೀವು ಗಮನಿಸಿರಬಹುದು ಹಲವಾರು ದೇವಾನುದೇವತೆ ದೇವಸ್ಥಾನದಲ್ಲಿ.

ತುಪ್ಪದಿಂದಲೇ ಆರತಿ ತುಪ್ಪದಿಂದ ಅಭಿಷೇಕ ಹೀಗೆ ಪ್ರತಿಯೊಂದು ಉಪಯೋಗಿಸುತ್ತಾರೆ ಅಷ್ಟು ಶ್ರೇಷ್ಠತೆಯನ್ನು ತುಪ್ಪ ಹೊಂದಿದೆ. ಆದರೆ ಕೆಲವೊಂದಷ್ಟು ಜನ ಪ್ರತಿನಿತ್ಯ ತುಪ್ಪದ ದೀಪವನ್ನು ಹಚ್ಚಬಾರದು ಅದನ್ನು ಹಚ್ಚುವುದರಿಂದ ಮನೆಯಲ್ಲಿ ಬಡತನ ಕಷ್ಟಗಳು ಪ್ರಾರಂಭ ವಾಗುತ್ತದೆ ಎಂದು ಹೇಳುತ್ತಿರುತ್ತಾರೆ. ಆದರೆ ಅದು ಕಡ್ಡಾಯವಾಗಿ ತಪ್ಪು ಬದಲಿಗೆ ಮೇಲೆ ಹೇಳಿದಂತಹ ಎಲ್ಲಾ ವಿಷಯಗಳನ್ನು ಗಮನಿಸಿದರೆ ನಿಮಗೆ ತಿಳಿಯುತ್ತದೆ.

ಆದ್ದರಿಂದ ಯಾರೇ ಆಗಲಿ ಯಾವುದೇ ಒಂದು ವಿಚಾರವನ್ನು ನೀವು ಅನುಸರಿಸುತ್ತಿದ್ದೀರಿ ಎಂದರೆ ಅದಕ್ಕೆ ಸಂಬಂಧಿಸಿದ ಹಲವಾರು ಮಾಹಿತಿ ಗಳನ್ನು ತಿಳಿದು ಆನಂತರ ಆ ಒಂದು ವಿಧಾನವನ್ನು ಅನುಸರಿಸುವುದು ಉತ್ತಮವಾಗಿರುತ್ತದೆ. ಬದಲಿಗೆ ಅವರಿವರು ಹೇಳಿದಂತಹ ಮಾತುಗಳನ್ನು ಅನುಸರಿಸುವುದು ಉತ್ತಮವಲ್ಲ. ಆ ಒಂದು ವಿಚಾರ ತಿಳಿದವರ ಬಳಿ ಹೋಗಿ ಅವರಿಂದ ಸಂಪೂರ್ಣ ಮಾಹಿತಿಯನ್ನು ತಿಳಿದು ಆನಂತರ ನಿಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *