ಹಸುವಿಗೆ ಇದನ್ನು ತಿನ್ನಿಸಿ ಸಾಕು ಜನ್ಮಾಂತರದ ಬಡತನ ತಿಂಗಳಿನಲ್ಲಿ ಬಿಟ್ಟು ಹೋಗುತ್ತದೆ.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಹಸುವಿಗೆ ಇದನ್ನು ತಿನ್ನಿಸಿದರೆ ಬಡತನ ತೊಲಗುತ್ತೆ……!!

ಹಿಂದೂ ಸಂಸ್ಕೃತಿಗಳಲ್ಲಿ ಹಸುವಿಗೆ ಪವಿತ್ರ ಸ್ಥಾನವಿದೆ ಹಸುವಿನೊಳಗೆ ಹಲವಾರು ದೇವಾನುದೇವತೆಗಳು ವಾಸಿಸುತ್ತಾರೆ ಎನ್ನುವ ನಂಬಿಕೆ ಇದೆ. ಹಸು ನಮಗೆ ಹಾಲನ್ನು ನೀಡುವುದರಿಂದ ಅದನ್ನು ತಾಯಿಯಂತೆ ನೋಡಲಾಗುತ್ತದೆ ಈ ಕಾರಣದಿಂದಾಗಿ ಭಾರತದಲ್ಲಿ ಹಸುಗಳನ್ನು ಪೂಜಿಸಲಾಗುತ್ತದೆ. ಹಿಂದೂ ಜ್ಯೋತಿಷ್ಯದಲ್ಲಿ ಹಸುವಿಗೆ ನೀಡುವ ಆಹಾರವು ವಿವಿಧ ಸಮಸ್ಯೆಗಳಿಗೆ ಜ್ಯೋತಿಷ್ಯ ಪರಿಹಾರ ಅಂತ ಹೇಳಲಾಗುತ್ತದೆ.

ಹಿಂದೂ ಧರ್ಮದಲ್ಲಿ ಅಮಾವಾಸ್ಯೆಯಂದು ಹಸುವಿಗೆ ಆಹಾರವನ್ನು ನೀಡುವುದು ಮತ್ತು ಹಸುವಿಗೆ ಬೆಲ್ಲವನ್ನು ನೀಡುವುದು ಆಚರಣೆಯಲ್ಲಿ ಇದೆ. ಯಾಕೆ ಎಂದರೆ ಇದು ಅನೇಕ ಪ್ರಯೋಜನಗಳನ್ನು ತರುತ್ತದೆ ಎನ್ನುವ ನಂಬಿಕೆ ಇದೆ. ಅಲ್ಲದೆ ಹಸುಗಳಿಗೆ ಬಾಳೆಹಣ್ಣನ್ನು ನೀಡುವುದು ಸಹ ಜನಪ್ರಿಯ ಅಭ್ಯಾಸವಾಗಿದೆ. ದೀಪಾವಳಿಯ ಸಮಯದಲ್ಲಿ ಹಸುಗಳನ್ನು ಬಹಳ ಭಕ್ತಿಯಿಂದ ಪೂಜಿಸುತ್ತಾರೆ. ಹಸಿವಿಗೆ ನೀಡುವಂತಹ ಆಹಾರವು ವ್ಯಕ್ತಿಯ ಜಾತಕದಲ್ಲಿನ ಗ್ರಹಗಳ ದುಷ್ಪರಿಣಾಮಗಳನ್ನು ನಿವಾರಿಸುವುದಕ್ಕೆ ಸಹಾಯಮಾಡುತ್ತದೆ ಅಂತ ಹೇಳಲಾಗುತ್ತದೆ.

ಸಾಮಾನ್ಯವಾಗಿ ಹಸಿರು ಹುಲ್ಲು ಮತ್ತು ಸಿಹಿ ಹಿಟ್ಟನ್ನು ಹಸುಗಳಿಗೆ ನೀಡಲಾಗುತ್ತದೆ. ಇದು ನಮ್ಮ ಜೀವನದಲ್ಲಿ ಸಕಾರಾತ್ಮಕತೆಯನ್ನು ತರುತ್ತದೆ ಅಂತ ನಂಬಲಾಗಿದೆ. ಹಸುವನ್ನು ಭೂಮಿ ತಾಯಿಯ ಸಂಕೇತವಾಗಿಯೂ ಸಹ ನೋಡಲಾಗುತ್ತದೆ. ಬೌದ್ಧ ಧರ್ಮದಲ್ಲಿಯೂ ಸಹ ಗೋವುಗಳನ್ನು ಪವಿತ್ರ ಅಂತ ಪರಿಗಣಿಸಲಾಗುತ್ತದೆ. ಮತ್ತು ಪೂಜಿಸಲಾಗುತ್ತದೆ. ಭಗವಂತ ಶ್ರೀ ಕೃಷ್ಣನಿಗೆ ಬಾಲ ಗೋಪಾಲ ಮತ್ತು ಗೋವಿಂದ ಅನ್ನೋ ಹೆಸರುಗಳು ಇದೆ.

ಇದರ ಅರ್ಥ ಗೋವುಗಳ ರಕ್ಷಕ ಮತ್ತು ಅವನು ಗೋಪಾಲಕನಾಗಿದ್ದ ಗೋವನ್ನು ಪೂಜಿಸುವುದು 33 ಪ್ರಮುಖ ಹಿಂದೂ ದೇವತೆಗಳನ್ನು ಪೂಜಿಸುವುದಕ್ಕೆ ಸಮಾನ ಅಂತ ಹೇಳಲಾಗುತ್ತದೆ. ಹಸುಗಳಿಗೆ ಆಹಾರವನ್ನು ನೀಡುವುದರಿಂದ ಆಗುವ ಪ್ರಯೋಜನಗಳು ಸಹ ಅನೇಕ. ಎಲ್ಲಾ ವೈದಿಕ ಗ್ರಂಥಗಳು ಗೋವಿನ ಮಹತ್ವವನ್ನು ಹೇಳುತ್ತದೆ. ಹಸುಗಳಿಗೆ ಸಂಬಂಧಿಸಿದ ಅನೇಕ ಜ್ಯೋತಿಷ್ಯ ಪರಿಹಾರಗಳಿವೆ.

ಈ ಪರಿಹಾರಗಳು ಜಾತಕದಲ್ಲಿನ ಪ್ರತಿಕೂಲ ಗ್ರಹಗಳ ದುಷ್ಪರಿಣಾಮ ಗಳನ್ನು ನಿವಾರಿಸುತ್ತದೆ. ನಿಮ್ಮ ಜಾತಕದಲ್ಲಿ ಸೂರ್ಯನು ಅನುಕೂಲ ವಾಗಿಲ್ಲದಿದ್ದರೆ ಗೋಧಿ ರೊಟ್ಟಿಯನ್ನು ಹಸುಗಳಿಗೆ ನೀಡಿ. ನಿಮ್ಮ ಜಾತಕದಲ್ಲಿ ಚಂದ್ರ ಬಲಹೀನನಾಗಿದ್ದರೆ ಹಸುವನ್ನು ಸಾಕಬೇಕು ಅಥವಾ ಹಸಿವಿಗೆ ಪ್ರತಿನಿತ್ಯ ನೀರನ್ನು ಕೊಡಬೇಕು ಇದು ಚಂದ್ರನ ದುಷ್ಪರಿಣಾಮ ಗಳನ್ನು ಕಡಿಮೆ ಮಾಡುವುದಕ್ಕೆ ಸಹಾಯ ಮಾಡುತ್ತದೆ. ಕುಂಡಲಿಯಲ್ಲಿ ಮಂಗಳ ದುರ್ಬಲನಾಗಿದ್ದರೆ ಮಂಗಳವಾರದ ದಿನದಂದು ಹಸುವಿಗೆ ಬೆಲ್ಲ ಮತ್ತು ಬೇಳೆಯನ್ನು ನೀಡಿ.

ಬುಧ ಗ್ರಹದ ಪ್ರಭಾವವನ್ನು ಸುಧಾರಿಸುವುದಕ್ಕೆ ಬುಧವಾರ ಹಸುಗಳಿಗೆ ಹಸಿರು ಹುಲ್ಲು ಅಥವಾ ಹಸಿರು ಎಲೆಗಳ ತರಕಾರಿಯನ್ನು ನೀಡಬೇಕು. ಗುರು ಗ್ರಹದ ಪ್ರಭಾವವನ್ನು ಸುಧಾರಿಸುವುದಕ್ಕೆ ಗುರುವಾರ ದಿನ ಹಸುಗಳಿಗೆ ಬೆಲ್ಲ ಮತ್ತು ನೆನೆಸಿದ ಕಾಳುಗಳನ್ನು ನೀಡಬೇಕು. ಶುಕ್ರನ ಪ್ರಭಾವವನ್ನು ಸುಧಾರಿಸುವುದಕ್ಕೆ ನಿಮ್ಮ ಆಹಾರದ ಒಂದು ಭಾಗವನ್ನು ಪ್ರತಿ ದಿನ ಹಸುವಿಗೆ ನೀಡಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *