ಕನ್ನಡದ ಕಲಾವಿದರು ಮರಣ ಹೊಂದಿದ ಮೇಲೆ ಬಿಡುಗಡೆಯಾದ ಸಿನಿಮಾಗಳು ಯಾವುವು ಗೊತ್ತಾ ? » Karnataka's Best News Portal

ಕನ್ನಡದ ಕಲಾವಿದರು ಮರಣ ಹೊಂದಿದ ಮೇಲೆ ಬಿಡುಗಡೆಯಾದ ಸಿನಿಮಾಗಳು ಯಾವುವು ಗೊತ್ತಾ ?

ಕಲಾವಿದರು ಮರಣ ಹೊಂದಿದ ಮೇಲೆ ಬಿಡುಗಡೆಯಾದ ಸಿನಿಮಾಗಳು ಯಾವುವು……..||

WhatsApp Group Join Now
Telegram Group Join Now

ನಮ್ಮ ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ಸಾಕಷ್ಟು ಕಲಾವಿದರು ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ರಿಯರಿರುವಾಗಲೇ ಮರಣ ಹೊಂದಿದ್ದು ಅಂತಹ ಕಲಾವಿದರು ಮರಣ ಹೊಂದಿದ ಮೇಲೆ ಸಾಕಷ್ಟು ಸಿನಿಮಾ ಗಳು ಬಿಡುಗಡೆಯಾಗಿದ್ದು. ಹಾಗಾದರೆ ಈ ದಿನ ನಮ್ಮ ಸ್ಯಾಂಡಲ್ ವುಡ್ ಕಲಾವಿದರು ಮರಣ ಹೊಂದಿದ ಮೇಲೆ ಬಿಡುಗಡೆಯಾದ ಸಿನಿಮಾಗಳು ಯಾವುವು?

ಮತ್ತು ಅವರು ನಟಿಸಿದಂತಹ ಕೊನೆಯ ಸಿನಿಮಾ ಯಾವುದು? ಎನ್ನುವುದರ ಬಗ್ಗೆ ಈ ದಿನ ತಿಳಿಯೋಣ. ಟೈಗರ್ ಪ್ರಭಾಕರ್ ಇವರು ಮಾರ್ಚ್ 25 2001 ರಂದು ಮರಣ ಹೊಂದಿದರು ಇವರ ಮರಣದ 6 ತಿಂಗಳ ನಂತರ ಮೈಸೂರು ಹುಲಿ ಎಂಬ ಚಿತ್ರ ಬಿಡುಗಡೆ ಆಯಿತು. ಇದಾಗ 4 ವರ್ಷದ ನಂತರ ರಿಯಲ್ ರೌಡಿ, ಗುಡ್ ಬ್ಯಾಡ್ ಆಗ್ಲಿ ಸಿನಿಮಾಗಳು ಬಿಡುಗಡೆಯಾದವು.

ಅಂಬರೀಶ್, ರೆಬಲ್ ಸ್ಟಾರ್ ಅಂಬರೀಶ್ ಅವರು ನವೆಂಬರ್ 24 2018ರಂದು ಮರಣ ಹೊಂದಿದರು. ಇವರ ಮರಣದ 9 ತಿಂಗಳ ನಂತರ ಆಗಸ್ಟ್ 9 2019 ರಂದು ಕುರುಕ್ಷೇತ್ರ ಸಿನಿಮಾ ಬಿಡುಗಡೆ ಯಾಯಿತು. ಕಾಶಿನಾಥ್, ಕಾಶಿನಾಥ್ ಅವರು ಜನವರಿ 18 2018 ರಂದು ಮರಣ ಹೊಂದಿದರು. ಇವರ ಮರಣದ 4 ತಿಂಗಳ ನಂತರ ಇವರು ಅಭಿನಯಿಸಿದ ಓಳ್ ಮುನಿಸ್ವಾಮಿ ಸಿನಿಮಾ ಮೇ 25 2018 ರಂದು ರಿಲೀಸ್ ಆಯಿತು.

See also  ವರ್ಷ ಮೂವತ್ತಾದರೂ ಮದ್ವೆಗೆ ಹುಡುಗಿ ಸಿಗ್ತಿಲ್ವಾ ಇದು ಭಾರತದ ಯುವಕರ ಅತಿ ದೊಡ್ಡ ಸಮಸ್ಯೆ ಆಗ್ತಿದೆ ಏಕೆ ಗೊತ್ತಾ

ಬುಲೆಟ್ ಪ್ರಕಾಶ್ ಅವರು ಏಪ್ರಿಲ್ 6, 2020 ರಂದು ಮರಣ ಹೊಂದಿದರು. ಇವರ ಮರಣದ 1 ವರ್ಷದ ನಂತರ ಪೊಗರು ಸಿನಿಮಾ ಇನ್ನೆರಡು ವರ್ಷದ ನಂತರ ಗಾಳಿಪಟ 2 ಸಿನಿಮಾ ಬಿಡುಗಡೆಯಾಯಿತು. ಧೀರೇಂದ್ರ ಗೋಪಾಲ್ ಅವರು ಡಿಸೆಂಬರ್ 25 2000 ರಂದು ಮರಣ ಹೊಂದಿದರು. ಇವರ ಮರಣದ 4 ತಿಂಗಳ ನಂತರ

ಏಪ್ರಿಲ್ 1 2001 ರಂದು ಅಂಜಲಿ ಗೀತಾಂಜಲಿ ಸಿನಿಮಾ ಬಿಡುಗಡೆ ಆಯಿತು. ಸೌಂದರ್ಯ ಅವರು ಏಪ್ರಿಲ್ 17 2004 ರಂದು ಮರಣ ಹೊಂದಿದರು. ಇವರ ಮರಣದ 4 ತಿಂಗಳ ನಂತರ ತೆಲುಗಿನಲ್ಲಿ ಶಿವಶಂಕರ್ ಹಾಗೂ ಕನ್ನಡದಲ್ಲಿ ಆಪ್ತಮಿತ್ರ ಸಿನಿಮಾಗಳು ಆಗಸ್ಟ್ 2004ರಲ್ಲಿ ಬಿಡುಗಡೆಯಾದವು. ಇನ್ನು ಇವರ ಮರಣದ 4 ವರ್ಷದ ನಂತರ

ನವಶಕ್ತಿ ವೈಭವ ಸಿನಿಮಾದಲ್ಲಿ ಇವರ ಫೋಟೆಜ್ ಅನ್ನು ಬಳಸಿ ಸಿನಿಮಾವನ್ನು ತಯಾರಿಸಲಾಯಿತು. ಶಂಕರ್ ನಾಗ್ ಕರಾಟೆ ಕಿಂಗ್ ಶಂಕರ್ ನಾಗ್ ಅವರು ಸೆಪ್ಟೆಂಬರ್ 30 1990 ರಂದು ಮರಣ ಹೊಂದಿದರು. ಇವರ ಮರಣದ 2 ತಿಂಗಳ ನಂತರ ನಿಗೂಢ ರಹಸ್ಯ ಸಿನಿಮಾ ಬಿಡುಗಡೆಯಾಗಿದ್ದು 1992ರಲ್ಲಿ ಸುಂದರಕಾಂಡ, ಪ್ರಾಣ ಸ್ನೇಹಿತ ಸಿನಿಮಾ ಬಿಡುಗಡೆಯಾದವು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">