ತ್ಯಾಗರಾಜನಾದ್ರು ಡಿಕೆಶಿ….! ಮುಂದೆ ಸಿಎಂ ಸ್ಥಾನ ಸಿಗುವುದು ಡೌಟ್….! ಎಲ್ಲಾ ಕಡೆಯಿಂದಲೂ ಡಿಕೆಶಿ ಲಾಕ್…….! ಬಂಡೆಗೆ ಅನ್ಯಾಯ…..!!
ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಎಲ್ಲರೂ ಅಂದುಕೊಂಡಂತೆ ಈ ಬಾರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನವನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಈ ಬಾರಿ ಕಾಂಗ್ರೆಸ್ ಪಕ್ಷ ಗೆದ್ದರೆ ನಾನು ಯಾವುದೇ ಕಾರಣಕ್ಕೂ ಕೂಡ ಸಿಎಂ ಸ್ಥಾನವನ್ನು ಬಿಟ್ಟು ಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.
ಸ್ವತಹ ಕಾಂಗ್ರೆಸ್ ಹೈಕಮಾಂಡ್ ಕೂಡ ಡಿಕೆಶಿ ಅವರು ಈ ಒಂದು ಸ್ಥಾನಕ್ಕಾಗಿ ಇಷ್ಟೊಂದು ಪಟ್ಟು ಹಿಡಿಯುತ್ತಾರೆ ಎಂದು ಊಹಿಸಿರಲಿಲ್ಲ. ಆದರೆ ಅಧಿಕಾರಕ್ಕೆ ಬರುತ್ತಿದ್ದಂತೆ ಡಿಕೆಶಿ ಅವರ ಮನಸ್ಸನ್ನು ಸರಿಪಡಿಸಬಹುದು ಎಂದುಕೊಂಡಿತ್ತು. ಅದೇ ರೀತಿಯಾಗಿ ಅಂದುಕೊಂಡಂತೆ ಯಶಸ್ವಿಯಾಗಿದ್ದಾರೆ ಆದರೆ ಡಿಕೆಶಿ ಅವರು ತಮ್ಮ ನಿರೀಕ್ಷೆಗೂ ಮೀರಿ ಪಟ್ಟನ್ನು ಹಿಡಿದಿದ್ದರು.
ಆದರೆ ಡಿಕೆಶಿ ಅವರು ಕೊನೆಗೂ ತ್ಯಾಗರಾಜರಾಗಿದ್ದಾರೆ.ಈ ಒಂದು ಸಿಎಂ ಸ್ಥಾನವನ್ನು ಬೇರೆ ಯಾರಿಗೂ ಕೊಡುವುದಿಲ್ಲ ಎನ್ನುವಂತಹ ಮಾತನ್ನು ಮುರಿದಿದ್ದಾರೆ ಬದಲಿಗೆ ಸಿದ್ದರಾಮಯ್ಯ ಅವರಿಗೆ ಈ ಒಂದು ಸ್ಥಾನವನ್ನು ಕೊಟ್ಟಿದ್ದಾರೆ. ಈ ಒಂದು ವಿಚಾರ ಡಿಕೆಶಿ ಅವರಿಗೆ ಹಾಗೂ ಅವರ ಆಪ್ತ ಸ್ನೇಹಿತರಿಗೆ ಅವರ ಬಂಧು ಮಿತ್ರರಿಗೆ ಎಲ್ಲರಿಗೂ ಸಹ ಬೇಸರದ ಸಂಗತಿಯಾಗಿದೆ ಎಂದೇ ಹೇಳಬಹುದು.
ಆದರೆ ಈಗ ಡಿಕೆಶಿ ಅವರು ಸಿಎಂ ಸ್ಥಾನವನ್ನು ಸಿದ್ದರಾಮಯ್ಯ ಅವರಿಗೆ ಬಿಟ್ಟುಕೊಟ್ಟು ಡಿಸಿಎಂ ಸ್ಥಾನವನ್ನು ಅಂದರೆ ಉಪಮುಖ್ಯಮಂತ್ರಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಡಿಕೆಶಿ ಅವರಿಗೆ ಈ ಒಂದು ಸಿಎಂ ಸ್ಥಾನ ಎಷ್ಟು ಅನಿವಾರ್ಯವಾಗಿತ್ತು, ಆದರೆ ಈಗ ಅವರು ಆ ಒಂದು ಸ್ಥಾನವನ್ನು ಬಿಟ್ಟುಕೊಟ್ಟಿದ್ದಾರೆ ಇದರಿಂದ ಅವರಿಗೆ ಮುಂದೆ ಏನೆಲ್ಲಾ ತೊಂದರೆ ಉಂಟಾಗಬಹುದು, ಹೀಗೆ ಈ ಎಲ್ಲಾ ವಿಚಾರವಾಗಿ ರಾಜಕೀಯ ವಲಯದಲ್ಲಿ ಕೆಲವೊಂದಷ್ಟು ಚರ್ಚೆಗಳು ಶುರುವಾಗಿದೆ.
ಹಾಗೆಂದ ಮಾತ್ರಕ್ಕೆ ಸಿದ್ದರಾಮಯ್ಯ ಅವರನ್ನು ಅಷ್ಟೊಂದು ಸುಲಭವಾಗಿ ಕಡೆಗಣಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಏಕೆಂದರೆ ಸಿದ್ದರಾಮಯ್ಯ ಅವರು ಮೇಲ್ನೋಟಕ್ಕೆ ತುಂಬಾ ಮೃದುವಾಗಿ ರಾಜಕೀಯವಾಗಿ ಕಾಣಿಸುತ್ತಾರೆ. ಅಂದರೆ ಸಿದ್ದರಾಮಯ್ಯ ಅವರು ಯಾವುದೇ ರೀತಿಯ ತಂತ್ರಗಾರಿಕೆಯನ್ನು ಮಾಡುವುದಿಲ್ಲ ಅವರ ಮೇಲೆ ಯಾವುದೇ ರೀತಿಯಾದಂತಹ ಆರೋಪಗಳು ಇಲ್ಲ ಅವರು ನೇರ ಸ್ವಭಾವದವರು ಎಂದು ಹೆಚ್ಚಿನ ತಿಳಿದುಕೊಂಡಿದ್ದಾರೆ.
ಆದರೆ ಅಸಲಿಗೆ ಅವರು ಆ ರೀತಿ ಇಲ್ಲ ಬದಲಿಗೆ ಅವರು ಕೊಡುವಂತಹ ಒಳ ಏಟು ಇದೆಯಲ್ಲ ಅದು ಯಾರೂ ಕೂಡ ನಿರೀಕ್ಷಿಸುವುದಕ್ಕೂ ಸಾಧ್ಯವಾಗುವುದಿಲ್ಲ. ರಾಜಕೀಯವಾಗಿ ಬಹಳ ಚದುರಂಗದ ಆಟವನ್ನು ಆಡುವವರು ಸಿದ್ದರಾಮಯ್ಯ ಅವರು ಎಂದು ಹೇಳಿದರೆ ತಪ್ಪಾಗುವು ದಿಲ್ಲ. ಅದೇ ರೀತಿಯಾಗಿ ಈ ಒಂದು ಸಿಎಂ ಸ್ಥಾನ ವಿಚಾರವಾಗಿ 30 ತಿಂಗಳು ಸಿದ್ದರಾಮಯ್ಯ ಹಾಗೂ 30 ತಿಂಗಳು ಡಿಕೆಶಿ ಆಗುತ್ತಾರೆ ಎಂಬ ಒಳ ಚರ್ಚೆ ಪ್ರಾರಂಭವಾಗಿದೆ ಆದರೆ ಇದು ಎಷ್ಟರಮಟ್ಟಿಗೆ ನಿಜ ಸುಳ್ಳು ಯಾರಿಗೂ ತಿಳಿದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಪೂರ್ಣವಾಗಿ ವೀಕ್ಷಿಸಿ.