ಸರ್ಕಾರಿ ಬಸ್ ನಲ್ಲಿ ಓಡಾಡುವ ಮಹಿಳೆಯರಿಗೆ ಉಚಿತ ಬಸ್ ಪಾಸ್…!
ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದಿದ್ದು ಈ ಬಾರಿ ಬಿಜೆಪಿ ಪಕ್ಷ ಹಾಗೂ ಜೆಡಿಎಸ್ ಪಕ್ಷವನ್ನು ಹಿಂದೆ ಹಾಕಿ ಕಾಂಗ್ರೆಸ್ ಪಕ್ಷ ಮೇಲೆ ಬಂದು ಈ ಬಾರಿ ಸಿಎಂ ಆಗಿ ಸಿದ್ದರಾಮಯ್ಯ ಆಯ್ಕೆಯಾಗಿದ್ದಾರೆ. ಹಾಗೂ ಡಿಸಿಎಂ ಆಗಿ ಡಿಕೆ ಶಿವಕುಮಾರ್ ಅವರು ಆಯ್ಕೆಯಾಗಿದ್ದಾರೆ. ಈ ಒಂದು ಸಿಎಂ ಸ್ಥಾನಕ್ಕೆ ಬರುವುದಕ್ಕೂ ಮುಂಚೆ ನಮ್ಮ ಪಕ್ಷ ಏನಾದರೂ ಈ ಬಾರಿ ಬಂದರೆ ನಾವು ಜನರಿಗೆ.
ಯಾವ ಇದು ಗ್ಯಾರಂಟಿಗಳನ್ನು ಕೊಟ್ಟಿದ್ದೆವೋ ಅವೆಲ್ಲವನ್ನೂ ಸಹ ನಾವು ಸಂಪೂರ್ಣವಾಗಿ ನಿಭಾಯಿಸುತ್ತೇವೆ ಅದು ಜನರಿಗೆ ಅನುಕೂಲ ವಾಗುವಂತೆ ಅತಿ ಶೀಘ್ರದಲ್ಲಿಯೇ ಈ ಎಲ್ಲಾ ಗ್ಯಾರಂಟಿಗಳು ಜನರಿಗೆ ದೊರಕುವ ಹಾಗೆ ನಾವು ಮಾಡುತ್ತೇವೆ ಎನ್ನುವಂತಹ ಮಾತನ್ನು ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಅದೇ ರೀತಿಯಾಗಿ ಈಗ ಈ ಒಂದು ವಿಚಾರವಾಗಿ ಪ್ರೆಸ್ ಮೀಟ್ ನಡೆದಿದ್ದು.
ಈ ಸಂದರ್ಭದಲ್ಲಿ ಯಾವ ಮಹಿಳೆಯರಿಗೆ ಉಚಿತವಾಗಿ ಬಸ್ ನಲ್ಲಿ ಪ್ರಯಾಣ ಮಾಡುವುದಕ್ಕೆ ಅವಕಾಶಗಳು ಇರುತ್ತದೆ? ಯಾರಿಗೆಲ್ಲ ಸಿಗುತ್ತದೆ ಈ ಒಂದು ಅವಕಾಶ? ಯಾರಿಗೆ ಸಿಗುವುದಿಲ್ಲ? ಹೀಗೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವೊಂದುಷ್ಟು ಮಾಹಿತಿಗಳನ್ನು ಸಿದ್ದರಾಮಯ್ಯ ಅವರು ಹೇಳಿದ್ದಾರೆ ಅದು ಏನು ಎಂದರೆ. ಈ ಒಂದು ಯೋಜನೆಯ ಪ್ರಯೋಜನನ್ನು ಪಡೆದುಕೊಳ್ಳುವಂತಹ ಮಹಿಳೆ ನಮ್ಮ ಕರ್ನಾಟಕದ ಮಹಿಳೆಯಾಗಿರಬೇಕು, ಬೇರೆ ಪಕ್ಕದ ರಾಜ್ಯದವರಿಗೆ ಯಾವುದೇ ಜನರಿಗೂ ಈ ಅವಕಾಶ ಇರುವುದಿಲ್ಲ.
ಹಾಗೂ ಎಲ್ಲಾ ಸರ್ಕಾರಿ ಬಸ್ ಗಳಲ್ಲಿಯೂ ಸಹ ಉಚಿತವಾಗಿ ಮಹಿಳೆ ಯರು ಪ್ರಯಾಣಿಸಬಹುದು ಎನ್ನುವಂತಹ ಮಾಹಿತಿಯನ್ನು ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಅದೇ ರೀತಿಯಾಗಿ ಈ ಒಂದು ಸಂದರ್ಭದಲ್ಲಿ ಮೀಡಿಯಾದವರು ಸಿದ್ದರಾಮಯ್ಯ ಅವರಿಗೆ ಕೆಲವೊಂದಷ್ಟು ವಿಷಯವನ್ನು ಕೇಳುತ್ತಾರೆ ಅದು ಏನೆಂದರೆ. ಎಸಿ ಬಸ್ ಅಂದರೆ ಐರಾವತ ಹೀಗೆ ಲೆಕ್ಷುರಿ ಬಸ್ ಗಳಲ್ಲಿಯೂ ಸಹ ಮಹಿಳೆಯರಿಗೆ ಉಚಿತವಾಗಿ ಓಡಾಡುವ ಅವಕಾಶ ಇರುತ್ತದ ಎಂದು ಕೇಳಿದರು.
ಆಗ ಇಲ್ಲ ಯಾವುದೇ ರೀತಿಯ ಲೆಕ್ಷುರಿ ಬಸ್ ಗಳಲ್ಲಿ ಉಚಿತವಾದ ಪ್ರಯಾಣ ಇಲ್ಲ ಬದಲಿಗೆ ಉಳಿದ ಎಲ್ಲಾ ಬಸ್ ಗಳಲ್ಲಿಯೂ ಸಹ ಉಚಿತವಾಗಿ ಅವರಿಗೆ ಪ್ರಯಾಣಿಸುವಂತಹ ಅವಕಾಶವನ್ನು ನೀಡಿದ್ದೇವೆ ಎಂದು ಹೇಳಿದ್ದಾರೆ. ಹಾಗಾದರೆ ಈ ಒಂದು ಸೌಲಭ್ಯ ಯಾವ ತಿಂಗಳಿನಿಂದ ಜಾರಿಗೆ ಬರುತ್ತದೆ ಎಂದು ಮುಂದಿನ ದಿನಗಳಲ್ಲಿ ನಾವು ಅಂದರೆ ಆದಷ್ಟು ಬೇಗ ಆದೇಶವನ್ನು ಹೊರಡಿಸುತ್ತೇವೆ.
ಅದರಲ್ಲೂ ಇನ್ನೇನು ಕೆಲವೇ ದಿನಗಳಲ್ಲಿ ಮುಂದಿನ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ನಾವು ಈ ಐದು ವಿಚಾರವಾಗಿ ಕೆಲವೊಂದಷ್ಟು ಮಾಹಿತಿಗಳನ್ನು ಚರ್ಚೆ ಮಾಡಿ ನಿಮ್ಮೆಲ್ಲರಿಗೂ ಸಹ ಹಲವಾರು ವಿಚಾರ ಗಳನ್ನು ತಿಳಿಸುತ್ತೇವೆ ಎನ್ನುವಂತಹ ವಿಷಯವನ್ನು ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.