ಹಳೆ ಬಾಟಲಿ ಮುಚ್ಚಳದಿಂದ ಇಷ್ಟು ದೊಡ್ಡ ಕೆಲಸ ಸುಲಭ ಆಗುತ್ತೆ ಅಂತ ಗೊತ್ತೇ ಇರಲಿಲ್ಲ……!!
ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಹಾಸಿಗೆಯ ಮೇಲೆ ಇರುವಂತಹ ಬೆಡ್ ಶೀಟ್ ಅನ್ನು ಸ್ವಚ್ಛವಾಗಿ ಇಡುವುದು ಬಹಳ ಮುಖ್ಯವಾಗಿರುತ್ತದೆ ಅದರಲ್ಲೂ ಹೆಚ್ಚಿನ ಜನ ಈ ಒಂದು ಕೆಲಸವನ್ನು ಮಾಡುವುದಕ್ಕೆ ಹಿಂಜರಿಯುತ್ತಾರೆ ಅಂದರೆ ಯಾವುದೇ ಕೆಲಸವನ್ನು ಮಾಡುತ್ತಾರೆ ಆದರೆ ಹಾಸಿಗೆಯ ಮೇಲೆ ಇರುವಂತಹ ಬೆಡ್ ಶೀಟ್ ಕವರ್ ಮಾತ್ರ ಯಾರು ಕೂಡ ಸರಿಯಾಗಿ ಹಾಕುವುದಿಲ್ಲ.
ಅದು ದೊಡ್ಡ ಕೆಲಸವೇ ಎಂಬಂತೆ ನೋಡುತ್ತಿರುತ್ತಾರೆ. ಅದರಲ್ಲೂ ಈ ಒಂದು ಕೆಲಸವನ್ನು ಪ್ರತಿಯೊಬ್ಬರು ಮಾಡಲಿ ಎಂದೇ ಅವರ ಮನೆಯಲ್ಲಿರುವಂತಹ ತಂದೆ ತಾಯಿಗಳು ಮಕ್ಕಳಿಗೆ ಬುದ್ಧಿ ಮಾತನ್ನು ಹೇಳುತ್ತಿರುತ್ತಾರೆ. ಆದರೆ ಎಷ್ಟೇ ಹೇಳಿಕೊಟ್ಟರು ಅವರು ಒಮ್ಮೆ ಮಾಡಿದರೆ ಮತ್ತೊಮ್ಮೆ ಮಾಡುವುದೇ ಇಲ್ಲ.

ಆದರೆ ಇನ್ನು ಮುಂದೆ ಆ ರೀತಿ ಆಗುವುದಿಲ್ಲ ಬದಲಿಗೆ ಸಮಯ ಸಿಕ್ಕಾಗ ಅದನ್ನು ಸರಿಪಡಿಸಿಕೊಳ್ಳಬಹುದು ಅಂದರೆ ಸ್ವಚ್ಛ ಮಾಡಿಕೊಳ್ಳಬಹುದಾ ಗಿದೆ. ಮೊದಲಿಗೆ ಈಗ ನಾವು ಹೇಳುವಂತಹ ಈ ಒಂದು ವಿಧಾನವನ್ನು ಅನುಸರಿಸುವುದರಿಂದ ಹಾಸಿಗೆಯ ಮೇಲೆ ಇರುವಂತಹ ಕವರ್ ಹಾಳಾಗುವುದಿಲ್ಲ ಹಾಗಾದರೆ ಅದನ್ನು ಹೇಗೆ ಸರಿಪಡಿಸುವುದು ಯಾವ ಒಂದು ಸುಲಭ ವಿಧಾನವನ್ನು ಅನುಸರಿಸುವುದರಿಂದ ಈ ಒಂದು ಕೆಲಸವನ್ನು ಕಡಿಮೆ ಮಾಡಿಕೊಳ್ಳಬಹುದು ಎನ್ನುವುದರ ಬಗ್ಗೆ ಈ ದಿನ ತಿಳಿಯೋಣ.
ಹೌದು ಮನೆಎಂದ ಮೇಲೆ ಹಾಸಿಗೆ ಮೇಲೆ ಹಾಕುವಂತಹ ಬೆಡ್ ಶೀಟ್ ದಿಂಬಿನ ಕವರ್ ಇವೆಲ್ಲವನ್ನೂ ಸಹ ಪದೇಪದೇ ಸ್ವಚ್ಛ ಮಾಡಿಕೊಳ್ಳುತ್ತಿರ ಬೇಕು ಅದರಲ್ಲೂ ಮಕ್ಕಳಿರುವಂತಹ ಮನೆಯಲ್ಲಂತೂ ಇದು ಪ್ರತಿನಿತ್ಯ ನಾಲ್ಕರಿಂದ ಐದು ಬಾರಿ ಮಾಡುವಂತಹ ಕೆಲಸವೇ ಆಗಿರುತ್ತದೆ. ಹೌದು ಹಾಗಾದರೆ ಇನ್ನು ಮುಂದೆ ಈ ರೀತಿಯ ಸಮಸ್ಯೆ ಇರುವುದಿಲ್ಲ.
ಬದಲಿಗೆ ನಾಲ್ಕು ವಾಟರ್ ಬಾಟಲ್ ಮುಚ್ಚಳ ಇದ್ದರೆ ಸಾಕು ನಿಮ್ಮ ಈ ಕೆಲಸ ಕಡಿಮೆಯಾಗುತ್ತದೆ. ಹಾಗಾದರೆ ಅದನ್ನು ಹೇಗೆ ಮಾಡುವುದು ಎಂದು ಈ ಕೆಳಗೆ ತಿಳಿಯೋಣ. ನಾಲ್ಕು ವಾಟರ್ ಬಾಟಲ್ ಮುಚ್ಚಳ ವನ್ನು ತೆಗೆದುಕೊಂಡು ಅದನ್ನು ನಿಮ್ಮ ಬೆಡ್ ಶೀಟ್ ತುದಿಯ ಭಾಗಕ್ಕೆ ಹಾಕಿ ಅದರ ಮೇಲ್ಭಾಗದಿಂದ ಒಂದು ರಬ್ಬರ್ ಬ್ಯಾಂಡ್ ಹಾಕಿ ಹಾಸಿಗೆಯ ಕೆಳಗೆ ಹಾಕಬೇಕು ಈ ರೀತಿ ನಾಲ್ಕು ಮೂಲೆಯಲ್ಲಿಯೂ ಸಹ ಹಾಕಿ ಒಳಗಡೆ ಹಾಕುವುದರಿಂದ ಹಾಸಿಗೆಯ ಮೇಲೆ ಇರುವಂತಹ ಕವರ್ ಟೈಟ್ ಆಗಿ ಕೂರುತ್ತದೆ.
ಅಂದರೆ ಸ್ಟಿಫ್ ಆಗಿ ಇರುತ್ತದೆ. ಬದಲಿಗೆ ನೀವು ಪದೇ ಪದೇ ಕೂತರೂ ಆ ಒಂದು ಕವರ್ ಆಚೆ ಈಚೆ ಹೋಗುವುದಿಲ್ಲ. ಈ ಒಂದು ವಿಧಾನ ಪ್ರತಿಯೊಬ್ಬರಿಗೂ ಕೂಡ ಸುಲಭವಾಗುತ್ತದೆ ಎಂದೇ ಹೇಳಬಹುದು. ಆದ್ದರಿಂದ ಪ್ರತಿಯೊಬ್ಬರೂ ಈ ವಿಧಾನ ಅನುಸರಿಸಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.