ಉಚಿತ ಬಸ್ ಯೋಜನೆಗೆ ಸಾರಿಗೆ ಇಲಾಖೆಯಿಂದ ವಿಶೇಷ ಮಾರ್ಗಸೂಚಿ ಏನೆನಿದೆ ನೋಡಿ ಇದರಲ್ಲಿ ಹೇಗೆ ಕೆಲಸ ಮಾಡುತ್ತೆ.. - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಫ್ರೀ ಬಸ್ ಯೋಜನೆಗೆ ಸಾರಿಗೆ ಇಲಾಖೆಯಿಂದ ಪ್ರತ್ಯೇಕ ಮಾರ್ಗ ಸೂಚಿ……!!

ಈ ಬಾರಿ ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದಿದ್ದು ಯಾವ ಪಕ್ಷದವರು ವಿಜೇತರಾದರೆ ಯಾವ ಕೆಲವೊಂದಷ್ಟು ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದು ಹೇಳಿದ್ದರೋ ಅದೇ ರೀತಿಯಾಗಿ ಈ ಬಾರಿ ಕಾಂಗ್ರೆಸ್ ಪಕ್ಷ ಜಯವನ್ನು ಸಾಧಿಸಿದ್ದು. ಅವರು ಜನರಿಗೆ ಐದು ಸೌಲಭ್ಯಗಳನ್ನು ಒದಗಿಸಿ ಕೊಡುತ್ತೇವೆ ಎನ್ನುವ ಭರವಸೆಯನ್ನು ನೀಡಿದ್ದರು.

ಅದರಲ್ಲೂ ಈ ಐದು ಭರವಸೆಗಳು ಸಹ ಎಲ್ಲಾ ಜನರಿಗೂ ಬಹಳ ಉಪಯೋಗವಾಗುವಂತೆ ಹಾಗೂ ಅವರಿಗೆ ಅನುಕೂಲಕರವಾಗುವಂತೆ ಇದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೌದು ಅದರಲ್ಲೂ ಕಳೆದ ಬಿಜೆಪಿ ಸರ್ಕಾರ ಇದ್ದಂತಹ ಸಮಯದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವಂತಹ ಜನರಿಗೆ ಒಬ್ಬರಿಗೆ ಕೇವಲ ನಾಲ್ಕು ಕೆಜಿ ಅಕ್ಕಿಯನ್ನು ಕೊಡುತ್ತಿದ್ದರು ಆದರೆ ಅದು ಯಾವುದೇ ಕಾರಣಕ್ಕೂ ಸರಿಯಿಲ್ಲ ಬದಲಿಗೆ ಕಾಂಗ್ರೆಸ್ ಪಕ್ಷ

ಮೊದಲು ಇದ್ದಂತಹ ಸಂದರ್ಭದಲ್ಲಿ ಒಬ್ಬರಿಗೆ 10 ಕೆಜಿ ಅಕ್ಕಿಯನ್ನು ಕೊಡುತ್ತಿದ್ದು. ಆನಂತರ ಬಿಜೆಪಿ ಸರ್ಕಾರ ಬಂದು ಅದನ್ನು 5 ಕೆಜಿ ಹಾಗೂ ಕೊನೆಯದಾಗಿ 4 ಕೆಜಿಗೆ ತಂದು ನಿಲ್ಲಿಸಿತ್ತು. ಆದರೆ ಈ ಒಂದು ವಿಷಯವಾಗಿ ಕಾಂಗ್ರೆಸ್ ಪಕ್ಷದವರು ನಾವೇನಾದರೂ ಈ ಬಾರಿ ಅಧಿಕಾರಕ್ಕೆ ಬಂದರೆ ನಾವು ಕಡ್ಡಾಯವಾಗಿ ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿಯನ್ನು ಕೊಡುತ್ತೇವೆ ಎನ್ನುವ ಭರವಸೆಯನ್ನು ನೀಡಿದ್ದರು.

ಅದೇ ರೀತಿಯಾಗಿ ಸಿದ್ದರಾಮಯ್ಯ ಅವರು ಈ ಒಂದು ವಿಚಾರವಾಗಿ ಮಾಹಿತಿಯನ್ನು ನೀಡಿದ್ದು ಪ್ರತಿಯೊಬ್ಬರಿಗೂ 10 ಕೆ.ಜಿ ಅಕ್ಕಿಯನ್ನು ಕಡ್ಡಾಯವಾಗಿ ಕೊಡುತ್ತೇನೆ ಎನ್ನುವಂತಹ ಮಾತನ್ನು ಈಡೇರಿಸಿದ್ದಾರೆ. ಇದರ ಜೊತೆ ಬಹಳ ಮುಖ್ಯವಾಗಿ ಮಹಿಳೆಯರಿಗೆ ಉಚಿತವಾದಂತಹ ಪ್ರಯಾಣವನ್ನು ಸಹ ನೀಡಿದ್ದರು ಅಂದರೆ ಸರ್ಕಾರಿ ಬಸ್ ಗಳಲ್ಲಿ ಪ್ರಯಾಣ ಮಾಡುವಂತಹ ಸಮಯದಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ.

ಹೌದು ಇವರಿಗೆ ಯಾವುದೇ ರೀತಿಯಾದಂತಹ ಟಿಕೆಟ್ ಇರುವುದಿಲ್ಲ ಆದರೆ ಈ ಒಂದು ವಿಚಾರವಾಗಿ ಸಾರಿಗೆ ಇಲಾಖೆಯವರು ಕೆಲ ವೊಂದಷ್ಟು ಶರತ್ತುಗಳನ್ನು ಹೇಳಿದ್ದರು. ಅದಕ್ಕೆ ಒಪ್ಪಿಕೊಂಡರೆ ಮಾತ್ರ ನಾವು ಈ ಒಂದು ವಿಧಾನವನ್ನು ಅನುಸರಿಸುತ್ತೇವೆ ಎಂದು ಹೇಳಿದ್ದಾರೆ. ಆದರೆ ಈ ಒಂದು ವಿಚಾರವಾಗಿ ಇನ್ನು ಯಾವುದೇ ರೀತಿಯಾದ ಸ್ಪಷ್ಟ ಮಾಹಿತಿ ಹೊರಬಂದಿಲ್ಲ. ಆದರೆ ಸಿದ್ದರಾಮಯ್ಯ ಅವರು ಹೇಳಿರುವ ಪ್ರಕಾರ ಕಡ್ಡಾಯವಾಗಿ ನಾನು ಮಹಿಳೆಯರಿಗೆ ಉಚಿತವಾದ ಪ್ರಯಾಣದ ವ್ಯವಸ್ಥೆಯನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ.

ಇದಕ್ಕೆ ಯಾವುದೇ ರೀತಿಯಾದಂತಹ ಅರ್ಜಿಗಳನ್ನು ತೆಗೆದುಕೊಳ್ಳು ವಂತಹ ಅವಶ್ಯಕತೆ ಇಲ್ಲ ಬದಲಿಗೆ ಪ್ರಯಾಣಿಸುವಂತಹ ಮಹಿಳಾ ಅಭ್ಯರ್ಥಿಯ ಆಧಾರ್ ಕಾರ್ಡ್ ಹೊಂದಿದ್ದರೆ ಸಾಕು, ಆ ಮಹಿಳೆ ಎಲ್ಲಿಗೆ ಬೇಕಾದರೂ ಉಚಿತವಾಗಿ ಪ್ರಯಾಣಿಸಬಹುದಾಗಿದೆ ಇದರಿಂದ ಬಡ ಮಹಿಳೆಯರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದೇ ಹೇಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *