ಶ್ರೀ ಕೃಷ್ಣ ಹುಟ್ಟಿದ ಜೈಲು ನೋಡಿ ಭಕ್ತರಿಗೆ ಬಾಗಿಲು ತೆಗೆದ ಕೃಷ್ಣ ಜನ್ಮ ತಾಳಿದ ಕೋಣೆ ಇದೆ ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಶ್ರೀಕೃಷ್ಣ ಹುಟ್ಟಿದ ಜೈಲು ನೋಡಿ ಭಕ್ತರಿಗೆ ಬಾಗಿಲು ತೆರೆದ ಕೃಷ್ಣ ಜನ್ಮತಾಳಿದ ಕೊಠಡಿ…….||

ಈ ದಿನ ನಾವು ಹೇಳಲು ಹೊರಟಿರುವಂತಹ ದೇವಸ್ಥಾನ ಶ್ರೀ ಕೃಷ್ಣ ಪರಮಾತ್ಮ ಜನಿಸಿದ ಕಾರಾಗೃಹ ಈ ಕಾರಾಗೃಹ ಇಂದು ದೇವಸ್ಥಾನವಾಗಿ ಬದಲಾಗಿದೆ. ಈ ದೇವಸ್ಥಾನದ ಹೆಸರು ಶ್ರೀ ಕೃಷ್ಣ ಜನ್ಮಾಷ್ಟನ್. ಶ್ರೀಕೃಷ್ಣ ಪರಮಾತ್ಮ ಸೋದರ ಮಾವನಾದಂತಹ ಕಂಸ ಕಟ್ಟಿಸಿದಂತಹ ಪ್ರಪಂಚದ ಅತ್ಯಂತ ದೊಡ್ಡ ಕಾರಾಗೃಹ.

ಉತ್ತರ ಪ್ರದೇಶದ ಮಥುರಾ ನಗರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟನ್ ದೇವಸ್ಥಾನ ಇದೆ. ಈ ದೇವಸ್ಥಾನದ ಪಕ್ಕದಲ್ಲಿಯೇ ಅಂಟಿಕೊಂಡಿರುವ ಹಾಗೆ ಮೊಘಲ್ ರಾಜ ಔರಂಗಜೇಬ್ ಕಟ್ಟಿಸಿದಂತಹ ಮಸೀದಿ ಕೂಡ ಕಂಡು ಬರುತ್ತದೆ. ಕೃಷ್ಣ ಜನ್ಮಾಷ್ಟನ್ ದೇವಸ್ಥಾನ ಭಾರತ ದೇಶದಲ್ಲಿಯೇ ಅತ್ಯಂತ ಸುಂದರ ಮಂದಿರ ಎಂದು ಪರಿಗಣಿಸಲಾಗಿದೆ. ಈ ದೇವಸ್ಥಾನದ ಒಳಾಂಗಣದ ಒಂದು ಭಾಗದಲ್ಲಿ ಕಂಸ ಕಾರಾಗೃಹ ಕಂಡುಬರುತ್ತದೆ.

ಕಂಸ ಬಳಸುತ್ತಿದ್ದಂತಹ ಸಾಕಷ್ಟು ವಸ್ತುಗಳು ಕರಾಗೃಹದಲ್ಲಿ ಇಂದಿಗೂ ಸಹ ಇದೆ. ದೇವಸ್ಥಾನದ ಒಳಗಡೆ ಇರುವ ಕಾರಾಗೃಹದ ಗೋಡೆ ಗಳನ್ನು ಪರೀಕ್ಷೆ ಮಾಡಿದ್ದು ಸುಮಾರು 5000 ವರ್ಷದ ಹಳೆಯದ್ದು ಎಂದು ದೃಢವಾಗಿದೆ. ವಸುದೇವರು ಜೈಲಿನಿಂದ ಶ್ರೀ ಕೃಷ್ಣ ಪರಮಾತ್ಮನನ್ನು ಕರೆದುಕೊಂಡು ಹೋಗಿರುವಂತಹ ಹೆಜ್ಜೆ ಗುರುತುಗಳನ್ನು ದೇವಸ್ಥಾನದ ಹಿಂಬದಿ ಬಲ ಭಾಗದಲ್ಲಿ ಕಾಣಬಹುದು.

ಅಷ್ಟೇ ಅಲ್ಲದೆ ವಸು ದೇವರು ಯಮುನಾ ನದಿಯಲ್ಲಿ ನಡೆದುಕೊಂಡು ಹೋಗಿರುವಂತಹ ಹೆಜ್ಜೆ ಗುರುತುಗಳು ನದಿ ದಡದಲ್ಲಿ ಇಂದಿಗೂ ಕಾಣುತ್ತವೆ ಎಂದು ಹೇಳಲಾಗಿದೆ. ಮಥುರಾ ನಗರದಲ್ಲಿರುವ ಶೇಕಡ 89% ಅಂಗಡಿಗಳ ಹೆಸರು ಕೃಷ್ಣ ಎಂಬ ಹೆಸರಿನಿಂದಲೇ ಶುರುವಾಗು ತ್ತದೆ. ಈ ದೇವಸ್ಥಾನದ ಒಳಗಡೆ ಕಂಸ ಬಳಸುತ್ತಿದ್ದಂತಹ ಸಾಕಷ್ಟು ಆಯುಧಗಳನ್ನು ನೋಡಬಹುದು. ಮಥುರಾ ನಗರದಲ್ಲಿ ಯಾರು ಎಲ್ಲಿ ಬೇಕಾದರೂ ನೆಲವನ್ನು ಅಗೆದರೆ

ಶ್ರೀ ಕೃಷ್ಣ ಪರಮಾತ್ಮನಿಗೆ ಸಂಬಂಧಿಸಿದಂತಹ ವಸ್ತುಗಳು ಇಂದಿಗೂ ಕಂಡು ಬರುತ್ತಿದೆ. ಈ ರೀತಿ ಸಿಕ್ಕಂತಹ ಎಲ್ಲ ವಸ್ತುಗಳನ್ನು ಮಥುರಾ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಈ ದೇವಸ್ಥಾನದ ಒಳಭಾಗದಲ್ಲಿ ಕಾರಾಗೃಹಕ್ಕೆ ಒಳಗೆ ಹೋಗುವ ದಾರಿ, ಹೊರಗೆ ಬರುವ ದಾರಿ ಹಾಗೂ 6 ರಿಂದ 8 ಕಾರಾಗೃಹ ಕೊಠಡಿಗಳು ಕಂಡುಬರುತ್ತದೆ. ಪುರಾವೆಯಲ್ಲಿ ಉಲ್ಲೇಖಿಸಿರುವ ಪ್ರಕಾರ ಕಂಸ ಕಟ್ಟಿಸಿದಂತಹ ಜೈಲಿನಲ್ಲಿ

ಸುಮಾರು 500 ರಿಂದ 600 ಕೊಠಡಿಗಳು ಇದ್ದವು ಎಂದು ಹೇಳಲಾಗಿದೆ. ಮಥುರಾ ನಗರದ ಜನಗಳಿಗೆ ಕೃಷ್ಣ ಜನ್ಮಾಷ್ಟಮಿ ಹಬ್ಬ, ಯುಗಾದಿ ಮತ್ತು ದೀಪಾವಳಿ ಹಬ್ಬ ಇದ್ದಹಾಗೆ. ಕೃಷ್ಣ ಜನ್ಮಾಷ್ಟಮಿ ಹಬ್ಬದ ದಿನದಂದೇ ಹೊಸ ವರ್ಷ ಆರಂಭವಾಗುತ್ತದೆ ಎಂದು ಮಥುರಾ ನಗರದಲ್ಲಿರುವ ಜನರು ನಂಬಿದ್ದಾರೆ. ಜನವರಿ ಒಂದು ಹೊಸ ವರ್ಷ ಆಚರಿಸುತ್ತಾರೆ ಆದರೆ ಮಥುರಾ ನಗರದಲ್ಲಿರುವ ಜನಗಳು ಹೊಸ ವರ್ಷ ಆಚರಿಸುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *