ಕಂಚಿ ಕಾಮಾಕ್ಷಿಯ ಶ್ರೀಚಕ್ರ ಯೋನಿಯಾಕಾರದಲ್ಲಿರೋದ್ಯಾಕೆ…..?
ಇಡೀ ಜಗತ್ತಿನಲ್ಲಿರುವ ಶಕ್ತಿ ಪೀಠಗಳಲ್ಲಿ ಮೊಟ್ಟ ಮೊದಲಿಗೆ ಪ್ರತಿಷ್ಠಾಪಿತ ವಾಗಿದ್ದೆ ಕಂಚಿ ಕಾಮಾಕ್ಷಿ ದೇವಾಲಯ ಅನ್ನುವ ಪ್ರತೀತಿ ಇದೆ. ಇಂದಿಗೂ ಕೂಡ ಮಹಾನ್ ಶಕ್ತಿ ಪೀಠಗಳಲ್ಲಿ ಕಂಚಿ ಕಾಮಾಕ್ಷಿ ಅಮ್ಮನ ಪವಾಡ ಅತ್ಯದ್ಭುತ. ಬೇಡಿ ಬರುವ ಭಕ್ತರಿಗೆ ಸಂತಾನವಿಲ್ಲದವರಿಗೆ ವಿಸ್ಮಯ ಎಂಬಂತೆ ತಮ್ಮ ಕಷ್ಟಗಳೆಲ್ಲವನ್ನು ಪರಿಹರಿಸುವಂತಹ ತಾಯಿ ಎಂದೇ ಪ್ರಖ್ಯಾತವಾಗಿದೆ ಕಂಚಿ ಕಾಮಾಕ್ಷಿ ಪೀಠ.
ಹಾಗಾದರೆ ಈ ದಿನ ಈ ಶಕ್ತಿಪೀಠ ಸ್ಥಾಪನೆಯಾಗಿದ್ದು ಹೇಗೆ? ಇದರ ಇತಿಹಾಸ ಪುರಾತನ ಕಥೆಗಳು ಪೌರಾಣಿಕ ಉಲ್ಲೇಖಗಳು ಏನು ಹೇಳುತ್ತದೆ ಎನ್ನುವುದನ್ನು ತಿಳಿದುಕೊಳ್ಳೋಣ. ಈ ಶಕ್ತಿ ಸ್ವರೂಪಿಣಿ ನೆಲೆಸಿರುವಂತಹ ಸ್ಥಳ ಒಂದು ಅತ್ಯದ್ಭುತ ಶಕ್ತಿಪೀಠ. ಇದು ಇತರೆ ಶಕ್ತಿ ದೇವರಿಗೆ ಮಾತ್ರ ಸೀಮಿತವಾಗಿರುವಂತಹ ಪೀಠಗಳಂತೆ ಅಲ್ಲ. ಬದಲಾಗಿ ಶಿವನು ಸಹ ಶಕ್ತಿಯಲ್ಲಿ ಸಂಯೋಜನೆಗೊಂಡು.
ಶಿವಶಕ್ತಿ ಪ್ರಭಾವವಿರುವ ಶಕ್ತಿ ಪೀಠ. ಕಾಮಾಕ್ಷಿ ಎನ್ನುವುದು ಮೂರು ಪದಗಳ ಸಂಯೋಜನೆಯಾಗಿದೆ. ಅಂದರೆ ಕಾ ಮಾ ಅಕ್ಷಿ. ಇಲ್ಲಿ ಕಾ ಪದವು ಸರಸ್ವತಿ ದೇವಿಯನ್ನು, ಮಾ ಪದವು ಲಕ್ಷ್ಮಿಯನ್ನು, ಹಾಗೆ ಅಕ್ಷಿ ಎಂಬ ಪದವು ಕಣ್ಣುಗಳನ್ನು ಪ್ರತಿನಿಧಿಸುತ್ತದೆ ಎನ್ನಲಾಗಿದೆ. ಹೀಗಾಗಿ ಕಾಮಾಕ್ಷಿ ದೇವಿಯು ಸರಸ್ವತಿ ಮತ್ತು ಲಕ್ಷ್ಮಿಯ ಎರಡು ಕಣ್ಣುಗಳಾಗಿ ನೆಲೆಸಿರುವ ದೇವಿಯಾಗಿದ್ದಾಳೆ. ಕಾಮಾಕ್ಷಿಯ ಇನ್ನೊಂದು ಭಾವಾರ್ಥ
ಕಾಮ ಮತ್ತು ಅಕ್ಷಿ ಎಂದರೆ ಪ್ರೀತಿಯ ಕಣ್ಣುಗಳುಳ್ಳವಳು ಎಂದರ್ಥ. ಒಟ್ಟಾರೆಯಾಗಿ ಹೇಳಬೇಕು ಎಂದರೆ ಪ್ರೀತಿಯಿಂದ ಕೂಡಿದ ಕಣ್ಣುಗಳುಳ್ಳ ಭಕ್ತರನ್ನು ಅರಸುವಂತಹ ಸರಸ್ವತಿಯ ಪ್ರಭಾವದಿಂದ ವಿದ್ಯೆ ಬುದ್ಧಿ ಕರುಣಿಸುವ ಲಕ್ಷ್ಮಿಯ ಪ್ರಭಾವದಿಂದ ಅಷ್ಟೈಶ್ವರ್ಯ ಹಾಗೂ ಸಂಪತ್ತನ್ನು ನೀಡುವ ಶಿವನ ಪ್ರಭಾವದಿಂದ ಕಷ್ಟಗಳನ್ನು ಹೋಗಲಾಡಿಸುವ ದೇವಿಯಾಗಿ ಕಾಮಾಕ್ಷಿಯನ್ನು ಆರಾಧಿಸಲಾಗುತ್ತದೆ. ಕಾಮಾಕ್ಷಿಯು ನೆಲೆಸಿರುವಂತಹ ಪುಣ್ಯಕ್ಷೇತ್ರವೇ ಕಾಂಚಿಪುರ ಅಥವಾ ಕಂಚಿಪುರಂ.
ಕಂಚಿ ಕಾಮಾಕ್ಷಿ ಎಂತಲೂ ಕಾಂಚಿಪುರಂ ನಲ್ಲಿ ಇರುವಂತಹ ಕಾಮಾಕ್ಷಿ ಅಮ್ಮನವರ ದೇವಾಲಯವು ಸಾಕಷ್ಟು ಪ್ರಸಿದ್ಧಿಯನ್ನು ಪಡೆದಂತಹ ತೀರ್ಥಕ್ಷೇತ್ರವಾಗಿದೆ. ತಮಿಳುನಾಡಿನ ಕಾಂಚಿಪುರಂ ಜಿಲ್ಲೆಯ ಕಾಂಚಿ ಪುರಂ ನಗರದ ಹೃದಯ ಭಾಗದಲ್ಲಿಯೇ ಕಾಮಾಕ್ಷಿ ಅಮ್ಮನವರ ದೇವಾಲಯವಿದೆ. ಕಂಚಿ ಕಾಮಾಕ್ಷಿಯು ತಮಿಳುನಾಡಿನಲ್ಲಿ ಆರಾಧಿಸ ಲಾಗುವ ಮೂರು ಪ್ರಮುಖ ಶಕ್ತಿ ದೇವತೆಗಳ ಪೈಕಿ ಒಬ್ಬಳಾಗಿದ್ದಾಳೆ. ಇನ್ನುಳಿದ ಇಬ್ಬರು ಶಕ್ತಿ ದೇವತೆಯರು ಯಾರು ಎಂದರೆ ಮಧುರೈ ಮೀನಾಕ್ಷಿ ಹಾಗೂ ತಿರುವನೈ ಕಾವಲ್ ಅಖಿಲಾಂಡೇಶ್ವರಿ.
ಕಾಮಾಕ್ಷಿಯ ಈ ಪುರಾತನ ದೇವಾಲಯವು ಪಲ್ಲವರಿಂದ ನಿರ್ಮಿತ ವಾದ ರಚನೆ ಎಂದು ಪರಿಗಣಿಸಲಾಗಿದೆ. ಏಕೆ ಎಂದರೆ ಕಾಂಚಿಪುರಂ ಹಿಂದೆ ಪಲ್ಲವರ ರಾಜಧಾನಿಯಾಗಿತ್ತು. ವಿಶೇಷವೆಂದರೆ ಕಾಮಾಕ್ಷಿಯು ಇಲ್ಲಿ ಪದ್ಮಾಸನ ಸ್ಥಿತಿಯಲ್ಲಿ ಕುಳಿತಿದ್ದು ನೋಡಲು ಎರಡು ಕಣ್ಣುಗಳು ಸಾಲದು. ದೇವಾಲಯ ಸಂಕೀರ್ಣದ ಮಧ್ಯಭಾಗದಲ್ಲಿರುವ ಗರ್ಭಗುಡಿಯಲ್ಲಿ ಕುಳಿತಿರುವಂತಹ ಕಾಮಾಕ್ಷಿ ತನ್ನ ನಾಲ್ಕು ಕೈಯಲ್ಲಿ ಕಬ್ಬಿನ ಬಿಲ್ಲನ್ನು ಹಿಡಿದಿದ್ದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.