ಮಂಗಳಾರತಿ ಸಮಯದಲ್ಲಿ ಕಣ್ಣು ತೆರೆಯುವ ದೇವರು ಈ ವಿಷ್ಣು ದೇಗುಲದಲ್ಲಿ ನಡೆಯೋ ಪವಾಡ ಕಣ್ಣಾರೆ ನೋಡಿ

ಮಂಗಳಾರತಿ ಸಮಯದಲ್ಲಿ ಕಣ್ಣು ತೆರೆದು ನೋಡುವ ದೇವರು. ಈ ವಿಷ್ಣು ದೇವಾಲಯದಲ್ಲಿ ನಡೆಯುವ ಪವಾಡವನ್ನು ನೀವು ಕಣ್ಣಾರೆ ನೋಡಬಹುದು…

WhatsApp Group Join Now
Telegram Group Join Now

ಪ್ರಪಂಚದಲ್ಲಿರುವ ಎಲ್ಲ ದೇವಾಲಯಗಳಿಗಿಂತ ನಮ್ಮ ಹಿಂದು ದೇವಾಲಯಗಳಲ್ಲಿಯೇ ಅತಿ ಹೆಚ್ಚು ಪವಾಡಗಳ ನಡೆಯುತ್ತಿರುವುದು. ಇಂದಿಗೂ ಕೂಡ ವಿಜ್ಞಾನ ಲೋಕಕ್ಕೆ ಸವಾಲಾಗುವಂತ ಅನೇಕ ಅಚ್ಚರಿಗಳನ್ನು ನಾವಿಲ್ಲಿ ಕಾಣಬಹುದು. ಅದೇ ರೀತಿ ಒಂದು ದೇವಾಲಯದ ವಿಶೇಷತೆ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಪಕ್ಕದ ರಾಜ್ಯ ತಮಿಳುನಾಡಿನ ಚೆನ್ನೈ ಬಳಿಯ ವೆಲ್ಕೊಂಡ್ರ ಎನ್ನುವ ಗ್ರಾಮದಲ್ಲಿ ನೆಲೆಸಿರುವ ಕಾರಿ ವರದರಾಜ ಪೆರುಮಾಲ್ ದೇವಸ್ಥಾನದಲ್ಲಿ ವಿಗ್ರಹಕ್ಕೆ ಆರತಿ ಮಾಡುವ ವೇಳೆ ನಡೆಯುವ ಪವಾಡದ ಬಗ್ಗೆ ಈ ಲೇಖನದಲ್ಲಿ ಹೇಳುತ್ತಿದ್ದೇವೆ.

ಸುಮಾರು ಐದು ಸಾವಿರ ವರ್ಷಗಳಿಗಿಂತಲೂ ಹಳೆಯದಾಗಿರುವ ಈ ವಿಗ್ರಹವನ್ನು ವಿಷ್ಣು ದೇವರು ತಮ್ಮ ಅವತಾರ ಮುಗಿದ ಬಳಿಕ ನೆರಳಿನಿಂದ ಸೃಷ್ಠಿಸಿ ಹೋದರು ಎನ್ನುವ ಇತಿಹಾಸ ಇದೆ. ವಿಷ್ಣುವಿನ ಅವತಾರ ಇಂದು ನಂಬಲಾಗಿರುವ ವರದರಾಜನ ವಿಗ್ರಹದಲ್ಲಿಯೇ ನಡೆಯುವಂತಹ ಅಚ್ಚರಿ ಇದು. ಅದೇನೆಂದರೆ ಈ ದೇವಸ್ಥಾನದಲ್ಲಿ ವಿಗ್ರಹಕ್ಕೆ ಆರತಿ ಮಾಡುವ ವೇಳೆಯಲ್ಲಿ ದೇವರು ಕಣ್ಣು ತೆರೆದು ನೋಡಿದ ರೀತಿ ಭಾಸವಾಗುತ್ತದೆ. ಈ ಚಕಿತವನ್ನು ದೇವಸ್ಥಾನಕ್ಕೆ ಭೇಟಿ ಕೊಡುವ ಪ್ರತಿಯೊಬ್ಬ ಭಕ್ತರು ಕೂಡ ಕಣ್ಣಾರೆ ಕಾಣಬಹುದು.

ಇದರ ಹಿಂದೆ ಇರುವ ಹಿನ್ನೆಲೆಯನ್ನು ನೋಡುವುದಾದರೆ ಆ ಪ್ರದೇಶವನ್ನು ವರ್ಷಗಳ ಹಿಂದೆ ಶಾತವಾಹನರ ದೊರೆ ಗೌತಮಿಪುತ್ರ ಶಾತಕರ್ಣಿ ಆಳುತ್ತಿರುತ್ತಾರೆ. ಒಂದು ದಿನ ಕಾಡಿನ ಮಧ್ಯೆ ವರದರಾಜರ ಈ ವಿಗ್ರಹ ರಾಜನಿಗೆ ಸಿಗುತ್ತದೆ, ಆದರೆ ಅದಕ್ಕೆ ಕಣ್ಣುಗಳಿರುವುದಿಲ್ಲ. ತನ್ನ ಆಸ್ಥಾನಕ್ಕೆ ವಿಗ್ರಹವನ್ನು ತಂದ ರಾಜನು ಇದಕ್ಕೆ ಕಣ್ಣುಗಳನ್ನು ಸೇರಿಸುವುದಕ್ಕ ಆಜ್ಞೆ ಕೊಡುತ್ತಾರೆ.

See also  ಹಣ ಮತ್ತು ಐಶ್ವರ್ಯ ಬರಲು ಕೈಯಲ್ಲಿ ಇದನ್ನು ತೆಗೆದುಕೊಂಡು ಹೋಗಿ..ತುಂಬಾ ಧನಲಾಭ ನೋಡುವಿರಿ

ಸುಮಾರು 15,000 ರೀತಿಯಲ್ಲಿ ಕಣ್ಣುಗಳನ್ನು ತಂದು ಜೋಡಿಸಿದರು ಯಾವುದೇ ಕಣ್ಣುಗಳು ಒಪ್ಪುವುದಿಲ್ಲ. ಆಗ ಒಂದು ದಿನ ರಾತ್ರಿ ಕನಸಿನಲ್ಲಿ ವರದರಾಜರೇ ಗೌತಮಿಪುತ್ರ ಶಾತಕರ್ಣಿ ಕನಸಿನಲ್ಲಿ ಬಂದು ಹಿಮಾಲಯದಲ್ಲಿ ಸಿಗುವ ಕಪ್ಪು ಪಾರದರ್ಶಕ ಕಲ್ಲುಗಳಿಂದ ಕಣ್ಣುಗಳನ್ನು ಕೆತ್ತಲು ಸೂಚನೆ ಕೊಡುತ್ತಾರಂತೆ. ಇದಾದ ಬಳಿಕ ಬರೋಬ್ಬರಿ 6 ವರ್ಷಗಳ ಕಾಲ ಸಮಯ ತೆಗೆದುಕೊಂಡು ಆ ಕಪ್ಪು ಪಾರದರ್ಶಕ ಕಲ್ಲುಗಳಿಂದ ಕಣ್ಣನ್ನು ಮಾಡಿ ವಿಗ್ರಹಕ್ಕೆ ಜೋಡಿಸಲಾಗುತ್ತದೆ.

ಊರಿನ ಮಧ್ಯೆ ದೇವಸ್ಥಾನವನ್ನು ಸ್ಥಾಪಿಸಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುತ್ತದೆ. ಅಂದಿನಿಂದ ಇಂದಿನವರೆಗೂ ಕೂಡ ಈ ಚಮತ್ಕಾರ ಜರಗುತ್ತಲೇ ಇದೆ. ಸದ್ಯಕ್ಕೆ ಈಗ ಭೂಮಿಯ ಮೇಲೆ ಈ ಕಪ್ಪು ಪಾರದರ್ಶಕ ಕಲ್ಲುಗಳು ಮಾಯವಾಗಿದ್ದು, ಈ ವರದರಾಜರ ವಿಗ್ರಹದಲ್ಲಿ ಬಿಟ್ಟು ಬೇರೆ ಎಲ್ಲೂ ಕೂಡ ಇವುಗಳನ್ನು ನೋಡಲು ಸಾಧ್ಯವಿಲ್ಲ.

ವಿಜ್ಞಾನಿಗಳು ಕೂಡ ಇದನ್ನು ಒಪ್ಪಿಕೊಂಡಿದ್ದು ಈ ಪವಾಡ ನಡೆಯುವುದಕ್ಕೆ ಕಲ್ಲುಗಳೇ ಕಾರಣ ಎಂದಿದ್ದಾರೆ. ಯಾಕೆಂದರೆ ಈ ಕಪ್ಪು ಕಲ್ಲುಗಳು ಶಾಖ ಮತ್ತು ಬೆಳಕು ಹತ್ತಿರದಲ್ಲಿದ್ದಾಗ ಪಾರದರ್ಶಕವಾಗುತ್ತವೆ. ಹಾಗಾಗಿ ಮಂಗಳಾರತಿ ವೇಳೆ ಶಾಖ ಮತ್ತು ಬೆಳಕು ಹತ್ತಿರ ಹೋಗುವುದರಿಂದ ಕಣ್ಣು ತೆರೆದಂತೆ ಭಾಸವಾಗುತ್ತದೆ ಎಂದಿದ್ದಾರೆ.

[irp]


crossorigin="anonymous">