ಕೇರಳ ರಾಜ್ಯದ ಬಗ್ಗೆ ನಿಮಗೆ ಗೊತ್ತಿರದ ಕೆಲವು ಪ್ರಮುಖ ಸಂಗತಿಗಳು…
ದಕ್ಷಿಣ ಭಾರತ ಎಂದು ಕರೆಸಿಕೊಂಡಿರುವ ಐದು ರಾಜ್ಯಗಳಲ್ಲಿ ಕೇರಳ ಕೂಡ ಒಂದು ಕೇರಳ ರಾಜ್ಯವು ತಮಿಳುನಾಡು ಮತ್ತು ಕರ್ನಾಟಕದೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ ಹಾಗೂ ಮತ್ತೊಂದು ಗಡಿಯನ್ನು ಅರಬಿ ಸಮುದ್ರ ಆವರಿಸಿಕೊಂಡಿದೆ, ಇದನ್ನು ಮಲಬಾರ್ ಎಂದು ಕೂಡ ಕರೆಯುತ್ತಾರೆ. ಕೇಳದ ರಾಜಧಾನಿ ತಿರುವನಂತಪುರಂ. ಕೇರಳ ರಾಜ್ಯದ ಭಾಷೆ ಮಲಯಾಳಂ. ಮಲಯಾಳಂ ಭಾಷೆಯಲ್ಲಿ ಕೇರಳ ಎಂದರೆ ತೆಂಗಿನಕಾಯಿಗಳ ನಾಡು ಎಂದು ಅರ್ಥ.
ಇದಕ್ಕೆ ಸಾಕ್ಷಿ ಎನ್ನುವಂತೆ ಇಲ್ಲಿ ತೆಂಗಿನಕಾಯಿಯನ್ನು ಹೆಚ್ಚು ಬೆಳೆಯುತ್ತಾರೆ ಹಾಗೂ ಬಳಸುತ್ತಾರೆ. ದೇವತೆಗಳ ಸ್ವಂತ ಊರು ಎಂದು ಕರೆಸಿಕೊಂಡಿರುವ ಕೇರಳ ರಾಜ್ಯದಲ್ಲಿ ಹೆಚ್ಚು ದೇವಸ್ಥಾನಗಳು ಇದ್ದು ಪ್ರಪಂಚದಲ್ಲಿಯೇ ಶ್ರೀಮಂತ ದೇವಾಲಯ ಎಂದು ಕರೆಸಿಕೊಂಡಿರುವ ಅನಂತಪದ್ಮನಾಭಸ್ವಾಮಿ ದೇವಸ್ಥಾನವು ಕೂಡ ಕೇರಳ ರಾಜ್ಯದಲ್ಲಿ ಇದೆ. ಈ ದೇವಸ್ಥಾನದಲ್ಲಿ ಬೆಳೆಬಾಳುವಂತಹ ವಜ್ರ ಚಿನ್ನ ಹರಳುಗಳೊಳಗೊಂಡ ನಿಧಿ ಪತ್ತೆಯಾಗಿದೆ.
ಇದರ ಮೌಲ್ಯ 2000 ಬಿಲಿಯನ್ ಗಿಂತಲೂ ಹೆಚ್ಚು ಮತ್ತು ಪುರಾಣ ಪ್ರಸಿದ್ಧ ಶಬರಿಮಲೆ ದೇವಸ್ಥಾನವು ಕೂಡ ಕೇರಳ ರಾಜ್ಯದಲ್ಲಿಯೇ ಇದೆ. ಸಾಕ್ಷರತೆಯಲ್ಲಿ ಇಂದಿಗೂ ಕೇರಳ ಭಾರತದಲ್ಲಿ ನಂಬರ್ ಒನ್ ರಾಜ್ಯ. ಕೇರಳ ರಾಜ್ಯದ ಪ್ರತಿಯೊಂದು ಗ್ರಾಮವು ಕೂಡ ಬ್ಯಾಂಕಿಂಗ್ ಸೌಲಭ್ಯವನ್ನು ಹೊಂದಿದೆ. ಕೇರಳ ರಾಜ್ಯದ ಒಟ್ಟು ಜನಸಂಖ್ಯೆ 3 ಕೋಟಿ ಇಪ್ಪತ್ತು ಲಕ್ಷ ಇದರಲ್ಲಿ ಹಿಂದೂಗಳ ಸಂಖ್ಯೆ ಹೆಚ್ಚಾಗಿದ್ದು ಹಿಂದೂ ಮುಸ್ಲಿಂ ಮತ್ತು ಇಸ್ಲಾಂ ಧರ್ಮದವರು ಭಾವೈಕ್ಯತೆಯಿಂದ ಇಲ್ಲಿ ಬದುಕುತ್ತಿದ್ದಾರೆ.
ಕೇರಳ ರಾಜ್ಯದ ಮತ್ತೊಂದು ವೈಶಿಷ್ಟತೆ ಎಂದರೆ ಎಲ್ಲಾ ರೀತಿಯ ಜೀವ ವೈವಿಧ್ಯಗಳನ್ನು ಹೊಂದಿರುವ ಕೆಲವು ಪ್ರದೇಶಗಳಲ್ಲಿ ಕೇರಳ ಕೂಡ ಒಂದು ಎನ್ನುವುದನ್ನು ನ್ಯಾಷನಲ್ ಜಿಯೋಗ್ರಾಫಿಕಲ್ ಸರ್ವೆ ಹೇಳುತ್ತದೆ. ಕೇರಳ ರಾಜ್ಯದ ಪ್ರಕೃತಿ ಸೌಂದರ್ಯವನ್ನು ಇಲ್ಲಿನ ಬೆಟ್ಟ ಗುಡ್ಡಗಳು, ಅರಣ್ಯ ಪ್ರದೇಶ, ಜಲಪಾತ ಮತ್ತು ಸಮುದ್ರದ ಹಿನ್ನೀರಿನ ನೋಟ ಈ ರೀತಿ ನಾಲ್ಕು ವಿಧಗಳಲ್ಲಿ ವಿಂಗಡಿಸಬಹುದು.
ಕೊಚ್ಚಿ ಜಿಲ್ಲೆಯು ನಂಬರ್ ಒನ್ ಹರ್ಬನ್ ಸಿಟಿ ಆಗಿದ್ದರೆ, ಕೇರಳದ ಹೈಕೋರ್ಟ್ ಎರ್ನಾಕುವಂ ಅಲ್ಲಿದೆ. ಬಂಗಾರವನ್ನು ಅತಿ ಹೆಚ್ಚು ಖರೀದಿಸುವ ರಾಜ್ಯ ಬಂಗಾರದ ರಾಜ್ಯ ಎಂದೇ ಕೇರಳ ಕರೆಸಿಕೊಂಡಿದೆ. ಜೊತೆಗೆ ಭಾರತದಲ್ಲಿ ಅತಿ ಹೆಚ್ಚು ಅವಳಿ ಮಕ್ಕಳು ಜನಿಸಿರುವ ರಾಜ್ಯವು ಇದೆ ಆಗಿದೆ. ಕೇರಳ ರಾಜ್ಯದ ಮಲಪುರಂ ಜಿಲ್ಲೆಯ ಕೊಡಿಹಿನಿ ಗ್ರಾಮದಲ್ಲಿ ಅತಿ ಹೆಚ್ಚು ಅವಳಿ ಮಕ್ಕಳು ಜನಿಸಿದ್ದಾರೆ.
ಅತಿ ಹೆಚ್ಚು ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿರುವ ರಾಜ್ಯ ಕೇರಳ ಆಗಿದ್ದು ಪ್ರವಾಸಿಗರನ್ನು ತನ್ನ ಮನೋಹರವಾದ ಪ್ರಕೃತಿ ಸೌಂದರ್ಯದಿಂದ ಆಕರ್ಷಿಸುತ್ತದೆ. ಕೇರಳದಲ್ಲಿರುವ ದಟ್ಟ ಅರಣ್ಯ, ಸಮುದ್ರ ತೀರ ಇವೆಲ್ಲವೂ ಕೂಡ ಮನಸ್ಸಿಗೆ ಆಹ್ಲಾದಕರ ಅನುಭವ ನೀಡುವುದರಿಂದ ತಮ್ಮ ಬೇಸರವನ್ನು ಕಳೆಯಲು ಜನರು ಈ ಪ್ರದೇಶವನ್ನು ಆರಿಸಿಕೊಳ್ಳುತ್ತಾರೆ. ಕೇರಳ ರಾಜ್ಯದ ಬಗ್ಗೆ ಮತ್ತಷ್ಟು ಮಾಹಿತಿಗಳನ್ನು ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.