ಯಾವ ರಾಶಿಗೆ ಯಾವ ಬಣ್ಣ ಅದೃಷ್ಟ ನೀಡುತ್ತದೆ ಗೊತ್ತಾ ? 12 ರಾಶಿಗೆ ವಿಶೇಷ ಅದೃಷ್ಟ ನೀಡುವ ಬಣ್ಣಗಳು ಇವು ನೋಡಿ

ಯಾವ ರಾಶಿಗೆ ಯಾವ ಬಣ್ಣ ಶುಭ……..||

WhatsApp Group Join Now
Telegram Group Join Now

ಪ್ರತಿಯೊಬ್ಬರೂ ಒಂದೊಂದು ಬಣ್ಣವನ್ನು ಇಷ್ಟಪಡುತ್ತಾರೆ. ಆದರೆ ಪ್ರತಿಯೊಂದು ರಾಶಿಗೂ ಅದರದೇ ಬಣ್ಣ ಇರುತ್ತದೆ. ನಿಮ್ಮ ರಾಶಿ ಯಾವುದು ಎಂದು ನೋಡಿಕೊಂಡು ಆದಷ್ಟು ಅದೇ ಬಣ್ಣ ಬಳಸುವುದ ರಿಂದ ಒಳ್ಳೆಯದಾಗುತ್ತದೆ. ಬಣ್ಣವು ಪ್ರತಿಯೊಬ್ಬರನ್ನು ಸೆಳೆಯುವಂತಹ, ಆಕರ್ಷಣೆಯನ್ನುಂಟು ಮಾಡುವಂತಹ ವಸ್ತುವಾಗಿದೆ. ಪ್ರತಿ ಬಣ್ಣಗಳಿಗೂ ವಿಶೇಷತೆ ಇದ್ದು, ಅವುಗಳದ್ದೇ ಆದ ಶಕ್ತಿ ಕೂಡಾ ಇರುತ್ತದೆ.

ಹೀಗಾಗಿ ಯಾವ ರಾಶಿಗೆ ಯಾವ ಬಣ್ಣಗಳು ಆಗಿಬರುತ್ತವೆ, ಅದೃಷ್ಟ ವನ್ನು ತರುತ್ತವೆ ಎಂಬುದನ್ನು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ. ಮೊದಲನೆಯದಾಗಿ ಮೇಷ ರಾಶಿ ಈ ರಾಶಿಯವರಿಗೆ ಸದಾ ಕೆಂಪು ಬಣ್ಣವು ಅದೃಷ್ಟವನ್ನು ತಂದುಕೊಡುತ್ತದೆ. ಕೆಂಪು ಬಣ್ಣಕ್ಕೆ ವಿಶೇಷ ಶಕ್ತಿ ಇದ್ದು, ವ್ಯಕ್ತಿಯೊಳಗೆ ಅಡಗಿರುವ ಶಕ್ತಿಯನ್ನು ಹೊರಗೆ ತರುತ್ತದೆ. ಜೊತೆಗೆ ನಿಂಬೆ ಹಸಿರು ಅಥವ ಹಸಿರು ಬಣ್ಣ ಅಥವಾ ಬಿಳಿ ಬಣ್ಣವು ಸಹ ಇವರಿಗೆ ಒಪ್ಪಿತವಾಗುತ್ತದೆ.

ಇನ್ನು ಎರಡನೆಯ ರಾಶಿ ವೃಷಭ ರಾಶಿ, ಈ ರಾಶಿಯವರಿಗೆ ಶುಭ ತರುವ ಬಣ್ಣ ಹಸಿರು. ಅಲ್ಲದೆ, ಹಳದಿ ಬಣ್ಣವೂ ಆಗಿಬರುತ್ತದೆ. ಹಳದಿ ಬಣ್ಣ ಮಿಶ್ರಿತ ಇತರ ಬಣ್ಣಗಳೂ ಇವರಿಗೆ ಶುಭಕಾರಕವಾಗಿವೆ. ಆದರೆ ಈ ರಾಶಿಯವರಿಗೆ ಕೆಂಪು ಬಣ್ಣ ಮಾತ್ರ ಆಗಿರಬಾರದು. ಹೀಗಾಗಿ ಇವರು ಈ ಬಣ್ಣದಿಂದ ಮಾತ್ರ ದೂರ ಇದ್ದರೆ ಒಳಿತು.

See also  ಕೊನೆಗೂ ನಿಜವಾಯಿತು ಯಶವಂತ್ ಗುರೂಜಿ ಸ್ಫೋಟಕ ಭವಿಷ್ಯ...309 ರ ರಹಸ್ಯ ಏನು ಗೊತ್ತಾ ?

ಇನ್ನು ಮೂರನೆಯ ರಾಶಿ ಮಿಥುನ ರಾಶಿ, ಮಿಥುನ ರಾಶಿಯ ವ್ಯಕ್ತಿಗಳಿಗೆ
ಹಳದಿ ಬಣ್ಣವು ಶುಭಕಾರಕವಾಗಿದೆ. ಹಳದಿ ಬಣ್ಣ ಮಿಶ್ರಿತ ಇತರ ಬಣ್ಣಗಳೂ ಇವರಿಗೆ ಶುಭಕಾರಕವಾಗಿವೆ. ಹಳದಿ ಬಣ್ಣವು ಬುದ್ಧಿವಂತಿಕೆ, ಮನಸ್ಸು ಹಾಗೂ ಪ್ರೇರಣೆ ನೀಡುವ ವಿಚಾರಗಳ ಪ್ರತೀಕವಾಗಿದೆ. ಹೀಗಾಗಿ ಈ ರಾಶಿಯವರು ಹಳದಿಯನ್ನು ಬಳಸಿದರೆ ಮಾಡುವ ಕೆಲಸದಲ್ಲಿ ಯಶಸ್ಸು ಸಿಗುವುದಲ್ಲದೆ, ಯಾವಾಗಲೂ ಪಾಸಿಟಿವ್ ಚಿಂತನೆಯನ್ನು ಪಡೆಯುತ್ತಾರೆ.

ಕಟಕ ರಾಶಿ, ಈ ರಾಶಿಯವರಿಗೆ ಬಿಳಿ ಬಣ್ಣವು ಉತ್ತಮ. ಬಿಳಿ ಬಣ್ಣ ಮಿಶ್ರಿತ ಇತರ ಬಣ್ಣಗಳೂ ಇವರಿಗೆ ಶುಭಕಾರಕವಾಗಿವೆ. ಈ ಬಣ್ಣವು ಮನಸ್ಸು, ಭಾವನೆಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳುವಂತೆ ಮಾಡುತ್ತದೆ. ಇನ್ನು ಸಿಂಹ ರಾಶಿ, ಈ ರಾಶಿಯವರಿಗೆ ಕೇಸರಿ ಬಣ್ಣವು ಉತ್ತಮ. ಕೇಸರಿ ಬಣ್ಣ ಮಿಶ್ರಿತ ಇತರ ಬಣ್ಣಗಳೂ ಇವರಿಗೆ ಶುಭಕಾರಕವಾಗಿವೆ. ಈ ಬಣ್ಣದಿಂದ ಇವರು ಭಾಗ್ಯವನ್ನು ಪಡೆಯುತ್ತಾರೆ.

ಕನ್ಯಾ ರಾಶಿ, ಈ ರಾಶಿಯವರಿಗೆ ನೀಲಿ ಬಣ್ಣವು ಶುಭಕಾರಕವಾಗಿದೆ. ನೀಲಿ ಬಣ್ಣ ಮಿಶ್ರಿತ ಇತರ ಬಣ್ಣಗಳೂ ಇವರಿಗೆ ಶುಭಕಾರಕವಾಗಿವೆ. ಶುಭ ಕಾರ್ಯಗಳ ಸಂದರ್ಭದಲ್ಲಿ ಈ ಬಣ್ಣಗಳನ್ನು ಬಳಸಿದರೆ ಇವರಿಗೆ ಶ್ರೇಯಸ್ಕರ. ತುಲಾ ರಾಶಿ, ಇವರಿಗೆ ಗುಲಾಬಿ ಬಣ್ಣವು ಶುಭವನ್ನು ತರುತ್ತದೆ. ಈ ಬಣ್ಣ ಸೌಭಾಗ್ಯದ ಪ್ರತೀಕ ಎಂದು ಹೇಳಲಾಗಿದೆ. ಅಲ್ಲದೆ, ತಿಳಿ ಹಳದಿ ಬಣ್ಣವೂ ಇವರಿಗೆ ಒಳತನ್ನುಂಟು ಮಾಡುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಶಕ್ತಿಶಾಲಿ ದುರ್ಗಾ ದೇವಿಯ ಅನುಗ್ರಹ ಈ 8 ರಾಶಿಗೆ ಇಂದಿನಿಂದ ಧನಲಾಭ,ಸ್ತ್ರೀಯರಿಂದ ಲಾಭ,ಮಕ್ಕಳಿಂದ ಜಯ

[irp]


crossorigin="anonymous">