ಉಚಿತ ಯೋಜನೆಗಳಿಗೆ ಶಾಕ್ ನೀಡುತ್ತಾ ಸುಪ್ರೀಂ ಕೋರ್ಟ್…….?||
ಈಗಾಗಲೇ ಪ್ರತಿಯೊಬ್ಬರಿಗೂ ತಿಳಿದಿರುವಂತೆ ಕಾಂಗ್ರೆಸ್ ಪಕ್ಷ ಗೆದ್ದಿದ್ದು ಇವರು ಗೆದ್ದ ನಂತರ ಜನರಿಗೆ ಐದು ಗ್ಯಾರಂಟಿ ಎನ್ನುವ ಉಚಿತವಾಗಿ ಕೊಡುತ್ತೇವೆ ಎನ್ನುವ ಮಾಹಿತಿಯನ್ನು ಹೊರಡಿಸಿದರು. ಅದೇ ರೀತಿಯಾಗಿ ಈ ವಿಚಾರವಾಗಿ ಇಂದು 11ಗಂಟೆಗೆ ಸಭೆ ನಡೆಯಲಿದ್ದು ಈ ಸಮಯದಲ್ಲಿ ಈ ಗ್ಯಾರಂಟಿ ಗಳಿಗೆ ಯಾವ ಯಾವ ಶರತ್ತುಗಳನ್ನು ನೀಡಲಾಗಿದೆ ಅವು ಯಾವ ನಿಯಮಗಳನ್ನು ಕೈಗೊಳ್ಳಲಾಗಿದೆ ಎನ್ನುವ ವಿಚಾರ ಹೊರ ಬರಲಿದೆ.
ಅದೇ ರೀತಿಯಾಗಿ ಈ ಒಂದು ಯೋಜನೆಯನ್ನು ಉಚಿತವಾಗಿ ನೀಡಬೇಕು ಎಂದರೆ ಹಲವಾರು ಶರತ್ತುಗಳನ್ನು ಹಾಕಲಾಗುತ್ತದೆ ಎಂದು ಹೇಳಬಹುದು. ಅದರಲ್ಲೂ ಸುಪ್ರೀಂ ಕೋರ್ಟ್ ಈ ಒಂದು ವಿಚಾರವಾಗಿ ಇಂದು ಜನಗಳಿಗೆ ಯಾವ ಮಾಹಿತಿಯನ್ನು ಹೇಳುತ್ತದೆ ಎನ್ನುವಂತಹ ಗೊಂದಲ ಪ್ರತಿಯೊಬ್ಬರಲ್ಲಿಯೂ ಸಹ ಹುಟ್ಟುತ್ತಿದೆ.
ಹೀಗೆ ಕಾಂಗ್ರೆಸ್ ಪಕ್ಷ ಈ 5 ಗ್ಯಾರಂಟಿಗಳನ್ನು ಈಡೇರಿಸಬೇಕು ಎಂದರೆ ಸರ್ಕಾರದ ಮೇಲೆ ಅಧಿಕ ಒತ್ತಡ ಉಂಟಾಗುತ್ತದೆ. ಅಂದರೆ ಸರ್ಕಾರಕ್ಕೆ ಹಣಕಾಸಿನ ಅವಶ್ಯಕತೆ ಹೆಚ್ಚಾಗುತ್ತದೆ ಎಂದೇ ಹೇಳ ಬಹುದು. ಇದರ ಜೊತೆ ರಾಜ್ಯ ಮತ್ತು ದೇಶಕ್ಕೆ ಆರ್ದಿಕ ಹೊರೆ ಉಂಟಾಗುತ್ತದೆ ಹಾಗಾಗಿ ಈ ವಿಚಾರವಾಗಿ ಯಾವುದೇ ರೀತಿಯ ಸ್ಪಷ್ಟ ಮಾಹಿತಿ ಇನ್ನು ಹೊರ ಬಂದಿಲ್ಲ. ಈ ಒಂದು ಎಲ್ಲಾ ವಿಚಾರಗಳಿಗೂ ಇಂದು ಉತ್ತರ ಸಿಗುತ್ತದೆ.
ಇದರಿಂದ ಮುಂದಿನ ದಿನಗಳಲ್ಲಿ ದೇಶ ದಿವಾಳಿಯಾಗುವ ಪರಿಸ್ಥಿತಿ ಸಹ ಬರಬಹುದು ಎನ್ನುವಂತಹ ಮಾತುಗಳು ಕೇಳಿ ಬರುತ್ತಿದೆ. ಉದಾಹರ ಣೆಗೆ ಪಾಕಿಸ್ತಾನದಲ್ಲಿ ನಡೆಯುತ್ತಿರುವಂತಹ ಸನ್ನಿವೇಶಗಳನ್ನು ನೀವು ನೋಡಿದರೆ ತಿಳಿಯುತ್ತದೆ. ಹಾಗಾಗಿ ಎಲ್ಲ ಉಚಿತ ಗ್ಯಾರಂಟಿಗಳಿಗೆ ಕೆಲವೊಂದಷ್ಟು ಕಡಿವಾಣಗಳನ್ನು ಅಂದರೆ ಕೆಲವೊಂದಷ್ಟು ನಿಯಮಗಳನ್ನು ಹಾಕಿದರೆ ಮಾತ್ರ ಒಳಿತಾಗುತ್ತದೆ. ಇಲ್ಲವಾದರೆ ಇನ್ನಷ್ಟು ತೊಂದರೆಗೆ ಸಿಲುಕುತ್ತದೆ ಎಂದು ಹೇಳಬಹುದು.
ಈ ಒಂದು ವಿಷಯವನ್ನು ಚರ್ಚಿಸುವುದಕ್ಕೆ ಇಂದು ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಆರ್ದಿಕ ತಜ್ಞರು ನೀತಿ ಆಯೋಗದ ಉನ್ನತಾಧಿಕಾರಿ ಗಳು, ಕೇಂದ್ರದ ಸಚಿವರು ಹಾಗೂ ಯೋಜನಾಧಿಕಾರಿಗಳು ಈ ಸಮಿತಿಯ ಸದಸ್ಯರಾಗಿ ಭಾಗಿ ಯಾಗಿದ್ದಾರೆ. ಹಾಗಾಗಿ ಇವರೆಲ್ಲರ ನಿರ್ಧಾರವನ್ನು ಮುಖ್ಯವಾಗಿ ಗಮನಿಸಿ ಆನಂತರ ಈ ಒಂದು ವಿಷಯವಾಗಿ ಮಹತ್ವವಾದಂತಹ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಬಹುದು. ಹಾಗಾಗಿ ಸಮಿತಿಯ ಒಪ್ಪಿಗೆ ಬಳಿಕವೇ ಉಚಿತ ಯೋಜನೆ ಘೋಷಣೆ ಮಾಡಬೇಕು ಎಂದು ಹೇಳಲಾಗಿದೆ.
ಆನಂತರ ಉಚಿತ ಯೋಜನೆಗೆ ತಗುಲುವ ವೆಚ್ಚದ ಕ್ರೂಡೀಕರಣದ ಮಾಹಿತಿ ನೀಡಬೇಕು. ಸುಮ್ಮನೆ ಚುನಾವಣೆಯ ಸಂದರ್ಭದಲ್ಲಿ ಎಲ್ಲ ವನ್ನು ಉಚಿತವಾಗಿ ಕೊಡುತ್ತೇವೆ ಎಂದು ಘೋಷಣೆ ಮಾಡುವಂತಿಲ್ಲ ಹಾಗಾಗಿ ಈ ಒಂದು ಶರತ್ತುಗಳು ವಿಚಾರವಾಗಿ ರಾಜಕೀಯ ಪಕ್ಷಗಳಿಗೆ ಸಮಿತಿಯ ಕಡೆಯಿಂದ ಹಲವಾರು ಶರತ್ತುಗಳನ್ನು ವಿಧಿಸಲಾಗಿದೆ ಹಾಗಾಗಿ ಇದರ ತೀರ್ಮಾನ ಇಂದು ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.