ನಿತ್ಯ ಈ ಎರಡು ಶ್ಲೋಕ ಹೇಳಿ ನೋಡಿ ನಿಮ್ಮ ಬದುಕಿನಲ್ಲಿ ಎಷ್ಟು ಬದಲಾವಣೆ ಆಗುತ್ತೆ ನೀವೆ ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ನಿತ್ಯ ತಪ್ಪದೇ ಈ ಎರಡು ಸಾಲಿನ ಶ್ಲೋಕ ಹೇಳಿ ನಿಮ್ಮ ಬದುಕಿನಲ್ಲಿ ಎಷ್ಟು ಬದಲಾವಣೆ ಆಗುತ್ತದೆ…..||

ಸ್ನೇಹಿತರೆ ನಾವು ನಿತ್ಯ ಪೂಜೆಯನ್ನು ಮಾಡಿದಾಗ ಕೊನೆಯದಾಗಿ ಒಂದು ಶ್ಲೋಕವನ್ನು ತಪ್ಪದೇ ದೇವರ ಮುಂದೆ ನಿಂತು ಕೇಳಿಕೊಳ್ಳ ಬೇಕು. ಅದು ಯಾವ ಶ್ಲೋಕ ಎಂದರೆ ಇವತ್ತು ಇಲ್ಲಿ ನೋಡೋಣ. ಯಾಕೆಂದರೆ ನಮ್ಮ ಜೀವನದಲ್ಲಿ ಯಾವ ಕ್ಷಣ ಹೇಗೆ ಇರುತ್ತದೆ? ಅನ್ನುವುದು

ಯಾರಿಗೂ ಅರಿವಿಕೆ ಸಾಧ್ಯವಿರುವುದಿಲ್ಲ ಮತ್ತು ಒಂದು ಹೆಜ್ಜೆ ಯನ್ನು ಇಟ್ಟು ಮತ್ತೊಂದು ಹೆಜ್ಜೆ ಇಡುವುದರಲ್ಲಿ ನಮ್ಮ ಬದುಕಿನಲ್ಲಿ ಯಾವ ರೀತಿ ಬದಲಾವಣೆ ಆಗುತ್ತದೆ ಎಂದರೆ ಯಾವ ರೀತಿ ತಿರುವು ತೆಗೆದು ಕೊಳ್ಳುತ್ತದೆ ಎಂದು ಯಾವತ್ತು ಯಾರಿಗೂ ಗೊತ್ತಾಗುವುದಿಲ್ಲ. ಅದಕ್ಕಾಗಿ ನಾವು ನಿತ್ಯ ಪೂಜೆಯನ್ನು ಮಾಡಬೇಕು. ನಿತ್ಯ ಪೂಜೆಯನ್ನು ಮನೆಯಲ್ಲಿ ದೇವರ ಪೂಜೆ ಆಚರಣೆಯನ್ನೂ

ಮಾಡುತ್ತಾ ಇರುವಾಗ ಆ ದೇವರ ಹತ್ತಿರ ಅದನ್ನು ಕೊಡು ಇದನ್ನು ಕೊಡು ಅಂತ ಕೇಳುವುದಕ್ಕಿಂತ ನಾವು ಕೇಳಿಕೊಳ್ಳುವುದು ಒಂದೇ ಒಂದು, ಅದು ಶ್ಲೋಕದ ವಿಶೇಷತೆ. ಆ ಶ್ಲೋಕದ ವಿಶೇಷತೆಯನ್ನು ಇಲ್ಲಿ ನೋಡೋಣ. ದೇವರ ಪೂಜೆ ಆದಮೇಲೆ ನಾವು ದೇವರ ಒಂದು ಅನುಗ್ರಹಕ್ಕೆ ಸಮರ್ಪಣೆಯನ್ನು ಮಾಡುವಾಗ ನಮಸ್ಕಾರ ಅಥವಾ ಪ್ರದಕ್ಷಿಣೆ ಎಲ್ಲಾ ಮುಗಿದ ನಂತರ ಭಗವಂತನಲ್ಲಿ ಅನನ್ಯವಾಗಿ ಭಕ್ತಿಯಿಂದ

ಏನು ಕೇಳಿಕೊಳ್ಳಬೇಕು ಎಂದರೆ ಅನಾಯಾಸೇನ ಮರಣಂ ಬಿನಾದೇನ್ಯೇನಾ ಜೀವನಂ || ದೇಹಾಂತ ತವ ಸಾನಿಧ್ಯಂ ದೆಹಿ ಮೇ ಪರಮೇಶ್ವರಂ || ಅಂದರೆ ನನ್ನ ಜೀವನ ಅಂತ್ಯ ಅನ್ನುವುದು ಇರುತ್ತದೆಯಲ್ಲ ಅದು ಸಾವು ಯಾಕೆಂದರೆ ಭೂಮಿ ಮೇಲೆ ಹುಟ್ಟಿದ ಮೇಲೆ ಪ್ರತಿಯೊಬ್ಬ ಮನುಷ್ಯನು ಸಾಯಲೇ ಬೇಕು ಅದು ಕಟ್ಟಿಟ್ಟ ಬುತ್ತಿ. ಅನಾಯಾಸೇನ ಮರಣಂ ಯಾರಿಗೂ ತೊಂದರೆ ಕೊಡಲಾರದಂತಹ ಸಾವು ನನಗೆ ಕೊಡು ಎಂದು

ದೇವರಲ್ಲಿ ಬೇಡಿಕೊಳ್ಳಬೇಕು ಅಂದರೆ ನಾವು ಗಟ್ಟಿಮುಟ್ಟು ಆಗಿದ್ದಾಗ ಎಲ್ಲರೂ ನಮಗೆ ಒಂದು ಲೋಟ ನೀರು ಕೊಡುತ್ತಾರೆ. ಆದರೆ ನಾವು ಹಾಸಿಗೆ ಹಿಡಿದು ಮಲಗಿದ್ದಾಗ ಯಾರೂ ಒಂದು ಲೋಟ ನೀರನ್ನು ಕೊಡುವುದಿಲ್ಲ. ಆದರೆ ಆ ಸಮಯದಲ್ಲಿ ಯಾರು ನಮಗೆ ಆಗಲಿಲ್ಲ ಎಂದರೆ ಎಷ್ಟು ಐಶ್ವರ್ಯ? ಎಷ್ಟು ಸಂಪತ್ತು? ಬಂಗಲೆ? ಕಾರು?ಏನಿದ್ದರೇನು ಸುಖ? ಕೊನೆ ಕಾಲದಲ್ಲಿ

ನಾವು ಯಾರಿಗೂ ತೊಂದರೆ ಕೊಡಲಾರದಂತಹ ಸಾವು ನಮಗೆ ಬರಬೇಕು. ಅನ್ನುವುದಾದರೆ ಅನಾಯಾಸೇನ ಮರಣಂ ಅಂತ ಹೇಳಿ ಅನನ್ಯವಾಗಿ ದೇವರಲ್ಲಿ ಭಕ್ತಿಯಿಂದ ಕೇಳಿಕೊಳ್ಳಬೇಕು. ನಾವು ಮಾಡಿದ ಕರ್ಮಗಳನ್ನೆಲ್ಲ ಕಳೆದು ಕೊನೆಯ ಕಾಲದಲ್ಲಿ ಅನಾಯಾಸೇನ ಮರಣಂ ಎಂದು ದೇವರಲ್ಲಿ ಬೇಡಿಕೊಳ್ಳಬೇಕು. ಇದರಿಂದಾಗಿ ನಿಮಗೆ ಕೊನೆಯ ಕಾಲದಲ್ಲಿ ಯಾರಿಗೂ ತೊಂದರೆ ಮಾಡದೆ ಒಂದು ಒಳ್ಳೆಯ ಸಾವು ಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ಅದು ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *