ನೀರಿನಲ್ಲಿ ಉಪ್ಪು ಬೆರೆಸಿ ಬೇವಿನ ಎಲೆಯಿಂದ ಈ ಒಂದು ಸಣ್ಣ ಪ್ರಯೋಗ ಮಾಡಿ ನಂತರ ಹಣದ ವಿಷ್ಯದಲ್ಲಿ ಆಗೋದನ್ನ ‌ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ನೀರಿನಲ್ಲಿ ಉಪ್ಪು ಬೆರೆಸಿ ಬೇವಿನ ಎಲೆಯಿಂದ ಈ ಒಂದು ಸಣ್ಣ ಪ್ರಯೋಗ ಮಾಡಿ, ನಂತರ ಮನೆಯ ಆರ್ಥಿಕ ಸ್ಥಿತಿಯಲ್ಲಾಗುವ ಬದಲಾವಣೆಯನ್ನು ನೋಡಿ…

ನೀರು ಜೀವ ಜಲ. ಪಂಚಭೂತಗಳಲ್ಲಿ ಒಂದಾಗಿರುವ ನೀರಿಲ್ಲದಿದ್ದರೆ ಈ ಭೂಮಿ ಸರ್ವನಾಶ ಎಂದು ಹೇಳಬಹುದು. ಯಾಕೆಂದರೆ ನೀರು ಅಷ್ಟು ಅವಶ್ಯಕವಾದ ವಸ್ತು. ಒಬ್ಬ ವ್ಯಕ್ತಿ ಆಹಾರ ಇಲ್ಲದೆ ಬೇಕಾದರೆ ಇರಬಹುದು. ಆದರೆ ನೀರು ಕುಡಿಯದೆ ಹೆಚ್ಚು ದಿನ ಇರಲು ಸಾಧ್ಯವೇ ಇಲ್ಲ. ನಮ್ಮ ದೇಹಕ್ಕೂ ಹಾಗೂ ಈ ಭೂಮಿಗೂ ಕೂಡ ನೀರು ಅಷ್ಟು ಅವಶ್ಯಕವಾದ ವಿಷಯ.

ನೀರು ಎಂದರೆ ಪ್ರಕೃತಿ, ನೀರನ್ನು ತಾಯಿ ಗಂಗೆಗೂ ಕೂಡ ಹೋಲಿಸುತ್ತಾರೆ. ಈ ನೀರಿಗೆ ಪ್ರಕೃತಿದತ್ತವಾಗಿಯೇ ಒಂದು ವಿಶೇಷವಾದ ಶಕ್ತಿ ಇದೆ. ನೀರಿನ ಜೊತೆ ಮಾತನಾಡಿದರೆ ನಾವು ಪ್ರಕೃತಿ ಜೊತೆ ಮಾತನಾಡಿದಂತೆ ಸರಿ. ಹಾಗಾಗಿ ಪದೇಪದೇ ನಾವು ನೀರಿರುವ ಜಾಗಗಳಿಗೆ ಭೇಟಿ ಕೊಡುವುದು ಮನಸ್ಸಿಗೆ ಮುದವನ್ನು ನೀಡುತ್ತದೆ ಹಾಗೂ ಅನೇಕ ಮಾನಸಿಕ ತೊಳಲಾಟಗಳನ್ನು ತೊಡೆದು ಹಾಕಿ ಒಂದು ಎನರ್ಜಿಯನ್ನು ಸಹ ನೀಡುತ್ತದೆ.

ಇಂದು ನಾವು ಈ ಅಂಕಣದಲ್ಲಿ ನೀರಿನ ಮೂಲಕ ಒಂದು ಸಣ್ಣ ಉಪಾಯ ಮಾಡಿ ಹೇಗೆ ಹಣದ ಹೊಳೆಯನ್ನು ಮನೆಗೆ ಹರಿದು ಬರುವ ರೀತಿ ಮಾಡಬಹುದು ಎನ್ನುವ ವಿಷಯವನ್ನು ತಿಳಿಸಿ ಕೊಡುತ್ತಿದ್ದೇವೆ. ಯಾವುದೇ ಹೆಚ್ಚು ಖರ್ಚು ಇಲ್ಲದೆ ಈ ಒಂದು ಸಣ್ಣ ಟೆಕ್ನಿಕ್ ಮಾಡಿದರೆ ಸಾಕು ಮ್ಯಾಜಿಕ್ ರೀತಿಯಲ್ಲಿ ನಿಮ್ಮ ಮನೆಯಲ್ಲಿರುವ ನೆಗೆಟಿವ್ ಎನರ್ಜಿಗಳು ದೂರ ಹೋಗಿ ಸಕರಾತ್ಮಕತೆ ತುಂಬಿ ಬದುಕು ಬದಲಾಗುತ್ತದೆ.

ಯಾವಾಗಲೂ ಯಾವುದಾದರೂ ಒಂದು ವಿಷಯ ಆಗುತ್ತದೆಯಾ ಎಂದು ಪದೇಪದೇ ಕೇಳಿದಾಗ ನೀರಿನ ಮೇಲೆ ಬರೆದುಕೊ ಎಂದು ಹಿರಿಯರು ಹೇಳುತ್ತಾರೆ. ಇದರ ಹಿಂದಿನ ಅರ್ಥ ಇಷ್ಟೇ, ನಮ್ಮ ಮನಸ್ಸಿನಾಳದಲ್ಲಿ ಯಾವುದಾದರೂ ಒಂದು ವಿಷಯ ಆಗಬೇಕು ಎಂದು ನಾವು ಅಂದುಕೊಂಡಿದ್ದರೆ ಹೇಗೆ ದೇವರ ಬಳಿ ಅದಕ್ಕಾಗಿ ಪ್ರಾರ್ಥನೆ ಮಾಡುತ್ತೀವೋ ಹಾಗೆ ಹರಿಯುವ ನೀರಿನಲ್ಲಿ ಅದನ್ನು ಬರೆದುಕೊಂಡರೆ ಅದು ಶೀಘ್ರವಾಗಿ ನಡೆಯುತ್ತದೆ ಎನ್ನುವ ನಂಬಿಕೆ.

ನೀವು ಸಹ ನಿಮ್ಮ ಯಾವುದೇ ಕನಸಿನ ಬಗ್ಗೆ ಹರಿಯುವ ನೀರಿನಲ್ಲಿ ಬರೆದು ಪರೀಕ್ಷೆ ಮಾಡಿ ನೋಡಬಹುದು. ಅದೇ ರೀತಿಯಾಗಿ ಮತ್ತೊಂದು ಟೆಕ್ನಿಕ್ ಏನೆಂದರೆ, ಶನಿವಾರದಂದು ಮುಂಜಾನೆ ಹೊತ್ತು ಒಂದು ಚಿಕ್ಕ ಸ್ಟೀಲ್ ಅಥವಾ ತಾಮ್ರದ ಬಿಂದಿಗೆ ಅಲ್ಲಿ ನೀರು ತುಂಬಿಕೊಂಡು ಅದಕ್ಕೆ ಒಂದು ಹಿಡಿ ಉಪ್ಪು ಹಾಕಿ.

ನಂತರ ಒಂದಿಷ್ಟು ಬೇವಿನ ಗರಿಗಳನ್ನು ಹಿಡಿದುಕೊಂಡು ಮನೆಯ ಮೂಲೆ ಮೂಲೆಗೂ ಮನೆಯ ಹೊರಗಡೆ ಸುತ್ತಲೂ ನೀರನ್ನು ಪ್ರೋಕ್ಷಣೆ ಮಾಡುತ್ತಾ ಬನ್ನಿ. ಈ ರೀತಿ ಮಾಡಿದರೆ ಯಾವುದೇ ಕೆಟ್ಟ ದೃಷ್ಟಿ ಅಥವಾ ಮಾಟ ಮಂತ್ರ ಗಳ ಪ್ರಯೋಗ ಆಗಿದ್ದರು ನಿವಾರಣೆ ಆಗುತ್ತದೆ. ನಂತರ ನಿಮ್ಮ ಮನೆಯ ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ.

By admin

Leave a Reply

Your email address will not be published. Required fields are marked *