ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ಉಚಿತ ವಿದ್ಯುತ್ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ…
ಕಾಂಗ್ರೆಸ್ ಪಕ್ಷವು ಚುನಾವಣೆಗೂ ಮುಂಚೆ ರಾಜ್ಯದ ಜನತೆಗೆ ಭರವಸೆ ಕೊಟ್ಟಿದ್ದ ಗ್ಯಾರೆಂಟಿ ಕಾರ್ಡ್ ಯೋಜನೆಗಳನ್ನು, ಗೆದ್ದು ಸರ್ಕಾರ ಸ್ಥಾಪಿಸಿದ ಬಳಿಕ ಕೊಟ್ಟ ಮಾತಿಗೆ ತಪ್ಪದೆ ಜಾರಿಗೆ ತರುತ್ತಿದೆ. ಪ್ರತಿಯೊಂದು ಯೋಜನೆಗೂ ಕೂಡ ಶರತ್ತು ಹಾಗೂ ನಿಬಂಧನೆಗಳ ಜೊತೆ ಮಾರ್ಗಸೂಚಿಯನ್ನು ರೂಪಿಸಿ ಆದೇಶ ಪತ್ರವನ್ನು ಹೊರಡಿಸುತ್ತಿದೆ.
ಶ್ರೀ ಬನಶಂಕರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕ್ ಶ್ರೀ ಗಣಪತಿ ಭಟ್ ಪೋನ್ – 9972030557.ಮಾಟಮಂತ್ರ,ಗಂಡ ಹೆಂಡತಿ ಕಲಹ,ಗುಪ್ತ ಸಮಸ್ಯೆಗಳು,ಹಣಕಾಸು,ಸಾಲಬಾಧೆ,ಪ್ರೀತಿ ಪ್ರೇಮ ವಿಚಾರ,ಶತ್ರು ಬಾಧೆ,ನಿಮ್ಮ ಜೀವನದಲ್ಲಿ ಏನೆ ಕಠಿಣ ಕಷ್ಟವಿದ್ದರೂ ಶೀಘ್ರವಾಗಿ ಪರಿಹಾರ ನೀಡಲಾಗುತ್ತದೆ ಈಗಲೆ ಕರೆ ಮಾಡಿ 9972030557
ಅದರ ಸಂಬಂಧ ಗೃಹಜ್ಯೋತಿ ಯೋಜನೆಯು ಕಾಂಗ್ರೆಸ್ ಪಕ್ಷ ಘೋಷಿಸಿದ ಮೊದಲ ಗ್ಯಾರಂಟಿ ಕಾರ್ಡ್ ಯೋಜನೆ ಆಗಿದ್ದು, ಈ ಯೋಜನೆಯಡಿ ಪ್ರತಿ ಕುಟುಂಬಕ್ಕೂ ಕೂಡ 200 ಯೂನಿಟ್ ವಿದ್ಯುತ್ ಅನ್ನು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಉಚಿತವಾಗಿ ಕೊಡುತ್ತೇವೆ ಎಂದು ಗ್ಯಾರಂಟಿ ಕಾರ್ಡ್ ಗಳಲ್ಲಿ ಸಹಿ ಮಾಡಿ ಪಕ್ಷದ ವರಿಷ್ಠರುಗಳು ನೀಡಿದ್ದರು.
ಅಂತೆಯೇ ಜುಲೈ ತಿಂಗಳಿನಿಂದಲೇ ರಾಜ್ಯಾದ್ಯಂತ ಈ ಯೋಜನೆ ಜಾರಿಗೆ ಬರಲಿದೆ. ಇದಕ್ಕೆ ಸಂಬಂಧಪಟ್ಟ ಹಾಗೆ ಮುಖ್ಯಮಂತ್ರಿಗಳ ಆದೇಶ ಪತ್ರದಲ್ಲಿರುವ ಪ್ರಮುಖ ಅಂಶಗಳು ಈ ರೀತಿ ಇವೆ.
● ಈ ಯೋಜನೆಯನ್ನು ಜುಲೈ ವಿದ್ಯುತ್ ಬಳಕೆಗೆ ಆಗಸ್ಟ್ ನಲ್ಲಿ ನೀಡುವ ಬಿಲ್ ಗೆ ಅನ್ವಯವಾಗುವಂತೆ ಶರತ್ತುಗಳೊಂದಿಗೆ ಜಾರಿಗೆ ತರಲು ನಿರ್ಧರಿಸಲಾಗಿದೆ.
● ಈ ಯೋಜನೆಯು ಗೃಹ ಬಳಕೆಯ ವಿದ್ಯುತ್ ಸಂಪರ್ಕಗಳಿಗೆ ಮಾತ್ರ ಅನ್ವಯವಾಗುತ್ತದೆ. ವಾಣಿಜ್ಯ ಉದ್ದೇಶಗಳಿಗೆ ವಿದ್ಯುತ್ ಉಪಯೋಗಿಸಿದಲ್ಲಿ ಅನ್ವಯವಾಗುವುದಿಲ್ಲ.
● ಗೃಹ ವಿದ್ಯುತ್ ಬಳಕೆದಾರರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಸ್ಥಾವರಗಳಿದ್ದರೆ ಒಂದು ಮೀಟರ್ ಗೆ ಮಾತ್ರ ಈ ಯೋಜನೆ ಐಡಿಯ ಸೌಲಭ್ಯಕ್ಕೆ ಮಾತ್ರ ಅರ್ಹರಾಗುವರು.
● ಸರಾಸರಿ ಯೂನಿಟ್ ಜೊತೆಗೆ 10%ರ ಮಿತಿ. ಮಿತಿ ದಾಟಿದ ಪ್ರಮಾಣದಷ್ಟು ಬಿಲ್ ಕಟ್ಟಬೇಕಾಗುತ್ತದೆ, 200 ಯೂನಿಟ್ ವಿದ್ಯುತ್ ಗಿಂತ ಹೆಚ್ಚು ಬಳಕೆ ಮಾಡಿದ ಗ್ರಾಹಕರು ಪೂರ್ಣ ಬಿಲ್ ಮೊತ್ತವನ್ನು ಕಟ್ಟಬೇಕಾಗುತ್ತದೆ.
ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಏನೆಂದರೆ ಒಂದು ವರ್ಷದಿಂದ ಕುಟುಂಬಗಳು ಬಳಸಿರುವ ವಿದ್ಯುತ್ ನ ಸರಾಸರಿ ಮೇಲೆ 10% ಮಾತ್ರ ಹೆಚ್ಚು ವಿದ್ಯುತ್ ಬಳಕೆಗೆ ಅವಕಾಶ ನೀಡಲಾಗಿದೆ. ಹೆಚ್ಚು ವಿದ್ಯುತ್ ಪೋಲು ಮಾಡುವುದನ್ನು ತಡೆಗಟ್ಟಲು ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಇದರ ಜೊತೆಗೆ ಇಂದಿನ ಸಚಿವರಾದ ಕೆಜೆ ಜಾರ್ಜ್ ಅವರು ಒಂದು R.R ಸಂಖ್ಯೆಗೆ ಮಾತ್ರ ಉಚಿತ ವಿದ್ಯುತ್ ಇರುತ್ತದೆ ರಾಜ್ಯದಲ್ಲಿ 2.15 ಕೋಟಿ R.Rಸಂಖ್ಯೆಗಳು ಇವೆ.
ಈ ಯೋಜನೆಗೆ ಅಂದಾಜು 13,000 ಕೋಟಿ ರೂ ವೆಚ್ಚವಾಗಬಹುದು ಆದರೂ ಕೂಡ ಯೋಜನೆಯನ್ನು ಜಾರಿಗೆ ತರುತ್ತೇವೆ ಎಂದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪತ್ರಿಕೆಗಳಲ್ಲಿ ಮತ್ತೊಂದು ಸುದ್ದಿ ಪ್ರಸಾರವಾಗುತ್ತಿದೆ. ಅದೇನೆಂದರೆ ಫಲಾನುಭವಿಗಳು ತಮ್ಮ ಕಸ್ಟಮರ್ ಐಡಿ ಮತ್ತು ಅಕೌಂಟ್ ಐಡಿಯನ್ನು ಆಧಾರ್ ಕಾರ್ಡ್ ಲಿಂಕ್ ಮಾಡಬೇಕು. ಅದರ ಮೂಲಕ ಫಲಾನುಭವಿಗಳನ್ನು ಸರ್ಕಾರ ಗುರುತಿಸುತ್ತದೆ ಎನ್ನುವ ಸುದ್ದಿ ಹರಿದಾಡುತ್ತಿದೆ.