ಮಹಿಳೆಯರ ಪ್ರಯಾಣಕ್ಕೆ ಸ್ಮಾರ್ಟ್ ಕಾರ್ಡ್ ಗಳ ವಿತರಣೆ……||
ಈಗಾಗಲೇ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಆದೇಶವನ್ನು ಹೊರಡಿಸಿದ್ದು ಇದೇ 11ನೇ ತಾರೀಖಿನಿಂದ ಈ ಒಂದು ಆದೇಶ ಜಾರಿಗೆ ಬರಲಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಅದೇ ರೀತಿಯಾಗಿ ಮಹಿಳೆಯರು ಇನ್ನು ಮುಂದೆ ಯಾವುದೇ ರೀತಿಯ ಹಣವನ್ನು ಪಾವತಿ ಮಾಡುವ ಅವಶ್ಯಕತೆ ಇಲ್ಲ. ಬದಲಿಗೆ ಎಲ್ಲಿಗೆ ಬೇಕಾದರೂ ಉಚಿತವಾಗಿ ಪ್ರಯಾಣಿಸಬಹುದಾಗಿದೆ.
ನಮ್ಮ ರಾಜ್ಯದ ಒಳಗಡೆ ಮಾತ್ರ ಈ ಒಂದು ಅವಕಾಶ ಇದ್ದು ಬೇರೆ ರಾಜ್ಯಕ್ಕೆ ಹಾಗೂ ಬೇರೆ ರಾಜ್ಯದವರಿಗೆ ಈ ಒಂದು ಯೋಜನೆಯ ಪ್ರಯೋಜನ ಸಿಗುವುದಿಲ್ಲ. ಹಾಗಾಗಿ ಪ್ರತಿಯೊಬ್ಬ ಮಹಿಳೆಯು ಕೂಡ ಈ ಒಂದು ಯೋಜನೆಯನ್ನು ಪಡೆದುಕೊಳ್ಳಬೇಕು ಎಂದರೆ ಸರಕಾರಿ ಬಸ್ ನಲ್ಲಿ ಪ್ರಯಾಣಿಸಬೇಕು ಎಂದರೆ KSRTC ಅವರು ವಿಚರಿಸುವ ಸ್ಮಾರ್ಟ್ ಕಾರ್ಡ್ ಉಪಯೋಗಿಸಬೇಕಾಗುತ್ತದೆ.
ಹೌದು KSRTC ಅವರಿಗೆ ಎಷ್ಟು ಜನ ಮಹಿಳೆಯರು ಪ್ರಯಾಣಿಸಿದರು ಎನ್ನುವಂತಹ ಲೆಕ್ಕ ಸಿಗಬೇಕು ಎನ್ನುವ ಉದ್ದೇಶದಿಂದ ಈ ಒಂದು ಹೊಸ ಮಾರ್ಗವನ್ನು ಅನುಸರಿಸಿದ್ದು ಆ ಒಂದು ಕಾರ್ಡ್ ಅನ್ನು ತೋರಿ ಸುವ ಮೂಲಕ ಮಹಿಳೆಯರು ಉಚಿತವಾಗಿ ಬಸ್ ಗಳಲ್ಲಿ ಪ್ರಯಾಣಿಸ ಬಹುದಾಗಿದೆ. ಹಾಗಾದರೆ ಯಾವುದು ಆ ಕಾರ್ಡ್ ಹಾಗೂ ಅದನ್ನು ಮಾಡಿಸುವುದು ಎಲ್ಲಿ ಇದಕ್ಕೆ ಯಾವ ಕೆಲವು ಮಾರ್ಗಸೂಚಿಗಳನ್ನು ಅನುಸರಿಸಬೇಕಾಗುತ್ತದೆ.
ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಈ ಒಂದು ಕಾರ್ಡ್ ಅನ್ನು ಪಡೆದುಕೊಳ್ಳಬೇಕು ಎಂದರೆ ಸೇವಾ ಸಿಂಧು ಮೂಲಕ ಅರ್ಜಿಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಹೌದು ಇದರ ಮೂಲಕ ಪ್ರತಿಯೊಬ್ಬರೂ ಕೂಡ ಸ್ಮಾರ್ಟ್ ಕಾರ್ಡ್ ಪಡೆಯಬಹುದು ಈ ಒಂದು ಕಾರ್ಡ್ ಮುಂದಿನ ಮೂರು ತಿಂಗಳ ಅವಧಿಯ ಒಳಗೆ.
ಪ್ರತಿಯೊಬ್ಬರಿಗೂ ಅಂದರೆ ಮಹಿಳೆಯರಿಗೆ ವಿತರಿಸಲಾಗುತ್ತದೆ ಎಂದು ಸ್ಪಷ್ಟೀಕರಿಸಿದ್ದಾರೆ. ಈ ಒಂದು ಕಾರ್ಡ್ ನಲ್ಲಿ ಆ ಮಹಿಳೆಯ ಭಾವಚಿತ್ರ ಹಾಗೂ ಅವರ ವಿಳಾಸ ಹಾಗೂ ಇನ್ನೂ ಕೆಲವೊಂದಷ್ಟು ಮಾಹಿತಿಗಳನ್ನು ಒಳಗೊಂಡಿರುವಂತಹ ಸ್ಮಾರ್ಟ್ ಕಾರ್ಡ್ ತೋರಿಸಿ ಮಹಿಳೆಯರು ಇನ್ನು ಮುಂದೆ ಬಸ್ ಗಳಲ್ಲಿ ಉಚಿತವಾಗಿ ಸಂಚರಿಸಬಹುದಾಗಿದೆ. ಅದರಲ್ಲೂ ಮೊದಲೇ ಹೇಳಿದಂತೆ ಈ ಒಂದು ಕಾರ್ಡ್ ಪಡೆದುಕೊಳ್ಳಬೇಕು ಎಂದರೆ ಅರ್ಜಿಯನ್ನು ಸಲ್ಲಿಸುವುದು ಕಡ್ಡಾಯ ಎಂದೇ ಹೇಳಿದ್ದಾರೆ.
ಬದಲಿಗೆ ಯಾವುದೇ ರೀತಿಯ ಕಾರ್ಡ್ ಹೊಂದಿಲ್ಲದೆ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಒಂದು ಸ್ಮಾರ್ಟ್ ಕಾರ್ಡ್ ಮಾಡಿಸಿಕೊಳ್ಳುವುದು ಉತ್ತಮ ಹಾಗೂ ಈ ಪ್ರಯೋಜನವನ್ನು ಪಡೆದುಕೊಳ್ಳುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಬಸ್ ಪ್ರಯಾಣದಲ್ಲಿ ಪುರುಷರಿಗೂ ಕೂಡ 50% ಆದ್ಯತೆ ಇರುತ್ತದೆ ಎಂದೇ ಹೇಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.