ಹೊಕ್ಕಳಿಗೆ ಇದನ್ನು ಹಚ್ಚಿಕೊಂಡರೆ ಅದೃಷ್ಟ ನಿಮ್ಮದಾಗುತ್ತೆ……||
ಅರಿಶಿಣವನ್ನು ಅಡುಗೆ ಮನೆಗೆ ಅತ್ಯಂತ ಉಪಯುಕ್ತ ಮಸಾಲೆಗಳಲ್ಲಿ ಒಂದು ಅಂತ ಪರಿಗಣಿಸಲಾಗಿದೆ ಯಾಕೆ ಎಂದರೆ ಅಡುಗೆ ಮಾಡುವಾಗ ಸಾಮಾನ್ಯವಾಗಿ ಎಲ್ಲದಕ್ಕೂ ಅರಿಶಿನವನ್ನು ಬಳಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಹೊಕ್ಕಳಿಗೆ ಅರಿಶಿನವನ್ನು ಹಚ್ಚುವುದು ದೇಹಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನಗಳನ್ನು ನೀಡುತ್ತದೆ. ಅರಿಶಿನವು ಜೀವನಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನಕಾರಿ. ಕಚ್ಚಾ ಅರಿಶಿನದಿಂದ ಚಿಟಿಕೆ ಅರಿಶಿಣದ ಪುಡಿಯವರೆಗೆ ಇದು ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ.
ಅರಿಶಿನವನ್ನು ನಮ್ಮ ಅಡುಗೆ ಮನೆಯಲ್ಲಿ ಮಸಾಲೆಯಾಗಿ ಬಳಸಲಾಗು ತ್ತದೆ ಮತ್ತು ಇದನ್ನು ಪೂಜೆಯಲ್ಲಿಯೂ ಸಹ ಬಳಸಲಾಗುತ್ತದೆ. ಇದಲ್ಲದೆ ಜ್ಯೋತಿಷ್ಯದಲ್ಲಿ ಅರಿಶಿಣಕ್ಕೆ ವಿಶೇಷ ಮಹತ್ವ ಇದೆ. ಹಣೆ ಮೇಲೆ ಅರಿಶಿಣ ತಿಲಕವನ್ನು ಇಡುವ ಮೂಲಕ ದೇಹದ ಎಲ್ಲಾ ಚಕ್ರಗಳು ಸರಾಗವಾಗಿ ಚಲಿಸುತ್ತವೆ ಅಂತ ನಂಬಲಾಗಿದೆ. ಜೊತೆಗೆ ಇದು ಮನಸ್ಸು ಮತ್ತು ಮೆದುಳಿಗೆ
ಶಕ್ತಿಯನ್ನು ಒದಗಿಸೋಕೂ ಕೂಡ ಸಹಾಯ ಮಾಡುತ್ತದೆ. ಅರಿಶಿಣ ವನ್ನು ಹಣೆಯ ಮೇಲೆ ಹಚ್ಚುವುದು ಮಾತ್ರವಲ್ಲದೆ ಹೊಕ್ಕಳಿನ ಮೇಲು ಕೂಡ ಹಚ್ಚುವುದು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಹೊಕ್ಕಳಿನ ಮೇಲೆ ಅರಿಶಿನವನ್ನು ಹಚ್ಚುವುದರಿಂದ ಆರೋಗ್ಯಕ್ಕೆ ಮಾತ್ರವಲ್ಲದೆ ಜ್ಯೋತಿಷ್ಯದ ಕಾರಣಗಳಿಗಾಗಿಯೂ ಅನೇಕ ರೀತಿಯಲ್ಲಿ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಹೊಕ್ಕಳಿಗೆ ಅರಿಶಿನವನ್ನು ಹಚ್ಚುವುದರಿಂದ ಆಗುವ ಜ್ಯೋತಿಷ್ಯ ಪ್ರಯೋಜನದ ಬಗ್ಗೆ ಈಗ ನಾವು ತಿಳಿದುಕೊಳ್ಳೋಣ.
ಹೊಕ್ಕಳಿನ ಪ್ರದೇಶವನ್ನು ದೇಹದ ಶಕ್ತಿಯುತ ಶಕ್ತಿ ಬಿಂದು ಎಂದು ಪರಿಗಣಿಸಲಾಗುತ್ತದೆ. ಮತ್ತು ಈ ಪ್ರದೇಶದ ಮೇಲೆ ಅರಿಶಿನವನ್ನು ಹಚ್ಚುವುದರಿಂದ ದೇಹದ ಶಕ್ತಿಯ ಹರಿವನ್ನು ಸಕ್ರಿಯಗೊಳಿಸುವುದಕ್ಕೆ ಮತ್ತು ಸಮತೋಲನಗೊಳಿಸುವುದಕ್ಕೆ ಸಹಾಯಮಾಡುತ್ತದೆ. ಈ ಕಾರಣಕ್ಕಾಗಿ ಜ್ಯೋತಿಷ್ಯದಲ್ಲಿ ಸ್ನಾನದ ನಂತರ ಹೊಕ್ಕಳಿನ ಭಾಗಕ್ಕೆ ಚಿಟಿಕೆ ಅರಿಶಿನವನ್ನು ಹಚ್ಚುವುದು ಸೂಕ್ತ ಎನ್ನಲಾಗುತ್ತದೆ. ಅರಿಶಿನ ಹಚ್ಚುವುದರಿಂದ ಯಾವ ರೀತಿ ಆರೋಗ್ಯ ಪ್ರಯೋಜನಗಳು ಉಂಟಾಗುತ್ತದೆ ಎಂದು ನೋಡುವುದಾದರೆ.
ಅರಿಶಿಣವು ನಂಜು ನಿರೋಧಕ, ಉರಿಯೂತ ನಿವಾರಕ, ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಹಾಗಾಗಿ ಅದನ್ನು ಹೊಕ್ಕಳಿನ ಪ್ರದೇಶಕ್ಕೆ ಹಚ್ಚುವುದರಿಂದ ದೇಹದ ರೋಗ ನಿರೋಧಕ ಶಕ್ತಿಯನ್ನು ಉತ್ತೇಜಿಸುವುದಕ್ಕೆ, ಸುಂಕನ್ನು ತಡೆಗಟ್ಟುವುದಕ್ಕೆ ಮತ್ತು ಒಟ್ಟಾರೆ ಆರೋಗ್ಯವನ್ನು ಸುಧಾರಿಸುವುದಕ್ಕೆ ಸಹಾಯ ಮಾಡುತ್ತದೆ. ನಮ್ಮ ದೇಹದ ಹೊಕ್ಕಳಿನ ಭಾಗವನ್ನು ಆತ್ಮದ ಆಸನ ಎಂದು ಪರಿಗಣಿಸಲಾಗುತ್ತದೆ.
ಮತ್ತು ಈ ಪ್ರದೇಶದ ಮೇಲೆ ಅರಿಶಿಣವನ್ನು ಹಚ್ಚುವುದು ದೇಹದಲ್ಲಿ ಆಧ್ಯಾತ್ಮಿಕ ಶಕ್ತಿಯನ್ನು ಸಕ್ರಿಯಗೊಳಿಸುವುದಕ್ಕೆ, ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಉತ್ತೇಜಿಸುವುದಕ್ಕೆ ಮತ್ತು ದೇವರ ಜೊತೆಗಿನ ಸಂಪರ್ಕ ವನ್ನು ಹೆಚ್ಚಿಸುವುದಕ್ಕೆ ಉತ್ತಮ ಮಾರ್ಗ ಎಂದು ಪರಿಗಣಿಸಲಾಗುತ್ತದೆ. ಹೊಕ್ಕಳಿಗೆ ಅರಿಶಿನವನ್ನು ಹಚ್ಚುವ ಮೂಲಕ ದೇಹವು ನೇರವಾಗಿ ದೇವನೊಂದಿಗೆ ಸಂಪರ್ಕವನ್ನು ಸಾಧಿಸುವುದಕ್ಕೆ ಸಾಧ್ಯವಾಗುತ್ತದೆ ಮತ್ತು ಮನಸ್ಸನ್ನು ಭಕ್ತಿಯಲ್ಲಿ ಕೇಂದ್ರೀಕರಿಸುವುದಕ್ಕೆ ಸಾಧ್ಯವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.