ಸಿಹಿ ಸುದ್ದಿ ರೇಷನ್ ಕಾರ್ಡ್ ಗೆ ಅರ್ಜಿ ಆಹ್ವಾನ.. ಬೇಕಾಗಿರುವ ದಾಖಲೆಗಳು ಇವು..ಮನೆಯಿಂದಲೆ ಅಪ್ಲೆ ಮಾಡಿ

ರೇಷನ್ ಕಾರ್ಡ್ ಗೆ ಅರ್ಜಿ ಆಹ್ವಾನ….|| ಮನೆಯಿಂದಲೇ ಎಪಿಎಲ್ ಅಥವಾ ಬಿಪಿಎಲ್ ಕಾರ್ಡ್ ಸಂಪೂರ್ಣ ಮಾಹಿತಿ…..||

WhatsApp Group Join Now
Telegram Group Join Now

ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಅವರು ಈ ಬಾರಿ ಕಾಂಗ್ರೆಸ್ ಪಕ್ಷ ಏನಾದರೂ ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿಯನ್ನು ನಾವು ಕೊಡುತ್ತೇವೆ ಎನ್ನುವಂತಹ ಭರವಸೆಯನ್ನು ನೀಡಿದ್ದರು. ಅದೇ ರೀತಿಯಾಗಿ ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾರೆ.

ಅದೇ ರೀತಿಯಾಗಿ ಯಾವ 5 ಗ್ಯಾರಂಟಿಗಳನ್ನು ಅವರು ನೀಡಿದ್ದರು ಎಂದು ಮೊದಲು ತಿಳಿದುಕೊಳ್ಳೋಣ. ಆನಂತರ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಸಂಪೂರ್ಣವಾದ ಮಾಹಿತಿಯನ್ನು ಒಂದೊಂದಾಗಿ ತಿಳಿದುಕೊಳ್ಳುತ್ತಾ ಹೋಗೋಣ. ಮೊದಲನೆಯದಾಗಿ ಯಾರ ಬಳಿ ಬಿಪಿಎಲ್ ಕಾರ್ಡ್ ಇರುತ್ತದೆಯೋ ಅಂತವರಿಗೆ ಅಂದರೆ ಪ್ರತಿಯೊಬ್ಬರಿಗೂ ಕೂಡ ತಲಾ ಹತ್ತು ಕೆಜಿ ಅಕ್ಕಿಯನ್ನು ವಿತರಿಸುತ್ತೇವೆ ಎಂದು ಹೇಳಿದರು.

ಅದೇ ರೀತಿಯಾಗಿ ಅವರು ಪ್ರತಿಯೊಬ್ಬರಿಗೂ ಕೂಡ 10 ಕೆ.ಜಿ ಅಕ್ಕಿಯನ್ನು ಕೊಡುವುದಾಗಿ ಅದು ಜೂನ್ ತಿಂಗಳಿನಿಂದ ಈ ಒಂದು ವಿಚಾರ ನೆರವೇರುತ್ತದೆ ಎಂದು ಹೇಳಿದರು. ಅದೇ ರೀತಿಯಾಗಿ ಇನ್ನು ಎರಡನೆಯದಾಗಿ ಮನೆಯಲ್ಲಿರುವಂತಹ ಮಹಿಳೆಗೆ ಅದರಲ್ಲೂ ಎಪಿಎಲ್ ಕಾರ್ಡ್ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವಂತಹ ಪ್ರತಿಯೊಬ್ಬರಿಗೂ ಕೂಡ ಉಚಿತವಾಗಿ ಪ್ರತಿ ತಿಂಗಳು 2000 ಹಣ ಕೊಡುವುದಾಗಿ ಹೇಳಿದ್ದರು.

ಅದರಂತೆಯೇ ಆ ಒಂದು ಗ್ಯಾರಂಟಿಯನ್ನು ಸಹ ಈಡೇರಿಸುವುದಾಗಿ ಒಪ್ಪಿಕೊಂಡಿದ್ದಾರೆ. ಆದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿ ಸಿದಂತೆ ಕೆಲವೊಂದಷ್ಟು ಜನರ ಬಳಿ, ಯಾವುದೇ ರೀತಿಯಾದಂತಹ ಎಪಿಎಲ್ ಕಾರ್ಡ್ ಹಾಗೂ ಬಿಪಿಎಲ್ ಕಾರ್ಡ್ ಇಲ್ಲ ಅಂತವರು ಈ ಸಮಯದಲ್ಲಿ ಅರ್ಜಿಯನ್ನು ಹಾಕಿ ಎಪಿಎಲ್ ಕಾರ್ಡ್ ಅಥವಾ ಬಿಪಿಎಲ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದಾಗಿದೆ.

ಆದರೆ ಎಪಿಎಲ್ ಕಾರ್ಡ್ ಯಾರಿಗೆ ಸೇರುತ್ತದೆ ಹಾಗೂ ಬಿಪಿಎಲ್ ಕಾರ್ಡ್ ಯಾರಿಗೆ ಸೇರುತ್ತದೆ ಎಂದು ನೋಡುವುದಾದರೆ. ಯಾವ ಮನೆಯಲ್ಲಿ ಕುಟುಂಬದ ಯಜಮಾನ ಒಂದು ವರ್ಷಕ್ಕೆ ಒಂದು ಲಕ್ಷದ ಇಪ್ಪತ್ತು ಸಾವಿರ ಒಳಗಡೆ ವಾರ್ಷಿಕ ಆದಾಯ ಇರುತ್ತದೆಯೋ ಅಂಥವರಿಗೆ ಬಿಪಿಎಲ್ ಕಾರ್ಡ್ ಪಡೆಯುವಂತಹ ಸಂಪೂರ್ಣವಾದ ಹಕ್ಕು ಇರುತ್ತದೆ ಎಂದೇ ಹೇಳಬಹುದು. ಇವರು ಬಿಪಿಎಲ್ ಕಾರ್ಡ್ ಪಡೆದುಕೊಳ್ಳುವುದಕ್ಕೆ ಬೇಕಾಗುವ ದಾಖಲಾತಿಗಳು ಯಾವುದು ಎಂದರೆ.

ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ, ಇವೆರಡು ದಾಖಲಾತಿಗಳು ಇದ್ದರೆ ಸಾಕು ನೀವು ಬಿಪಿಎಲ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸ ಬಹುದು. ಹಾಗೆಯೇ ಯಾರು ಒಂದು ಲಕ್ಷದ ಇಪ್ಪತ್ತು ಸಾವಿರಕ್ಕೂ ಅಧಿಕ ವಾರ್ಷಿಕ ಆದಾಯವನ್ನು ಪಡೆಯುತ್ತಾರೋ ಅವರು ಎ ಪಿ ಎಲ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]