ಬೆಳಿಗ್ಗೆ ಎದ್ದ ತಕ್ಷಣ ಈ ಮಂತ್ರ ಕೇಳಿ ಅಥವಾ ಹೇಳಿ ನೋಡಿ ಇಡಿ ದಿನ ನೆಮ್ಮದಿ ಇರುತ್ತೆ ಮನೆಯಲ್ಲಿ.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಬೆಳಗ್ಗೆ ಎದ್ದ ತಕ್ಷಣ ಈ ಮಂತ್ರ ಹೇಳಿ ಮುಂದಿನ ಕೆಲಸ ಮಾಡಿ…. ಆ ದಿನಪೂರ್ತಿ ಒಳ್ಳೆಯದಾಗುತ್ತದೆ……||

ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಒಂದಲ್ಲ ಒಂದು ಕಷ್ಟದ ಪರಿಸ್ಥಿತಿಗಳನ್ನು ಅನುಭವಿಸುತ್ತಿರುತ್ತಾರೆ ಹಾಗೂ ಹಲವಾರು ರೀತಿಯ ಸಂಕಷ್ಟಗಳು ಅವರ ಜೀವನದಲ್ಲಿ ಇರುತ್ತದೆ ಅವೆಲ್ಲವನ್ನು ಸಹ ಅವರು ದೂರ ಮಾಡಿಕೊಳ್ಳುವುದಕ್ಕೆ ಹಲವಾರು ವಿಧಾನಗಳನ್ನು ಅನುಸರಿಸುತ್ತಿ ರುತ್ತಾರೆ. ಆದರೆ ಕೆಲವೊಮ್ಮೆ ಅವರು ಯಾವುದೇ ರೀತಿಯ ವಿಧಾನ ವನ್ನು ಅನುಸರಿಸಿದರೂ

ಅದರಿಂದ ಅವರಿಗೆ ಮುಕ್ತಿ ಎನ್ನುವುದು ಸಿಗುತ್ತಿರುವುದಿಲ್ಲ. ಬದಲಿಗೆ ಒಂದರ ಮೇಲೆ ಸಂಕಷ್ಟಗಳು ಅವಘಡಗಳು ಎದುರಾಗುತ್ತಲೇ ಇರುತ್ತದೆ ಆದರೆ ಈ ದಿನ ನಾವು ಹೇಳುವಂತಹ ಈ ಒಂದು ಮಂತ್ರವನ್ನು ಪ್ರತಿನಿತ್ಯ ಹೇಳುವುದರಿಂದ ನಿಮ್ಮ ಜೀವನದಲ್ಲಿ ಬರುವಂತಹ ಎಲ್ಲಾ ಕಷ್ಟದ ಪರಿಸ್ಥಿತಿಗಳು ಸಮಸ್ಯೆಗಳು ಎಲ್ಲವೂ ಸಹ ದೂರವಾಗುತ್ತದೆ ಎಂದೇ ಹೇಳಬಹುದು.

ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಯಾವುದೇ ರೀತಿಯ ಪೂಜೆಯನ್ನು ಯಾವುದೇ ಮಂತ್ರವನ್ನು ಹೇಳಬೇಕು ಎಂದರೆ ಬೆಳಗಿನ ಸಮಯ ಮನೆಎಲ್ಲವನ್ನು ಸ್ವಚ್ಛ ಮಾಡಿ ದೇವರ ಪೂಜೆ ಮಾಡಿ ಆನಂತರ ಪೂಜಾ ವಿಧಾನವನ್ನು ಅನುಸರಿಸ ಬೇಕಾಗುತ್ತದೆ ಆದರೆ ಈಗ ನಾವು ಹೇಳುವಂತಹ ಈ ಒಂದು ಮಂತ್ರಕ್ಕೆ ಯಾವುದೇ ರೀತಿಯಾದ ಪೂಜಾ ವಿಧಾನ ಎನ್ನುವುದು ಇಲ್ಲ. ಬದಲಿಗೆ ಬೆಳಿಗ್ಗೆ ಎದ್ದ ತಕ್ಷಣ ಹಾಸಿಗೆಯ ಮೇಲೆ ಕುಳಿತುಕೊಂಡೇ ಈ ಒಂದು ಮಂತ್ರವನ್ನು ಹೇಳುವುದರಿಂದ.

ನಿಮ್ಮ ಜೀವನದ ಸಂಕಷ್ಟಗಳನ್ನು ದೂರ ಮಾಡಿಕೊಳ್ಳಬಹುದು. ಹಾಗೂ ಪ್ರತಿನಿತ್ಯ ಇದನ್ನು ಹೇಳುವುದರಿಂದ ಆ ದಿನ ಸಂಪೂರ್ಣವಾದಂತಹ ಶುಭ ಸುದ್ದಿಯನ್ನು ಶುಭ ಸುದ್ದಿಯನ್ನು ನೀವು ಪಡೆಯುತ್ತೀರಿ ಎಂದೇ ಹೇಳಬಹುದು. ಹಾಗಾದರೆ ಆ ಒಂದು ಮಂತ್ರ ಯಾವುದು ಹಾಗೂ ಅದನ್ನು ಪ್ರತಿದಿನ ಎಷ್ಟು ಸಾರಿ ಹೇಳಬೇಕು. ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಹಾಗಾದರೆ ಆ ಒಂದು ಮಂತ್ರ ಯಾವುದು ಎಂದು ಈ ಕೆಳಗೆ ತಿಳಿಯೋಣ. ಧರ್ಮೋ ವಿವರ್ಧತಿ ಯುಧಿಷ್ಠಿರ ಕೀರ್ತನೇನ ಪಾಪಂ ಪ್ರಣಶ್ಯತಿ ವೃಕೋದರ ಕೀರ್ತನೇನ | ಶತ್ರುರ್ವಿನಶ್ಯತಿ ಧನಂಜಯ ಕೀರ್ತನೇನ ಮಾದ್ರೀಸುತ್ ಕಥಯತಾಂ ನ ಭವಂತಿ ರೋಗಾಃ || ಈ ಮಂತ್ರವನ್ನು ಪ್ರತಿದಿನ ಬೆಳಗಿನ ಸಮಯ ಹೇಳುವುದರಿಂದ ನಮ್ಮಲ್ಲಿ ಧರ್ಮ ಅಭಿವೃದ್ಧಿಯಾಗುತ್ತದೆ ಎಂದರ್ಥ.

ಯಾವಾಗ ನಮ್ಮಲ್ಲಿ ಧರ್ಮ ಅಭಿವೃದ್ಧಿಯಾಗುತ್ತದೆಯೋ ಆಗ ನಮ್ಮ ಮನಸ್ಸಿನಲ್ಲಿ ಯಾವುದೇ ರೀತಿಯ ಕೆಟ್ಟ ಆಲೋಚನೆಗಳು ಕೆಟ್ಟ ಸನ್ನಿವೇಶಗಳು ಬರುವುದಿಲ್ಲ. ಯಾವಾಗ ನಮ್ಮಲ್ಲಿ ಧರ್ಮ ಹೆಚ್ಚಾಗುತ್ತದೆ ಆಗ ನಮ್ಮಲ್ಲಿರುವಂತಹ ಎಲ್ಲ ಪಾಪ ಕರ್ಮಗಳು ಸಹ ನಮ್ಮಿಂದ ದೂರವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಈ ಒಂದು ಮಂತ್ರವನ್ನು ಹೇಳುವುದು ಒಳ್ಳೆಯದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *