ಯಾರಿವರು ಅವಿವಾ ಬಿದ್ದಪ್ಪ..ಇವರ ಬಿಜಿನೆಸ್ ಎಷ್ಟು ಕೋಟಿ ಗೊತ್ತಾ ? ಶ್ರೀಮಂತೆಯ ಬ್ಯಾಕ್ ಗ್ರೌಂಡ್ ನೋಡಿ.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಯಾರಿವರು ಅವಿವಾ ಬಿದ್ದಪ್ಪ? ಈಕೆಯ ಬಿಜಿನೆಸ್ ಏನು…..?

ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅವರು ಅವಿವಾ ಬಿದ್ದಪ್ಪ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಗೌಡರ ಸಂಪ್ರದಾಯದಲ್ಲಿ ಮದುವೆ ಶಾಸ್ತ್ರ ನೆರವೇರಿದೆ. ಅವಿವಾ ಅವರಿಗೆ ಮಾಂಗಲ್ಯ ಧಾರಣೆ ಮಾಡುವ ಮೂಲಕ ನಟ ಅಭಿಷೇಕ್ ಅಂಬರೀಶ್ ದೀರ್ಘ ಕಾಲದ ಗೆಳತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಈ ಮದುವೆ ಸಮಾರಂಭದಲ್ಲಿ ಸ್ನೇಹಿತರು ಕುಟುಂಬದ ಆಪ್ತರು ಭಾಗವಹಿಸಿದ್ದರು ಇನ್ನು ಜೂನ್ 7ನೇ ತಾರೀಖಿನಂದು ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ ಅಂದು ಚಿತ್ರರಂಗದ ಗಣ್ಯರು ಸೇರಿದಂತೆ ರಾಜಕೀಯ ಮುಖಂಡರುಗಳು ಸಹ ಭಾಗವಹಿಸಲಿದ್ದಾರೆ. ಹಾಗಾದರೆ ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅವರು ಮದುವೆಯಾದಂತಹ ಅವಿವಾ ಬಿದ್ದಪ್ಪ ಯಾರು.

ಈಕೆಯ ಬಿಸಿನೆಸ್ ಏನು? ಅವಿವಾ ಆಸ್ತಿ ಎಷ್ಟು ಕೋಟಿ ಗೊತ್ತಾ? ಹಣ ಕ್ಕೋಸ್ಕರ ಅಭಿ ಅವಿವಾ ಅವರನ್ನು ಮದುವೆಯಾಗಿದ್ದ? ಮದುವೆಯ ವಿಚಾರವಾಗಿ ಸಂಬಂಧಿಸಿದ ಇನ್ನೂ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಮೊದಲನೆಯದಾಗಿ ಅಭಿಷೇಕ್ ಅವರ ಮಾವ ಪ್ರಸಾದ್ ಬಿದ್ದಪ್ಪ ಅವರ ಬಗ್ಗೆ ಹೇಳುವುದಾದರೆ. ಇವರು ತಮ್ಮದೇ ಆದ ಕ್ಷೇತ್ರದಲ್ಲಿ ತುಂಬಾ ದೊಡ್ಡ ಮಟ್ಟದ ಸಾಧನೆಯನ್ನು ಮಾಡಿದ್ದಾರೆ.

ಇವರೊಬ್ಬರು ಫ್ಯಾಷನ್ ಡಿಸೈನರ್ ಹಾಗೂ ಕೊರಿಯೋಗ್ರಾಫರ್ ಇವರನ್ನು ಫ್ಯಾಶನ್ ಜಗತ್ತಿನಲ್ಲಿ ಐಕಾನಿಕ್ ಫ್ಯಾಷನ್ ಗುರು ಆಫ್ ಇಂಡಿಯಾ ಎಂದೇ ಕರೆಯುತ್ತಾರೆ. ಅಷ್ಟು ದೊಡ್ಡ ಮಟ್ಟದ ಹೆಸರು ಇಡೀ ದೇಶದ ತುಂಬೆಲ್ಲ ಇದೆ. ಇವರ ಗರಡಿಯಲ್ಲಿ ಬೆಳೆದವರು ಯಾರು ಎಂದರೆ ದೀಪಿಕಾ ಪಡುಕೋಣೆ, ಅನುಷ್ಕಾ ಶರ್ಮ, ಅರ್ಜುನ್ ರಾಮ್ ಪಡೆ, ಹೀಗೆ ಹಲವಾರು ಜನ.

ಪ್ರಸಾದ್ ಬಿದ್ದಪ್ಪ ಅವರ ಗರಡಿಯಲ್ಲಿ ಪಳಗಿದವರು. ಪ್ರಸಾದ್ ಬಿದ್ದಪ್ಪ ಅವರು ಮೂಲತಹ ಕೊಡಗಿನವರು ಇವರು ಹುಟ್ಟಿದ್ದು 1956 ರ ನವೆಂಬರ್ ನಲ್ಲಿ. ಇವರ ಪತ್ನಿ ಜೂಡಿಯರ್ ಬಿದ್ದಪ್ಪ, ಇವರ ಮಗಳೇ ಅವಿವಾ ಬಿದ್ದಪ್ಪ. ಸಾಕಷ್ಟು ಮಾಡಲ್ ಗಳನ್ನು ತಯಾರು ಮಾಡಿದವರು ಪ್ರಸಾದ್ ಬಿದ್ದಪ್ಪ ಇವರು ಮೊಟ್ಟ ಮೊದಲ ಬಾರಿಗೆ ಟ್ರಾನ್ಸ್ ಜೆಂಡರ್ ಗಳಿಗೆ ಫ್ಯಾಶನ್ ಶೋಗಳನ್ನು ಮಾಡುತ್ತಾರೆ.

ಇದಷ್ಟೇ ಅಲ್ಲದೆ ಸಾಕಷ್ಟು ಶಾಲೆಯ ಮಕ್ಕಳಿಗೆ ಚಾರಿಟಿಯನ್ನು ಕೊಡುತ್ತಾರೆ. ಅವರ ಶಿಕ್ಷಣಕ್ಕೆ ಸಹಾಯವನ್ನು ಮಾಡುತ್ತಾರೆ. ಹೀಗೆ ಪ್ರಸಾದ್ ಬಿದ್ದಪ್ಪ ಅವರು ತಮ್ಮದೇ ಆದ ಕ್ಷೇತ್ರದಲ್ಲಿ ಹಲವಾರು ಸಾಧನೆಗಳನ್ನು ಮಾಡಿದ್ದಾರೆ. ತಂದೆಯಂತೆ ಮಗಳು ಕೂಡ ಎಲ್ಲದರಲ್ಲೂ ಎತ್ತಿದ ಕೈ. ತಂದೆಯಷ್ಟೇ ಸಾಧನೆಯನ್ನು ಮಗಳು ಅವಿವಾ ತಮ್ಮ ಚಿಕ್ಕ ವಯಸ್ಸಿನಲ್ಲೇ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *