ಸಿಗಂದೂರು ಕ್ಷೇತ್ರವನ್ನು ಕಾಪಾಡುತ್ತಿದೆ ಆ ಒಂದು ದೈತ್ಯ ಕಾಳಿಂಗ ಸರ್ಪ……..!!
ಅಪಾರ ಮಹಿಮೆಯುಳ್ಳ ದೈವಿ ಶಕ್ತಿ ಪೀಠಗಳಲ್ಲಿ ಶ್ರೀ ಸಿಗಂದೂರು ಚೌಡೇಶ್ವರಿ ಅಮ್ಮನವರ ಕ್ಷೇತ್ರವು ಸಹ ಒಂದು. ಇಲ್ಲಿಯ ದೇವಿಯ ದರ್ಶನವನ್ನು ಪಡೆಯಲು ದೇಶ ವಿದೇಶಗಳಿಂದ ಭಕ್ತರು ಭೇಟಿ ಕೊಡುತ್ತಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಅಂದರೆ ಕಸವಳ್ಳಿಯಲ್ಲಿ ಇದೆ. 300 ವರ್ಷಗಳ ಹಿಂದೆ ಪವಿತ್ರ ಶರಾವತಿ ನದಿ ದಡದಲ್ಲಿ
ದೇವಿಯ ವಿಗ್ರಹ ಕಂಡು ಬಂದಿದೆ ಎಂದು ಹೇಳಲಾಗುತ್ತಿದೆ. ಇದೊಂದು ಸ್ವಯಂ ಭೂ ವಿಗ್ರಹವಾಗಿದೆ. ಅಂತೆಯೇ ಶ್ರೀ ಕ್ಷೇತ್ರ ಸಿಗಂದೂರು ಇತಿ ಹಾಸವು 300 ವರ್ಷಗಳ ಪುರಾತನವಾಗಿದೆ. 18ನೇ ಶತಮಾನದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕರೂರು ಗ್ರಾಮ ಪಂಚಾಯಿತಿ ಯಲ್ಲಿ ಮಡೆನೂರು ಎಂಬ ಗ್ರಾಮ ಇತ್ತು. ಸುಮಾರು 50ರಿಂದ 100 ಕುಟುಂಬಗಳು ಕೃಷಿಯನ್ನು ತಮ್ಮ ಕಸಬಾಗಿ ಮಾಡಿಕೊಂಡು.
ಹಾಗೂ ಕೆಲವು ಬಾರಿ ಭೇಟಿಯಾಡುವ ಮೂಲಕ ಇಲ್ಲಿ ತಮ್ಮ ವಾಸಸ್ಥಾ ನವನ್ನು ಕಂಡುಕೊಂಡಿದ್ದರು. ಇಲ್ಲಿ ಶೇಷಪ್ಪನೆಂಬ ಒಡೆಯನಿದ್ದ ಆ ಗ್ರಾಮದಲ್ಲಿ ಶೇಷಪ್ಪ ಹಾಗೂ ಅವರ ಕುಟುಂಬದವರು ಸಹ ವಾಸಿಸುತ್ತಿ ದ್ದರು. ಅವರು ಶ್ರೀದೇವಿಯು ಭೂಮಿಗೆ ಬರಲು ಮತ್ತು ಸಾವಿರಾರು ಭಕ್ತರನ್ನು ಆಶೀರ್ವದಿಸಲು ನಿಜವಾದ ಕಾರಣ ಕರ್ತರು ಎಂದು ಹೇಳಬಹುದು. ಅವರು ಈ ಸ್ಥಳಗಳಲ್ಲಿ ವರ್ಷಗಳಿಂದ ಪೂಜಿಸುವಂತಹ ಚೌಡಿಯನ್ನು.
ಪ್ರಾರ್ಥಿಸಿಕೊಂಡು ಬಂದಿದ್ದಾರೆ. ಹಿಂದೆ ಒಂದು ದಿನ ಶೇಷಪ್ಪನವರು ಸಿಗಂದೂರು ಬಳಿ ಇರುವ ಕಾಡಿಗೆ ಬೇಟೆ ಮಾಡಲು ಹೋಗುವುದಾಗಿ ನಿರ್ಧರಿಸುತ್ತಾರೆ. ಹಾಗೂ ಒಂಟಿಯಾಗಿ ಕಾಡಿಗೆ ಹೋಗಲು ಹೊರಟು ಹೋಗುತ್ತಾರೆ. ಭೇಟಿಯಾಡುತ್ತಾ ಕಾಡಿನ ದಾರಿಯಲ್ಲಿ ಮುಂದೆ ಸಾಗುತ್ತಿ ದ್ದಂತೆ ಅವರು ತಾವು ನಡೆದು ಬಂದ ಮಾರ್ಗವನ್ನು ಮರೆತುಬಿಡುತ್ತಾರೆ. ಸೂರ್ಯಾಸ್ತದ ಸಮಯದಲ್ಲಿ ಕತ್ತಲಾಗುತ್ತಿದ್ದಂತೆ ಭಯಭೀತರಾದ ಅವರು ಇದಕ್ಕಿದ್ದ ಹಾಗೆ ಪ್ರಕಾಶಮಾನವಾದ ಬೆಳಕನ್ನು ನೋಡಿ.
ಗಾಬರಿಯಾಗುತ್ತಾರೆ. ಆಗ ಶ್ರೀ ಶೇಷಪ್ಪನವರು ಕಾಪಾಡು ಚೌಡಮ್ಮ ಕಾಪಾಡು ಚೌಡಮ್ಮ ಎಂದು ಕೂಗಿ ಕೊಳ್ಳುತ್ತಾರೆ. ಮತ್ತು ಸ್ವಲ್ಪ ಸಮಯ ದಲ್ಲೇ ಪ್ರಜ್ಞೆ ಕಳೆದುಕೊಂಡು ಕೆಳಗೆ ಬೀಳುತ್ತಾರೆ. ಸ್ವಲ್ಪ ಸಮಯದ ನಂತರ ಮತ್ತೆ ಎಚ್ಚರಗೊಂಡಾಗ ಮುಸುಕಾದ ಕಣ್ಣುಗಳಿಂದ ಕೆಲವು ಹೊಳೆಯುವಂತಹ ಕಲ್ಲುಗಳನ್ನು ನೋಡುತ್ತಾರೆ. ಹಾಗೆಯೇ ಆ ಕಲ್ಲಿನ ಸುತ್ತ ಒಂದು ಭಯಂಕರ ಹಾಗೂ ಭಯಾನಕ ದೊಡ್ಡ ಕಾಳಿಂಗ ಸರ್ಪವು
ನದಿಯ ತೀರದಲ್ಲಿ ಇರುವುದನ್ನು ಕಂಡು ಇನ್ನು ಗಾಬರಿಗೊಳ್ಳುತ್ತಾರೆ. ಆ ಕಾಳಿಂಗ ಸರ್ಪವು ಶೇಷಪ್ಪನವರನ್ನು ಮುಂದೆ ಹೋಗುವುದಕ್ಕಾಗಲಿ ಹಿಂದೆ ಹೋಗುವುದಕ್ಕಾಗಲಿ ಬಿಡುವುದಿಲ್ಲ. ಈ ವೇಳೆಯಲ್ಲಿ ಭಯ ಗೊಂಡಂತಹ ಶೇಷಪ್ಪನವರು ಅಲ್ಲಿಯೇ ಇದ್ದ ಒಂದು ಮರದ ಮೇಲೆ ಹತ್ತಿ ಕುಳಿತುಕೊಳ್ಳುತ್ತಾರೆ. ಆಗ ಅವರಿಗೆ ಗೊತ್ತಾಗುತ್ತದೆ ಆ ಕಾಳಿಂಗ ಸರ್ಪ ಒಂದು ದೇವಿಯ ಮೂರ್ತಿಯನ್ನು ಕಾಯುತ್ತಿತ್ತು ಎಂದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.