ಮನೆಯಲ್ಲಿ ಮಣ್ಣಿನ ಹಣತೆಯಲ್ಲಿ ದೀಪ ಯಾಕೆ ಹಚ್ಚಬಾರದು ಹಚ್ಚಿದರೆ ಯಾವ ರೀತಿ ತೊಂದರೆಗಳು ಬರುತ್ತದೆ………||
ಸನಾತನ ಧರ್ಮದಲ್ಲಿ ಮನೆಯಲ್ಲಿ ಸದಾ ಕಾಲ ಸುಖ ಶಾಂತಿ, ನೆಮ್ಮದಿ ಮತ್ತು ಇಷ್ಟಾರ್ಥ ಸಿದ್ಧಿ ಗಾಗಿ ಮನೆಯಲ್ಲಿ ನಾವು ದೀಪವನ್ನು ಹಚ್ಚುತ್ತೇವೆ. ದೀಪದ ಮೂಲೆಯಲ್ಲಿ ಬ್ರಹ್ಮದೇವರ ವಾಸ ಇರುತ್ತದೆ ಎಂದು ಹೇಳುತ್ತಾರೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಮನೆಯಲ್ಲಿ ಪೂಜೆ ಮಾಡಿ ದೀಪ ಹಚ್ಚುವುದು ಉತ್ತಮ.
ಅದೇ ರೀತಿಯಾಗಿ ದೀಪದ ಕಪ್ಪಿನಲ್ಲಿ ಸಾಕ್ಷಾತ್ ಶಿವ ಪಾರ್ವತಿಯ ಮಹಾ ಸ್ಥಾನ ಇರುತ್ತದೆ ಎಂದೇ ಹೇಳುತ್ತಾರೆ. ಆದ್ದರಿಂದ ಪ್ರತಿಯೊಬ್ಬರೂ ದೀಪ ಹಚ್ಚುವಂತಹ ಸಮಯದಲ್ಲಿ ಎಲ್ಲಾ ದೇವಾನು ದೇವತೆಗಳನ್ನು ನೆನೆ ಯುತ್ತಾ ನಮ್ಮ ಎಲ್ಲಾ ಸಂಕಷ್ಟಗಳನ್ನು ದೂರ ಮಾಡಿ ಎಂದು ಪ್ರಾರ್ಥಿಸು ತ್ತಾ ದೀಪವನ್ನು ಮನೆಯಲ್ಲಿ ಪ್ರತಿನಿತ್ಯ ಬೆಳಗುವುದು ಒಳ್ಳೆಯದು. ಹಾಗೂ ಅದು ಅತ್ಯಂತ ಶುಭ ಎಂದು ಪರಿಗಣಿಸಲಾಗುತ್ತದೆ.
ಹಾಗಾದರೆ ಈದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿ ಯೊಬ್ಬರ ಮನೆಯಲ್ಲಿಯೂ ಕೂಡ ತಾಮ್ರ ಅಥವಾ ಹಿತ್ತಾಳೆ ದೀಪವನ್ನು ಹಚ್ಚುತ್ತೇವೆ ಆದರೆ ಮಣ್ಣಿನ ದೀಪವನ್ನು ಯಾರು ಕೂಡ ಪ್ರತಿನಿತ್ಯ ಹಚ್ಚುವುದಕ್ಕೆ ಸಾಧ್ಯವಾಗುವುದಿಲ್ಲ ಹಾಗೂ ಅದನ್ನು ಹಚ್ಚುವುದರಿಂದ ಆದಷ್ಟು ಕೆಲವೊಂದಷ್ಟು ನಿಧಾನಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ ಹಾಗೂ ಜಾಗರೂಕತೆಯಿಂದ ನೋಡಿಕೊಳ್ಳಬೇಕಾಗುತ್ತದೆ.
ಆದ್ದರಿಂದ ಪ್ರತಿಯೊಬ್ಬರೂ ಕೂಡ ತಾಮ್ರ ಅಥವಾ ಹಿತ್ತಾಳೆ ದೀಪವನ್ನು ಹಚ್ಚುತ್ತಾರೆ ಹಾಗೇನಾದರೂ ಮಣ್ಣಿನ ದೀಪವನ್ನು ಹಚ್ಚಿ ಅದು ಏನಾ ದರೂ ಪೂಜೆ ಆದ ನಂತರ ಹೊಡೆದರೆ ಮನೆಯಲ್ಲಿ ಆ ವರ್ಷ ಇಡೀ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುವುದಕ್ಕೆ ಪ್ರಾರಂಭ ವಾಗುತ್ತದೆ. ಮನೆಯಲ್ಲಿನ ಜನರ ಆರೋಗ್ಯದಲ್ಲಿ ಸಮಸ್ಯೆಗಳು ಹಾಗೂ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ನಷ್ಟ ಸಂಭವಿಸುವುದು, ಮನೆಯಲ್ಲಿ ಮಕ್ಕಳ ವಿದ್ಯಾಭ್ಯಾಸದಲ್ಲಿ ಅಡಚಣೆ ಉಂಟಾಗುವುದು, ಹಣಕಾಸಿನ ತೊಂದರೆ ಉಂಟಾಗುವುದು.
ಹೀಗೆ ಒಂದಲ್ಲ ಒಂದು ಸಮಸ್ಯೆಗಳು ಕಾಣಿಸಿಕೊಳ್ಳುವುದಕ್ಕೆ ಪ್ರಾರಂಭ ವಾಗುತ್ತದೆ. ಆದ್ದರಿಂದ ಹೆಚ್ಚಿನ ಜನ ಇದರಿಂದ ಸಮಸ್ಯೆ ಬರಲೇಬಾರದು ಎಂದು ತಾಮ್ರ ಹಿತ್ತಾಳೆ ದೀಪಗಳನ್ನು ಹಚ್ಚುತ್ತಾರೆ. ಸಾಮಾನ್ಯವಾಗಿ ಕೆಲವೊಬ್ಬರ ಮನೆಗಳಲ್ಲಿ ತುಳಸಿ ಕಟ್ಟೆಯ ಮುಂದೆ ಸದಾ ಕಾಲ ದೀಪ ವನ್ನು ಹಚ್ಚುತ್ತಾರೆ. ಹಾಗೇನಾದರೂ ಯಾವುದಾದರೂ ಕಾರಣದಿಂದ ಆ ದೀಪ ಹೊಡೆದರೆ ಆ ಮನೆಯಲ್ಲಿ ಅಶುಭ ಫಲಗಳು ಹೆಚ್ಚಾಗುತ್ತದೆ.
ಆದರೆ ಕೆಲವೊಮ್ಮೆ ನಾವು ಹಬ್ಬಗಳಲ್ಲಿ ರಂಗೋಲಿ ಬಿಡಿ ಅಕ್ಕಪಕ್ಕ ಅಲಂಕಾರಕ್ಕೆ ಇಟ್ಟಂತಹ ದೀಪ ಏನಾದರೂ ಹೊಡೆದರೆ ಅದರಿಂದ ಅಷ್ಟೇನೂ ಅಶುಭ ಫಲಗಳು ಉಂಟಾಗುವುದಿಲ್ಲ. ಏಕೆಂದರೆ ಅದನ್ನು ಪೂಜೆ ಮಾಡಿ ಏನು ಇಟ್ಟಿರುವುದಿಲ್ಲ ಆದ್ದರಿಂದ ಅವು ಹೊಡೆದರೆ ಅಷ್ಟೇನು ಅಶುಭ ಫಲ ಉಂಟಾಗುವುದಿಲ್ಲ. ಆದರೆ ಈ ರೀತಿಯ ಶುಭ ಸಮಯದಲ್ಲಿ ದೇವರ ಮನೆಯಲ್ಲಿ ತುಳಸಿ ಕಟ್ಟೆಯ ಮುಂದೆ ಇದ್ದಂತಹ ದೀಪ ಹೊಡೆದರೆ ಅಶುಭ ಫಲಗಳು ಉಂಟಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.