ಕಾರ್ಯಸಿದ್ದಿ ಯೋಗದಿಂದ ಇಂದು ಈ 5 ರಾಶಿಗೆ ಮುಟ್ಟಿದ್ದೆಲ್ಲಾ ಬಂಗಾರ..ಮಹಾಶಿವನ ಅನುಗ್ರಹದಿಂದ ಹಣದ ಲಾಭ ಆರೋಗ್ಯ ಜಯ ಸೋಮವಾರದ ನಿತ್ಯಭವಿಷ್ಯ ತಿಳಿಯಿರಿ

ಮೇಷ ರಾಶಿ:- ಇಂದು ಸಂಗಾತಿಯೊಂದಿಗೆ ಬಹಳ ವಿಶೇಷವಾದ ದಿನವಾಗಿರುತ್ತದೆ. ಬಹಳ ದಿನದ ನಂತರ ನೀವು ಮೋಜಿನ ದಿನವನ್ನು ಅನುಭವಿಸುತ್ತೀರಿ. ಹೆತ್ತವರ ವಾತ್ಸಲ್ಯ ಮತ್ತು ಬೆಂಬಲವನ್ನು ಪಡೆಯು ತ್ತೀರಿ. ಕಚೇರಿಯಲ್ಲಿ ಕೆಲಸ ಮಾಡುವವರಿಗೆ ಇಂದು ಯಾವುದೇ ನಿರ್ಲಕ್ಷವನ್ನು ಮಾಡಬೇಡಿ. ನಿಮ್ಮ ಕೆಲಸವನ್ನು ಎಚ್ಚರಿಕೆಯಿಂದ ಮಾಡಿ. ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಮಧ್ಯಾನ 2:15 ರಿಂದ ಸಂಜೆ 6 ಗಂಟೆಯವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ:- ಕೆಲಸದ ವಿಚಾರವಾಗಿ ಇಂದು ಮಿಶ್ರಫಲದ ದಿನವಾಗಿರು ತ್ತದೆ. ನೀವು ಉದ್ಯೋಗ ಮಾಡುತ್ತಿದ್ದರೆ ಇಂದು ಕಚೇರಿಯಲ್ಲಿ ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಬಾಸ್ ನಿಮ್ಮ ಕೆಲಸದ ಮೇಲೆ ಅತೃಪ್ತಿ ಹೊಂದಬಹುದು. ನಿಮ್ಮ ಕೆಲಸದ ಮೇಲೆ ನೀವು ಸರಿಯಾಗಿ ಗಮನ ಹರಿಸಬೇಕು. ವ್ಯಾಪಾರಸ್ಥರು ಈ ದಿನ ಯಾವುದೇ ಅಪಾಯಕಾರಿ ನಿರ್ಧಾರವನ್ನು ತೆಗೆದುಕೊಳ್ಳದೆ ಇರುವುದು ಉತ್ತಮ. ಅದೃಷ್ಟ ಸಂಖ್ಯೆ – 9 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಸಂಜೆ 5:00ಯಿಂದ ರಾತ್ರಿ 9 ಗಂಟೆಯವರೆಗೆ.

ಮಿಥುನ ರಾಶಿ:- ನೌಕರಸ್ಥರು ಇಂದು ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು. ನೀವು ಇಂದು ದೊಡ್ಡ ವ್ಯವಹಾರವನ್ನು ಮಾಡುವ ಅವಕಾಶವನ್ನು ಪಡೆಯಬಹುದು. ಕಠಿಣ ಪರಿಶ್ರಮದಿಂದ ಉದ್ಯೋಗ ಭಡ್ತಿ ಪಡೆಯುವ ಸಾಧ್ಯತೆ ಇರುತ್ತದೆ. ಇಂದು ಜೀವನ ಸಂಗಾತಿ ಯೊಂದಿಗೆ ಮನಸ್ತಾಪ ಉಂಟಾಗಬಹುದು. ಅಹಿತಕರ ಪದಗಳನ್ನು ಬಳಸುವುದನ್ನು ತಪ್ಪಿಸಿ. ಅದೃಷ್ಟ ಸಂಖ್ಯೆ – 7 ಅದೃಷ್ಟ ಬಣ್ಣ – ನೇರಳೆ ಬಣ್ಣ ಸಮಯ – ಮಧ್ಯಾಹ್ನ 12 ರಿಂದ ಸಂಜೆ 4:15 ರವರೆಗೆ.

ಕಟಕ ರಾಶಿ:- ಇಂದು ನಿಮ್ಮ ಮಾತಿನ ಮೇಲೆ ಹೆಚ್ಚಿನ ನಿಯಂತ್ರಣವನ್ನು ಇಟ್ಟುಕೊಳ್ಳಿ. ಕೋಪದಲ್ಲಿ ಯಾವುದೇ ಬೇಜವಾಬ್ದಾರಿ ಕಾರ್ಯವನ್ನು ಮಾಡಬೇಡಿ. ಇಂದು ನಿಮ್ಮ ಸಂಗಾತಿಯೊಂದಿಗೆ ಹಣದ ಬಗ್ಗೆ ಮನಸ್ತಾಪ ಹೊಂದಬಹುದು. ನಿಮ್ಮ ಪ್ರೀತಿ ಪಾತ್ರರ ಸ್ವಭಾವವು ನಿಮಗೆ ತೊಂದರೆ ಯನ್ನು ಉಂಟು ಮಾಡಬಹುದು. ವೈವಾಹಿಕ ಸಂಬಂಧದಲ್ಲಿ ಬಿರುಕು ಗಳಾಗದಂತೆ ಎಚ್ಚರಿಕೆ ವಹಿಸಿ. ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 12:30 ವರೆಗೆ.

See also  ಇನ್ನೂ 3 ದಿನದ ಒಳಗೆ ಶನಿದೇವರ ಕೃಪೆಯಿಂದ ಹಣದ ಜೊತೆ ಅದೃಷ್ಟ ಈ 6 ರಾಶಿಗೆ ವಿಪರೀತ ಧನಲಾಭ ರಾಜಯೋಗ ನಿಮ್ಮ ರಾಶಿ ಇದೆಯಾ ನೋಡಿ

ಸಿಂಹ ರಾಶಿ:- ಆರೋಗ್ಯವಾಗಿರುವಂತೆ ನೀವು ನಿಮ್ಮ ದಿನಚರಿಯನ್ನು ಯೋಚಿಸಿಕೊಳ್ಳಬೇಕು. ಹಾಗೇನಾದರೂ ನೀವು ಇದರ ಬಗ್ಗೆ ನಿರ್ಲಕ್ಷಿಸಿ ದರೆ ಆರೋಗ್ಯದಲ್ಲಿ ಹಲವಾರು ತೊಂದರೆಗಳು ಉಂಟಾಗಬಹುದು. ಉದ್ಯೋಗಸ್ಥರು ಇಂದು ಕಚೇರಿಯಲ್ಲಿ ಒಳ್ಳೆಯ ಸುದ್ದಿಯನ್ನು ಪಡೆಯಬಹುದು. ನಿಮ್ಮ ಪ್ರೀತಿ ಪಾತ್ರರ ಸ್ವಭಾವ ನಿಮಗೆ ಕಿರಿಕಿರಿ ಉಂಟು ಮಾಡಬಹುದು. ಅದೃಷ್ಟ ಸಂಖ್ಯೆ – 9 ಅದೃಷ್ಟ ಬಣ್ಣ – ಹಸಿರು ಬಣ್ಣ ಸಮಯ – ಸಂಜೆ 5:25 ರಿಂದ ರಾತ್ರಿ 9 ಗಂಟೆಯವರೆಗೆ.

ಕನ್ಯಾ ರಾಶಿ:- ನೀವು ಕಚೇರಿಯಲ್ಲಿ ತಾಳ್ಮೆಯಿಂದ ಕೆಲಸ ಮಾಡಿದರೆ ಅದು ನಿಮಗೆ ಒಳ್ಳೆಯದು. ವ್ಯಾಪಾರಸ್ಥರು ತಮ್ಮ ವ್ಯವಹಾರದ ನಿರ್ಧಾರಗಳನ್ನು ತರಾತುರಿಯಲ್ಲಿ ತೆಗೆದುಕೊಳ್ಳಬಾರದು. ಇಂದು ನೀವು ನಿಮ್ಮ ಮನೆಯವರೊಂದಿಗೆ ಸಾಕಷ್ಟು ಸಮಯ ಕಳೆಯುವ ಅವಕಾಶ ಸಿಗುತ್ತದೆ. ಈ ದಿನ ನಿಮ್ಮ ತಂದೆ ಆರೋಗ್ಯದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಯಾರ ಮೇಲೂ ದ್ವೇಷ ಸಾಧಿಸುವುದಕ್ಕೆ ಮುಂದಾಗ ಬೇಡಿ. ಅದೃಷ್ಟ ಸಂಖ್ಯೆ – 7 ಅದೃಷ್ಟ ಬಣ್ಣ – ಗುಲಾಬಿ ಬಣ್ಣ ಸಮಯ – ಬೆಳಿಗ್ಗೆ 6:30 ರಿಂದ ಮಧ್ಯಾಹ್ನ 1:30 ರವರೆಗೆ

ತುಲಾ ರಾಶಿ:- ಕೆಲಸದ ಆರಂಭದಲ್ಲಿ ಇಂದು ಶುಭವಾಗಿರಲಿದೆ. ಕಚೇರಿ ಯಲ್ಲಿ ಮೇಲಾಧಿಕಾರಿಗಳ ಸಂಪೂರ್ಣ ಬೆಂಬಲ ಸಿಗಲಿದೆ. ಕಚೇರಿಯಲ್ಲಿ ನಿಮ್ಮ ಬಾಸ್ ನಿಮ್ಮ ಕಾರ್ಯ ಕ್ಷಮತೆಯಿಂದ ತೃಪ್ತರಾಗಿರುತ್ತಾರೆ. ನಿಮ್ಮ ವ್ಯಾಪಾರವು ಬೆಳೆಯುತ್ತದೆ. ಇಂದು ಹೆಚ್ಚಿನ ಸಂಪತ್ತನ್ನು ಗಳಿಸಲಿದ್ದೀರಿ. ಆದರೆ ನಿಮ್ಮ ಖರ್ಚುಗಳನ್ನು ನೀವು ನಿಯಂತ್ರಿಸಿಕೊಳ್ಳಬೇಕಾಗುತ್ತದೆ. ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಕಿತ್ತಳೆ ಬಣ್ಣ ಸಮಯ – ಸಂಜೆ 4 ರಿಂದ ರಾತ್ರಿ 8:00 ಗಂಟೆಯವರೆಗೆ.

See also  ಶಕ್ತಿಶಾಲಿ ದುರ್ಗಾ ದೇವಿಯ ಅನುಗ್ರಹ ಈ 8 ರಾಶಿಗೆ ಇಂದಿನಿಂದ ಧನಲಾಭ,ಸ್ತ್ರೀಯರಿಂದ ಲಾಭ,ಮಕ್ಕಳಿಂದ ಜಯ

ವೃಶ್ಚಿಕ ರಾಶಿ:- ಇಂದು ದಿನ ಅಷ್ಟು ಶುಭವಾಗಿಲ್ಲ. ಬೆಳಗಿನ ಸಮಯ ಮನೆಯಲ್ಲಿ ಅಪಶೃತಿ ಉಂಟಾಗುವ ಸಾಧ್ಯತೆ ಇದೆ. ಮನೆಯವರ ಮನಸ್ಥಿತಿಯಲ್ಲಿ ಕಹಿ ಭಾವನೆ ಹೆಚ್ಚಾಗಬಹುದು. ಅಂತಹ ಸಮಯದಲ್ಲಿ ಕೋಪಕ್ಕಿಂತ ಹೆಚ್ಚು ಪ್ರಜ್ಞೆಯಿಂದ ವರ್ತಿಸಬೇಕು. ಸಂಗಾತಿಯ ಅನಗತ್ಯ ಮಾತು ನಿಮ್ಮ ಕೋಪವನ್ನು ಹೆಚ್ಚಿಸುತ್ತದೆ. ಇಂದು ಉದ್ಯೋಗಗಳಿಗೆ ಸಾಮಾನ್ಯ ದಿನವಾಗಿರಲಿದೆ. ಅದೃಷ್ಟ ಸಂಖ್ಯೆ – 2 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಸಂಜೆ 6 ರಿಂದ ರಾತ್ರಿ 9:00 ಗಂಟೆಯವರೆಗೆ.

ಧನಸ್ಸು ರಾಶಿ:- ವ್ಯಾಪಾರಸ್ಥರು ಹಣಕಾಸಿನ ನಿರ್ಧಾರವನ್ನು ಆತುರವಾಗಿ ತೆಗೆದುಕೊಳ್ಳಬಾರದು. ಉದ್ಯೋಗಸ್ಥರು ಕಚೇರಿಯಲ್ಲಿ ನಿಮ್ಮ ಮೇಲಾಧಿ ಕಾರಿಗಳ ಮುಂದೆ ಉತ್ತಮವಾಗಿ ವರ್ತಿಸಬೇಕು. ನಿಮ್ಮ ಅತಿಯಾದ ಆತ್ಮ ವಿಶ್ವಾಸವು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಇಂದು ನಿಮ್ಮ ಸಂಗಾತಿಯೊಂದಿಗೆ ಸೌಮ್ಯವಾಗಿ ಇರಬೇಕು. ಅದೃಷ್ಟ ಸಂಖ್ಯೆ – 8 ಅದೃಷ್ಟ ಬಣ್ಣ – ಹಳದಿ ಬಣ್ಣ ಸಮಯ – ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ.

ಮಕರ ರಾಶಿ:- ಇಂದು ಉದ್ಯೋಗಕ್ಕಾಗಿ ಯಾವುದಾದರೂ ಕಂಪನಿಗೆ ಸಂದರ್ಶನಕ್ಕೆ ಹೋಗುತ್ತಿದ್ದರೆ ಪೂರ್ಣ ಸಿದ್ಧತೆಯೊಂದಿಗೆ ಹೋಗಿ. ಏಕೆಂದರೆ ಇಂದು ನಿಮಗೆ ಅದೃಷ್ಟದ ದಿನವಾಗಿರಲಿದೆ. ಇಂದು ನೀವು ಎಲ್ಲಾ ಕೆಲಸ ಕಾರ್ಯಗಳನ್ನು ಯಶಸ್ಸನ್ನು ಪಡೆಯುವ ಸಾಧ್ಯತೆ ಇದೆ. ಈಗಾಗಲೇ ಉದ್ಯೋಗದಲ್ಲಿ ಇದ್ದರೆ ನಿಮ್ಮ ಆದಾಯವು ಹೆಚ್ಚಾಗ ಬಹುದು. ಸಾರಿಗೆಗೆ ಸಂಬಂಧಿಸಿದ ವ್ಯಾಪಾರ ಮಾಡುವವರು ಇಂದು ಉತ್ತಮ ಆರ್ಥಿಕ ಲಾಭ ಪಡೆಯಬಹುದು. ಅದೃಷ್ಟ ಸಂಖ್ಯೆ – 8 ಅದೃಷ್ಟ ಬಣ್ಣ – ನೇರಳೆ ಬಣ್ಣ ಸಮಯ – ಸಂಜೆ 6:45 ರಿಂದ ರಾತ್ರಿ 10 ಗಂಟೆಯವರೆಗೆ.

See also  ಕೊನೆಗೂ ನಿಜವಾಯಿತು ಯಶವಂತ್ ಗುರೂಜಿ ಸ್ಫೋಟಕ ಭವಿಷ್ಯ...309 ರ ರಹಸ್ಯ ಏನು ಗೊತ್ತಾ ?

ಕುಂಭ ರಾಶಿ:- ನೌಕರರಿಗೆ ಇಂದು ಮಿಶ್ರಫಲದ ದಿನವಾಗಿರಲಿದೆ. ಇಂದು ನಿಮ್ಮ ಕಠಿಣ ಪರಿಶ್ರಮವಿದ್ದರೂ ಉತ್ತಮ ಫಲಿತಾಂಶ ದೊರೆಯುವು ದಿಲ್ಲ. ನಿಮ್ಮ ಕೆಲಸವನ್ನು ಎಚ್ಚರಿಕೆಯಿಂದ ಮಾಡುವುದು ಉತ್ತಮ. ನೀವು ಪಾನೀಯ ಅಥವಾ ಹೋಟೆಲ್ ಉದ್ಯಮ ಮಾಡುತ್ತಿದ್ದರೆ ನೀವು ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನ ವಹಿಸುವುದು ಒಳ್ಳೆಯದು. ನಿಮ್ಮ ಮನದ ಬಯಕೆಯನ್ನು ಪೂರೈಸಲು ಸಾಧ್ಯವಾಗುತ್ತದೆ. ಅದೃಷ್ಟ ಸಂಖ್ಯೆ – 6 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಿಗ್ಗೆ 7:15 ರಿಂದ ಮಧ್ಯಾನ 2 ಗಂಟೆಯವರೆಗೆ.

ಮೀನ ರಾಶಿ:- ಸೂಕ್ಷ್ಮ ವಸ್ತುಗಳನ್ನು ಬಳಸುವಾಗ ಎಚ್ಚರಿಕೆ ವಹಿಸಿ. ಇಲ್ಲವಾದರೆ ಅದರಿಂದ ತೊಂದರೆ ಉಂಟಾಗಬಹುದು. ಕಚೇರಿಯಲ್ಲಿ ನೀವು ಮಾಡಿದ ತಪ್ಪು ಕೆಲಸವನ್ನು ನಿಮ್ಮ ಮೇಲಾಧಿಕಾರಿಗಳು ಕಂಡು ಹಿಡಿಯುತ್ತಾರೆ. ಅದನ್ನು ನೀವು ಸರಿಪಡಿಸಿಕೊಳ್ಳುವಂತೆ ಪ್ರಯತ್ನಿಸಿ. ವ್ಯಾಪಾರಿಗಳು ಇಂದು ಮಿಶ್ರ ಫಲಿತಾಂಶವನ್ನು ಪಡೆಯಬಹುದು. ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ಕಂದು ಬಣ್ಣ ಸಮಯ – ಮಧ್ಯಾಹ್ನ 1:00 ಗಂಟೆಯಿಂದ ಸಂಜೆ 5:30ರ ವರೆಗೆ.

[irp]


crossorigin="anonymous">