ಈ ಕಥೆ ಕೇಳಿದರೆ ಕುಬೇರರಾಗುತ್ತಿರಾ ಧನಸಂಪತ್ತಿನೊಂದಿಗೆ ಸ್ವಂತ ಮನೆ ಆಗುವುದು ಗ್ಯಾರೆಂಟಿ

ಈ ಕಥೆ ಕೇಳಿದರೆ ಕುಬೇರರಾಗುತ್ತೀರಾ, ಧನ ಸಂಪತ್ತಿನೊಂದಿಗೆ ಸ್ವಂತ ಮನೆ ಆಗುವುದು……..||

WhatsApp Group Join Now
Telegram Group Join Now

ಕುಬೇರ ಈ ಹೆಸರು ಎಲ್ಲರಿಗೂ ಗೊತ್ತು. ಶ್ರೀನಿವಾಸ ಪದ್ಮಾವತಿಯರ ಕಲ್ಯಾಣಕ್ಕೆಂದು ಶ್ರೀನಿವಾಸನಿಗೆ ಸಾಲ ಕೊಟ್ಟ ಕುಬೇರನನ್ನು ಯಾರಾದರೂ ಮರೆಯಲು ಸಾಧ್ಯವೇ. ಈ ಕುಬೇರನ ನಿಜವಾದ ಹೆಸರು ವೈ ಶ್ರವಣ. ಇವನು ಹಿಂದಿನ ಜನ್ಮದಲ್ಲಿ ಅರಿವಿದ್ದೋ ಇಲ್ಲದೆಯೋ ಶಿವನ ಒಲುಮೆಗೆ ಪಾತ್ರನಾಗುವಂತಹ ಒಳ್ಳೆಯ ಕೆಲಸವನ್ನು ಮಾಡಿದ್ದ.

ಆ ಜನ್ಮದಲ್ಲಿ ಇವನ ಹೆಸರು ಗುಣನಿಧಿ. ಆತನ ತಂದೆ ಯಜ್ಞದತ್ತ ಕಾಂಪಿಲ್ಯ ನಗರದಲ್ಲಿ ವಾಸಿಸುತ್ತಿದ್ದನು. ಯಜ್ಞ ದತ್ತ ದೊಡ್ಡ ಮೇಧಾವಿ ಪಂಡಿತ ಸಕಲ ಶಾಸ್ತ್ರ ಸಂಪನ್ನನು, ವಿದ್ವಾಂಸನು ಆಗಿದ್ದನು. ಸದಾ ಕಾಲ ಯಜ್ಞ ಯಾಗಾದಿ ಹೋಮ ಹವನಗಳು ಎಂದು ಊರೂರು ತಿರುಗುತ್ತಿದ್ದು ಮನೆಯಲ್ಲಿ ಇರುತ್ತಿದ್ದದ್ದು ಮಾತ್ರ ಕಡಿಮೆ. ಮಗ ಗುಣ ನಿಧಿಗೆ ಎಂಟು ವರ್ಷವಾಗುತ್ತಲೇ.

ಉಪನಯನ ಮಾಡಿ ಗುರುಕುಲದಲ್ಲಿ ಶಿಕ್ಷಣವನ್ನು ಕಲಿಯಲು ಬಿಟ್ಟನು. ಆದರೆ ಗುಣ ನಿಧಿ ಕೆಟ್ಟ ಹುಡುಗರ ಸಹವಾಸ ಮಾಡಿ ಕೆಟ್ಟು ಹೋದ. ಕಳ್ಳತನ ಸುಳ್ಳತನ ಗುರುಕುಲಕ್ಕೆ ತಪ್ಪಿಸಿಕೊಳ್ಳುವುದು ಹೀಗೆ ಮಾಡುತ್ತಾ ದುಷ್ಟಗಳನ್ನೇ ಕಲಿತುಕೊಂಡ. ಇದು ತಂದೆ ಯಜ್ಞದತ್ತನಿಗೆ ತಿಳಿಯಲೇ ಇಲ್ಲ. ಈ ವಿಷಯ ತಾಯಿಗೆ ಗೊತ್ತಿತ್ತು ಆದರೆ ಇವನೊಬ್ಬನೇ ಮಗ ನಮಗೆ ಅಪರೂಪಕ್ಕೆ ಹುಟ್ಟಿದವನು ಎಂದು ಯಾರಿಗೂ ಯಾವ ವಿಷಯವನ್ನು ಹೇಳದೆ ಮುಚ್ಚಿಟ್ಟಳು.

See also  ಹಣ ಮತ್ತು ಐಶ್ವರ್ಯ ಬರಲು ಕೈಯಲ್ಲಿ ಇದನ್ನು ತೆಗೆದುಕೊಂಡು ಹೋಗಿ..ತುಂಬಾ ಧನಲಾಭ ನೋಡುವಿರಿ

ಗುಣ ನಿಧಿ ತನ್ನ ಮೋಜು ಮಸ್ತಿ ಖರ್ಚಿಗಾಗಿ ತನ್ನ ತಾಯಿಯನ್ನು ಕಾಡಿಸಿ ಪೀಡಿಸಿ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದ. ದಿನೇ ದಿನೇ ಕಳೆದಂತೆ ಕೆಟ್ಟ ಚಟಗಳಿಗೂ ಸಹ ಗುರಿಯಾದ ಅಂದರೆ ಬೀಡಿ ಸಿಗರೇಟು ಕುಡಿತ ಜೂಜಾಟ ಎಲ್ಲದರ ಅಭ್ಯಾಸವನ್ನು ಸಹ ಕಲಿತುಕೊಂಡ. ಅವನಲ್ಲಿ ಹುಡುಕಿದರೂ ಸಹ ಒಳ್ಳೆಯ ಗುಣ ಇರಲಿಲ್ಲ ಅಷ್ಟರಮಟ್ಟಿಗೆ ಅವನು ಕೆಟ್ಟ ಚಟಗಳಲ್ಲಿ ಗುರಿಯಾಗಿದ್ದ.

ಎದೆ ಸೀಳಿದರೆ ನಾಲ್ಕು ಅಕ್ಷರವು ಸಹ ಇರಲಿಲ್ಲ. ಊರಿನ ಜನರು ಪಂಡಿತರ ಪುತ್ರ ದಂಡಪಿಂಡ ಎಂದು ಬೈಯುತ್ತಿದ್ದರು. ಹೀಗಿರುವಾಗ ಅವನಿಗೆ ಒಂದು ಸುಗುಣಶೀಲೆ ಹುಡುಗಿಯನ್ನು ಹುಡುಕಿ ಮದುವೆ ಮಾಡಿದರು. ಮದುವೆ ಮಾಡಿದರೆ ತನ್ನ ಮಗ ಸರಿ ಹೋಗುತ್ತಾನೆ ಎಂದು ತಾಯಿ ತಿಳಿದಿದ್ದಳು. ಆದರೆ ರಾಯರ ಕುದುರೆ ಕತ್ತೆಯಾಯಿತು ಎಂಬಂತೆ ದುಶ್ಚಟಗಳನ್ನು ಜಾಸ್ತಿಯೇ ಮಾಡಿಕೊಂಡ.

ಪಂಡಿತನ ಮಗನಾಗಿ ದುಶ್ಚಟಗಳ ದಾಸನಾದ. ಹೆಂಡತಿಯ ಮಾತು ಕೇಳಲಿಲ್ಲ ತಾಯಿಯ ಮಾತು ಕೂಡ ಕೇಳಲಿಲ್ಲ. ಮಗ ಹಣ ಕೇಳಿದಾ ಗಲೆಲ್ಲ ಕೊಟ್ಟು ಕೊಟ್ಟು ಹಾಳು ಮಾಡಿದ್ದಂತಹ ಅವನ ತಾಯಿ ಈಗ ಅವನಿಗೆ ದುಡ್ಡು ಕೊಡುವುದನ್ನು ನಿಲ್ಲಿಸಿದಳು. ಇದರಿಂದ ಹುಚ್ಚನಾ ದಂತಹ ಅವನು ಮನೆಯಲ್ಲಿ ಇರುವಂತಹ ವಸ್ತುಗಳನ್ನು ಕಳ್ಳತನ ಮಾಡಲು ಪ್ರಾರಂಭಿಸಿದ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">