ಟಾಯ್ಲೆಟ್ ಕ್ಲೀನ್ ಮಾಡುವ ಚಿಂತೆ ಬಿಟ್ಟು ಬಿಡಿ..ಖಾಲಿಯಾಗಿರುವ ಸೊಳ್ಳೆ ಕಾಯಿಲ್ ಇದ್ದರೆ ಸಾಕು

ಇನ್ನು ಟಾಯ್ಲೆಟ್ ಕ್ಲೀನ್ ಮಾಡುವ ಚಿಂತೆ ಬಿಟ್ಟುಬಿಡಿ………||

WhatsApp Group Join Now
Telegram Group Join Now

ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಟಾಯ್ಲೆಟ್ ಕ್ಲೀನ್ ಮಾಡುವುದು ಒಂದು ಸಮಸ್ಯೆಯಾಗಿಯೇ ಉಳಿಯುತ್ತದೆ ಹೌದು ಕೆಲವೊಂದಷ್ಟು ಜನ ಇದನ್ನು ಕ್ಲೀನ್ ಮಾಡುವುದಕ್ಕೆ ಅಸಹ್ಯ ಪಟ್ಟುಕೊಳ್ಳುತ್ತಾರೆ. ಆದರೆ ಹಾಗೆoದ ಮಾತ್ರಕ್ಕೆ ಸುಮ್ಮನಿರಲು ಸಾಧ್ಯವಿಲ್ಲ. ಅದನ್ನು ಸ್ವಚ್ಛ ಮಾಡಲೇ ಬೇಕಾಗಿರುತ್ತದೆ. ಬದಲಿಗೆ ಬೇರೆಯವರು ಅದನ್ನು ಸ್ವಚ್ಛ ಮಾಡುವುದಕ್ಕೆ ಬರುವುದಿಲ್ಲ. ಆದ್ದರಿಂದ ನಮ್ಮ ನಮ್ಮ ಮನೆಯ ಟಾಯ್ಲೆಟ್ ಅನ್ನು ನಾವು ಸ್ವಚ್ಛವಾಗಿ ಇಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಬಹುದು.

ಹೌದು ಪ್ರತಿನಿತ್ಯ ನಾವು ಉಪಯೋಗಿಸುವಂತಹ ಟಾಯ್ಲೆಟ್ ಪದೇ ಪದೇ ಅಂದರೆ ಸ್ವಲ್ಪ ದಿನದಲ್ಲಿಯೇ ಗಲೀಜಾಗುತ್ತಿರುತ್ತದೆ. ಆದ್ದರಿಂದ ಅದನ್ನು ಪದೇಪದೇ ಸ್ವಚ್ಛ ಮಾಡಿಕೊಳ್ಳುವುದು ಒಳ್ಳೆಯದು ಇಲ್ಲವಾದರೆ ಅದರಿಂದ ಇನ್ಫೆಕ್ಷನ್ ಉಂಟಾಗಿ ಅದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಆದ್ದರಿಂದ ನಾವು ಸ್ವಚ್ಛವಾಗಿ ಇಟ್ಟು ಕೊಳ್ಳುವುದು ಮುಖ್ಯ.

ಅದರಲ್ಲೂ ಇತ್ತೀಚಿಗೆ ನೀವೆಲ್ಲರೂ ಗಮನಿಸಿರಬಹುದು ಟಾಯ್ಲೆಟ್ ಸದಾ ಕಾಲ ಸ್ವಚ್ಛವಾಗಿರುವಂತಹ ಉದ್ದೇಶಕ್ಕಾಗಿ ಮಾರುಕಟ್ಟೆಗಳಲ್ಲಿ ಟಾಯ್ಲೆಟ್ ಕ್ಲೀನರ್ ಅಂದರೆ ಲಿಕ್ವಿಡ್ ಗಳು ಹೀಗೆ ಹಲವಾರು ಪದಾರ್ಥ ಗಳು ಸಿಗುತ್ತದೆ. ಅದನ್ನು ನಿಮ್ಮ ಫ್ಲಾಶ್ ಒಳಗಡೆ ಹಾಕಿದರೆ ಸಾಕು ನೀವು ಪ್ರತಿಬಾರಿ ಫ್ಲಶ್ ಮಾಡಿದಂತಹ ಸಮಯದಲ್ಲಿ ಟಾಯ್ಲೆಟ್ ಸಂಪೂರ್ಣ ವಾಗಿ ಸ್ವಚ್ಛವಾಗುತ್ತದೆ ಹಾಗೂ ಯಾವುದೇ ದುರ್ವಾಸನೆ ಬರುವುದಿಲ್ಲ.

ಬದಲಿಗೆ ಸ್ವಚ್ಛವಾಗಿ ಒಳ್ಳೆಯ ಪರಿಮಳ ಬರುತ್ತದೆ. ಆದರೆ ಪ್ರತಿ ಬಾರಿ ನಾವು ಹಣ ಕೊಟ್ಟು ಅವುಗಳನ್ನು ಖರೀದಿ ಮಾಡಲು ಸಾಧ್ಯವಿಲ್ಲ. ಅದರ ಬದಲು ಈ ದಿನ ನಾವು ಹೇಳುವಂತಹ ಈ ಒಂದು ವಿಧಾನವನ್ನು ಅನುಸರಿಸಿದರೆ ನೀವೇ ಸುಲಭವಾಗಿ ಕಡಿಮೆ ಖರ್ಚಿನಲ್ಲಿ ಟಾಯ್ಲೆಟ್ ಕ್ಲೀನರ್ ತಯಾರಿಸಬಹುದು ಹಾಗೂ ಟಾಯ್ಲೆಟ್ ಕ್ಲೀನ್ ಆಗಿಯೇ ಇರುತ್ತದೆ. ಹಾಗಾದರೆ ಇದನ್ನ ತಯಾರಿಸುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಎಂದು ನೋಡುವುದಾದರೆ.

See also  ಇಲ್ಲಿದೆ ನೋಡಿ ಅತಿ ಸುಲಭವಾದ ಅಡುಗೆ ಸೀಕ್ರೆಟ್ ಗಳು..ತೆಂಗಿನಕಾಯಿಯ ಅರ್ಧಕ್ಕೆ ಸೀಳಲು,ಕಲಬೆರಕೆ ಕಂಡುಹಿಡಿಯಲು..

ಒಂದು ಚಿಕ್ಕ ಬೌಲ್ ತೆಗೆದುಕೊಂಡು ಅದಕ್ಕೆ 4 ರಿಂದ 5 ಚಮಚ ಹಾರ್ಪಿಕ್ ಹಾಗೂ ಎರಡರಿಂದ ಮೂರು ಚಮಚ ಕಂಫರ್ಟ್ ಒಂದು ಚಮಚ ಅಡುಗೆ ಸೋಡಾ ಇಷ್ಟನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ ಇದನ್ನು ನಿಮ್ಮ ಮನೆಯಲ್ಲಿ ಯಾವುದಾದರೂ ಹಳೆಯ ಗುಡ್ ನೈಟ್ ಕಾಯ್ಲ್ ಇದ್ದರೆ ಅದರ ಒಳಗಡೆ ಹಾಕಿ ಅದರ ಕ್ಯಾಪ್ ಮುಚ್ಚಿ ಅದನ್ನು ನಿಮ್ಮ ಫ್ಲಶ್ ಒಳಗಡೆ ಹಾಕಬೇಕು.

ಈ ರೀತಿ ಹಾಕುವುದರಿಂದ ಅದರೊಳಗಡೆ ಇರುವಂತಹ ಲಿಕ್ವಿಡ್ ಸ್ವಲ್ಪ ಸ್ವಲ್ಪ ಒಳಗಡೆ ಸೇರಿ ಅದರಿಂದ ಟಾಯ್ಲೆಟ್ ಕ್ಲೀನ್ ಆಗುತ್ತದೆ ಹಾಗೂ ಒಳ್ಳೆಯ ಪರಿಮಳವೂ ಸಹ ಬರುತ್ತದೆ. ಇದು ಸುಲಭವಾದಂತಹ ವಿಧಾನವಾಗಿದ್ದು ಪ್ರತಿಯೊಬ್ಬರೂ ಕೂಡ ಇದನ್ನು ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">