ಈ ಚಾಯ್ ವಾಲನ ಪುಂಗಿಯಿಂದ ಮೋಸ ಹೋದವರೆಷ್ಟು ನೀವು ನಂಬಿದ್ರಾ ಇವನನ್ನ…….||
ಎಂಬಿಎ ಚಾಯ್ ವಾಲಾ ಅಲಿಯಾಸ್ ಪ್ರಫುಲ್ ಬಿಲ್ಲೋ ಈ ಒಂದು ಹೆಸರನ್ನು ನೀವು ಕೂಡ ಕೇಳಿರುತ್ತೀರಾ ನೀವು ಕೋಟಿಗಟ್ಟಲೆ ಹಣವನ್ನು ಮಾಡಬೇಕು ಎಂದರೆ ದೊಡ್ಡ ದೊಡ್ಡ ಕೆಲಸ ಹಾಗೂ ದೊಡ್ಡ ದೊಡ್ಡ ಬಿಸಿನೆಸ್ ಮಾಡುವ ಅಗತ್ಯ ಇಲ್ಲ ಅದರ ಬದಲು ಸಣ್ಣದೊಂದು ಟೀ ಶಾಪ್ ಅನ್ನು ಇಟ್ಟುಕೊಂಡರೆ ಸಾಕು
ಎಂದು ತೋರಿಸಿಕೊಟ್ಟಂತಹ ಅಪರೂಪದ ವ್ಯಕ್ತಿ ಈತ. ಇಲ್ಲಿ ಇವರು ಈ ಒಂದು ಹಂತಕ್ಕೆ ಬರುವುದಕ್ಕೆ ಟೀ ಒಂದೇ ಬಿಸಿನೆಸ್ ಅನ್ನು ಮಾಡಿದರ ಅಥವಾ ಬೇರೆ ಯಾವುದಾದರೂ ಸ್ಕ್ಯಾಮ್ ನಲ್ಲಿಯೂ ಕೂಡ ಭಾಗಿಯಾದರ. ಕಾರಣ ಈತನ ಬಳಿ ಯಾವುದೇ ಫ್ರಾoನ್ಚೈಸಿ ಹಾಗೂ ಪಾರ್ಟ್ನರ್ ಶಿಪ್ ಪಡೆದವರು ತಾವು ಈತನಿಂದ ಮೋಸ ಹೋಗಿದ್ದೇವೆ ಎಂದು ಪೊಲೀಸರ ಬಳಿ ದೂರನ್ನು ಕೊಡುತ್ತಿದ್ದಾರೆ.
ಇಲ್ಲಿವರೆಗೂ ಈತನ ಮೇಲೆ ಸುಮಾರು 28ಕ್ಕೂ ಹೆಚ್ಚು ಇಂತಹ ಫ್ರಾಡ್ ದೂರುಗಳು ದಾಖಲಾಗಿವೆ. ಹಿಂದೊಮ್ಮೆ ಈತನನ್ನು ತಮ್ಮ ಇನ್ಸ್ಪಿ ರೇಷನ್ ಆಗಿ ತೆಗೆದುಕೊಂಡವರೇ ಇವತ್ತು ಆತನನ್ನು ಒಬ್ಬ ದೊಡ್ಡ ನಯವಂಚಕ ಎಂದು ನಿಂದಿಸುವಂತಾಗಿದೆ. ಇಷ್ಟಕ್ಕೂ ಈ ಪ್ರಫುಲ್ ಬಿಲ್ಲೋ ಅವರು ಎಸಗಿದಂತಹ ದ್ರೋಹವಾದರೂ ಏನು ಈತನ ಸ್ಕ್ಯಾಮ್ ನ ಹಿನ್ನೆಲೆ ಏನು ಎನ್ನುವುದರ ಬಗ್ಗೆ ಈ ದಿನ ತಿಳಿಯೋಣ.
ಎಂಬಿಎ ಚಾಯ್ ವಾಲಾ ಅಂತಾನೆ ಹೆಸರಾದಂತಹ ಈತ 2017ರ ಜುಲೈ 25ನೇ ತಾರೀಖು ಕೇವಲ 8000 ಬಂಡವಾಳದಲ್ಲಿ ಒಂದು ಸಣ್ಣ ಟೀ ಅಂಗಡಿಯನ್ನು ತೆರೆಯುತ್ತಾನೆ. ಈ ರೀತಿ ಶುರುವಾದoತಹ ಈತನ ಆಸ್ತಿಯ ಒಟ್ಟು ಮೊತ್ತ ಇವತ್ತಿಗೆ 24 ಕೋಟಿ ಅಷ್ಟು ಇದೆ. ಡಿಗ್ರಿ ಮುಗಿಸಿದ ಬಳಿಕ ಎಂಬಿಎ ಗಾಗಿ ಅಹಮದಾಬಾದ್ ನ.
ಐ ಐ ಎಂ ಗೆ ಸೇರಬೇಕು ಎಂದು ಕೊಂಡನಾದರೂ ಅದು ಸಾಧ್ಯವಾಗ ದೇ ಈತ ಡಿಸ್ ಕ್ವಾಲಿಫೈ ಆಗುತ್ತಾನೆ. ಇದರಿಂದ ಕುಗ್ಗದಂತಹ ಈತ 8000 ರೂಪಾಯಿಯನ್ನು ಇನ್ವೆಸ್ಟ್ ಮಾಡಿ ಒಂದು ಟೀ ಶಾಪ್ ಅನ್ನು ಇಡುತ್ತಾನೆ. ಇವತ್ತು ಅದು ದೇಶದ ನೂರಕ್ಕೂ ಹೆಚ್ಚಿನ ಸಿಟಿಗಳಲ್ಲಿ 200 ಕ್ಕೂ ಹೆಚ್ಚಿನ ಫ್ರಾoನ್ಚೈಸಿ ಗಳಾಗಿ ಮುಂದುವರೆದಿದೆ.
ಹಾಗೂ ಇವರ ವಾರ್ಷಿಕ ಟರ್ನ್ ಓವರ್ ಸುಮಾರು ನಾಲ್ಕರಿಂದ ಐದು ಕೋಟಿಗಳ ಲೆಕ್ಕದಲ್ಲಿದೆ. ಇಲ್ಲಿ ಎಂಬಿಎ ಎಂದರೆ ಮಾಸ್ಟರ್ ಆಫ್ ಬಿಸಿ ನೆಸ್ ಅಡ್ಮಿನಿಸ್ಟ್ರೇಷನ್ ಅಲ್ಲ ಬದಲಿಗೆ ಮಿಸ್ಟರ್ ಬಾಯ್ಲರ್ ಅಹಮದಾ ಬಾದ್. ಇಷ್ಟು ತ್ವರಿತವಾಗಿ ಇದು ಬೆಳೆಯುವುದಕ್ಕೆ ಕಾರಣ ಅದರ ಒಂದು ಫ್ರಾoನ್ಚೈಸ್. ಈ ಫ್ರಾoನ್ಚೈಸ್ ಎಂದರೆ ಉದಾಹರಣೆಗೆ ಈಗ ನೀವು ಒಂದು ರೆಸ್ಟೋರೆಂಟ್ ಅನ್ನು ಓಪನ್ ಮಾಡುತ್ತೀರಾ ಎಂದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.