ಸಾಲ ಇಸ್ಕೊಂಡೋರು ಮನೆಗೆ ಬಂದು ವಾಪಸ್ ಕೊಡುತ್ತಾರೆ……||ಇಲ್ಲಿಗೆ ಬಂದ ಮೇಲೆ 45 ವರ್ಷಕ್ಕೂ ಮದುವೆ ಆಗುತ್ತೆ……!!
ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ನಮ್ಮ ಸುತ್ತಮುತ್ತ ಹಲವಾರು ಶಕ್ತಿಪೀಠಗಳು ಇದ್ದು ಅವೆಲ್ಲಾ ಶಕ್ತಿ ಪೀಠಗಳು ಕೂಡ ಒಂದೊಂದು ರೀತಿಯ ಶಕ್ತಿಯನ್ನು ಒಳಗೊಂಡಿದೆ ಎಂದೇ ಹೇಳಬಹುದು ಹೌದು ತಮ್ಮದೇ ಆದ ಕೆಲವೊಂದು ಪವಾಡವನ್ನು ಸೃಷ್ಟಿಸುತ್ತವೆ ಹಾಗೂ ಹಲವಾರು ಜನರಿಗೆ ಹಲವಾರು ರೀತಿಯ ಸಮಸ್ಯೆಗಳನ್ನು ದೂರ ಮಾಡುತ್ತದೆ.
ಬಂದಂತಹ ಜನರಿಗೆ ಅವರು ಯಾವ ಕಷ್ಟಕ್ಕಾಗಿ ಬಂದಿದ್ದಾರೋ ಅವರು ಆ ಕಷ್ಟವನ್ನು ಹೇಳಿಕೊಂಡು ಹೋಗಿ ಕೆಲವೊಂದಷ್ಟು ಪೂಜೆ ಮಾಡಿದರೆ ಸಾಕು ಅವರಿಗೆ ಎಲ್ಲಾ ಕಷ್ಟಗಳು ಸಹ ದೂರವಾಗುತ್ತದೆ ಎನ್ನುವ ನಂಬಿಕೆ ಪ್ರತಿಯೊಬ್ಬರಲ್ಲಿಯೂ ಸಹ ಇದೆ. ಅದೇ ರೀತಿಯಾಗಿ ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ದೇವಸ್ಥಾನವು ಕೂಡ ಅಷ್ಟೇ ಅದ್ಭುತಗಳನ್ನು ಸೃಷ್ಟಿಸುತ್ತಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಹಾಗಾದರೆ ಆ ಒಂದು ಅದ್ಭುತವಾದಂತಹ ದೇವಸ್ಥಾನ ಯಾವುದು? ಆ ದೇವಸ್ಥಾನ ಯಾವ ರೀತಿಯ ಪವಾಡವನ್ನು ಸೃಷ್ಟಿಸುತ್ತಿದೆ? ಆ ದೇವಸ್ಥಾನದಲ್ಲಿ ನೆಲೆಗೊಂಡಿರುವ ದೇವರು ಯಾರು? ಈ ದೇವಸ್ಥಾನದ ವಿಳಾಸ ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿಯುತ್ತಾ ಹೋಗೋಣ.
ಹೌದು ಈ ದೇವಸ್ಥಾನಕ್ಕೆ ನೀವು ಯಾವ ಕಷ್ಟ ಎಂದು ಬಂದು ಪೂಜೆ ಮಾಡಿ ಹೋಗುತ್ತೀರೋ ನಿಮ್ಮ ಹರಕೆಯನ್ನು ಒಪ್ಪಿ ಹೋಗುತ್ತೀರೋ ಆ ಎಲ್ಲಾ ಕಷ್ಟಗಳು ಸಹ ಕೆಲವೇ ದಿನಗಳಲ್ಲಿ ದೂರವಾಗುತ್ತದೆ. ಯಾರಿಗೆ ವಿವಾಹ ಭಾಗ್ಯ ಇರುವುದಿಲ್ಲವೋ ಹಾಗೂ ಇನ್ನು ಯಾರಿಗೆ ಸಂತಾನ ಆಗಿರುವುದಿಲ್ಲ ಅವರೆಲ್ಲರಿಗೂ ಕೂಡ ಈ ದೇವಸ್ಥಾನಕ್ಕೆ ಬಂದರೆ ಈ ದೇವಸ್ಥಾನದಲ್ಲಿ ನೆಲೆಸಿರುವಂತಹ ದೇವರು ಅದ್ಭುತವಾದಂತಹ ಪವಾಡವನ್ನು ಸೃಷ್ಟಿಸುತ್ತಾರೆ.
ಅಷ್ಟಕ್ಕೂ ದೇವಸ್ಥಾನದಲ್ಲಿ ನೆಲೆಸಿರುವ ದೇವರು ಯಾರು ಎಂದರೆ ತಾಯಿ ಅನ್ನಪೂರ್ಣೇಶ್ವರಿ ಅಮ್ಮನವರು. ಯಾರೇ ಭಕ್ತರು ಯಾವ ಕಷ್ಟ ಎಂದು ಬರುತ್ತಾರೋ ಅವರು ಕನಿಷ್ಠ ಪಕ್ಷ ಐದು ವಾರ ಅಥವಾ ಒಂಬತ್ತು ವಾರ ಬೆಲ್ಲದ ದೀಪವನ್ನು ಹಚ್ಚಬೇಕು. ಈ ರೀತಿ ಹಚ್ಚುತ್ತಾ ನೀವು ಸಂಕಲ್ಪವನ್ನು ಮಾಡಿಕೊಂಡು ಹೋದರೆ ಅಷ್ಟು ದಿನದ ಒಳಗೆ ನಿಮ್ಮ ಸಂಕಲ್ಪಗಳು ಈಡೇರುತ್ತದೆ.
ಈ ದೇವಸ್ಥಾನ ಇರುವುದಾದರೂ ಎಲ್ಲಿ ಎಂದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಅತ್ತಿವಟ್ಟ ಎಂಬ ಗ್ರಾಮದಲ್ಲಿ ತಾಯಿ ಅನ್ನಪೂರ್ಣೇಶ್ವರಿಯವರು ನೆಲೆಸಿದ್ದಾರೆ. ಈ ದೇವ ಸ್ಥಾನದ ಪವಾಡ ತಿಳಿದಂತಹ ಭಕ್ತಾದಿಗಳು ಬೇರೆ ಬೇರೆ ಕಡೆಯಿಂದಲೂ ಕೂಡ ಆಗಮಿಸುತ್ತಿದ್ದಾರೆ. ಇಲ್ಲಿ ತಾಯಿಗೆ ಯಾವುದೇ ರೀತಿಯ ಪೂಜೆ ಮಾಡಿಸಬೇಕು ಯಾವ ವಿಧಾನವು ಇಲ್ಲ ಕೇವಲ ಬೆಲ್ಲದ ದೀಪವನ್ನು ಹಚ್ಚಿ ಸಂಕಲ್ಪವನ್ನು ಮಾಡಿದರೆ ಸಾಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.