ದಟ್ಟ ದರಿದ್ರನನ್ನೂ ಕೋಟ್ಯಾಧಿಪತಿಯನ್ನಾಗಿ ಮಾಡುತ್ತೆ ಅತಿ ರಹಸ್ಯ ಲಕ್ಷ್ಮಿ ಮಂತ್ರ……..!!
ಬದುಕು ಎಂದರೆ ಅನೇಕ ಕಷ್ಟ ನಷ್ಟಗಳು ಏಳುಬೀಳುಗಳು ಇದ್ದೇ ಇರುತ್ತದೆ. ಎಲ್ಲಾ ಪರಿಸ್ಥಿತಿಗಳನ್ನು ಮೆಟ್ಟಿ ನಿಲ್ಲುವುದೇ ಜೀವನ. ಆದರೆ ಕಷ್ಟದ ಪರಿಸ್ಥಿತಿಗಳನ್ನು ಮೆಟ್ಟಿ ನಿಲ್ಲುವುದು ತಿಳಿದಷ್ಟು ಸುಲಭವಲ್ಲ. ಅಂತಹ ಸಮಯವನ್ನು ಎದುರಿಸುವುದಕ್ಕೆ ಅಷ್ಟೇ ಧೈರ್ಯ ಮತ್ತು ಛಲ ಬೇಕು. ಒಂದಾದ ಮೇಲೊಂದರಂತೆ ಬರುವಂತಹ ಕಷ್ಟಗಳು ಯಂಥವರನ್ನು ಸಹ ಕುಗ್ಗುವಂತೆ ಮಾಡುತ್ತದೆ.
ಸಾಯುವವನಿಗೆ ಒಂದು ಹುಲ್ಲು ಕಡ್ಡಿಯೂ ಆಸರೆ ಎನ್ನುವ ಹಾಗೆ ಅಂತಹ ಸಮಯದಲ್ಲಿ ಯಾವುದಾದರೂ ಒಂದು ಶಕ್ತಿ ಜೊತೆಗಿದ್ದರೆ ಅದೇ ಎಷ್ಟೋ ಧೈರ್ಯ ನೀಡುತ್ತದೆ. ಅದೇ ರೀತಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಈ ಒಂದು ಮಂತ್ರವನ್ನು ನೀವು ಹೇಳುವುದರಿಂದ ಆರ್ದಿಕ ಸಂಕಷ್ಟದಲ್ಲಿರುವವರಿಗೆ ಒಂದು ಸಹಾಯದ ಮಾರ್ಗವಾಗಿರುತ್ತದೆ. ದೇವರ ಈ ಮಂತ್ರಗಳಿಂದ
ಧನವನ್ನು ನಿಮ್ಮ ಕಡೆಗೆ ಆಕರ್ಷಿಸಬಹುದಾಗಿದೆ. ಇಂತಹ ಮಂತ್ರಗಳ ಉಚ್ಚಾರಣೆಯಿಂದ ಜೀವನದಲ್ಲಿ ಎದುರಾದಂತಹ ಆರ್ಥಿಕ ಕಷ್ಟಗಳು ದೂರವಾಗುತ್ತದೆ. ಈ ರೀತಿ ಕಷ್ಟಗಳೆಲ್ಲವನ್ನು ಸಹ ದೂರ ಮಾಡುತ್ತದೆ ಈ ಮಂತ್ರ. ಅಂದರೆ ಕುಬೇರ ಮಂತ್ರ ಈ ಒಂದು ಮಂತ್ರ ಯಾವುದು ಎಂದು ಈ ಕೆಳಗೆ ತಿಳಿಯೋಣ. ಓಂ ಯಕ್ಷಾಯ ಕುಬೇರಾಯ ವೈ ಶ್ರವಣಾಯ, ಧನ ಧಾನ್ಯಾಧಿಪತಯೇ ಧನ ಧಾನ್ಯ ಸಮೃದ್ಧಿo ಮೇ ದೇಹಿ ದಾಪಯ ಸ್ವಾಹಾ||
ನೀವು ಹಣದ ಕೊರತೆಯಿಂದ ಬಳಲುತ್ತಿದ್ದರೆ ಕುಬೇರ ಮಂತ್ರವನ್ನು ಪ್ರತಿದಿನ 108 ಬಾರಿ ಪಠಿಸಬೇಕು. ಈ ಕುಬೇರ ಮಂತ್ರವನ್ನು ಸಾಕ್ಷಾತ್ ರಾವಣ ಕೂಡ ಜಪಿಸುತ್ತಿದ್ದ ಎಂದು ಹೇಳಲಾಗುತ್ತದೆ. ಲಕ್ಷ್ಮಿಯ ಮಂತ್ರ ಯಾವುದು ಎಂದು ಈ ಕೆಳಗೆ ನೋಡೋಣ. ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಲಯೇ ಪ್ರಸೀದ ಪ್ರಸೀದ ಶ್ರೀಂ ಹ್ರೀಂ ಓಂ ಮಹಾಲಕ್ಷ್ಮೈ ನಮಃ||
ಇದು ಲಕ್ಷ್ಮೀದೇವಿಯ ಮೂಲ ಮಂತ್ರವಾಗಿದೆ. ಈ ಮಂತ್ರವನ್ನು ಹೇಳುವುದರಿಂದ ಜೀವನದಲ್ಲಿ ಸುಖ ಸಮೃದ್ಧಿ ನೆಲೆಸುತ್ತದೆ. ಆರ್ದಿಕ ಸಮಸ್ಯೆಯನ್ನು ದೂರ ಮಾಡುವಂತಹ ಮಂತ್ರ. ಈ ಮಂತ್ರವನ್ನು ಪ್ರತಿನಿತ್ಯ ಹೇಳುವುದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳು ದೂರವಾಗಿ ತಾಯಿ ಲಕ್ಷ್ಮಿ ದೇವಿ ಮನೆಯಲ್ಲಿ ನೆಲೆಸುತ್ತಾಳೆ. ಓಂ ಗಂ ಗಣಪತಯೇ ನಮಃ.
ಇದು ಗಣೇಶನ ಮೂಲ ಮಂತ್ರವಾಗಿದ್ದು. ತಾಯಿ ಲಕ್ಷ್ಮಿ ಗಣೇಶನಲ್ಲಿ ತನ್ನ ಮಗನನ್ನು ಕಾಣುತ್ತಾಳೆ. ಹಾಗಾಗಿ ಪ್ರತಿನಿತ್ಯ 108 ಬಾರಿ ಗಣೇಶನ ಈ ಮಂತ್ರವನ್ನು ಹೇಳುವುದರಿಂದ ನಿಮಗೆ ಲಕ್ಷ್ಮಿ ಕಟಾಕ್ಷ ಸಿಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ಪ್ರತಿನಿತ್ಯ ಈ ರೀತಿಯ ಕೆಲವೊಂದಷ್ಟು ಮಂತ್ರಗಳನ್ನು ಹೇಳುವುದರಿಂದ ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳನ್ನು ಸಹ ದೂರ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ