ಬಸವಣ್ಣನ ಅಂತ್ಯದ ಕಥೆ ಕೇಳಿದರೆ ಬೆಚ್ಚಿ ಬೀಳ್ತೀರಾ..ಲಿಂಗ ದೀಕ್ಷೆ ಆರಂಭದ ಕಥೆ ಇದು..

ಬ್ರಾಹ್ಮಣರಾಗಿ ಹುಟ್ಟಿದ ಬಸವಣ್ಣ ರಿಂದ ಭಕ್ತಿ ಕ್ರಾಂತಿ…….||

WhatsApp Group Join Now
Telegram Group Join Now

ಬಸವಣ್ಣ ತಮ್ಮ ಚಿಕ್ಕ ವಯಸ್ಸಿನಲ್ಲೇ ಮನೆ ಬಿಟ್ಟು ಹೋಗಿದ್ದು ಯಾಕೆ. ಬಸವಣ್ಣ ಅವರ ಚಿತ್ರವನ್ನು ಅಂಚೆ ಚೀಟಿ ಹಾಗೂ ನಾಣ್ಯದಲ್ಲಿ ಮುದ್ರಿಸಲು ಕಾರಣ ಏನು? ಬಸವಣ್ಣನವರು ಪರಿಚಯಿಸಿದ ಇಷ್ಟಲಿಂಗ ಧಾರಣೆಯ ಮಹತ್ವ ಏನು? ಹೀಗೆ ಬಸವಣ್ಣ ಅವರ ಜೀವನಕ್ಕೆ ಸಂಬಂಧಿಸಿದಂತಹ ಹಾಗೂ ಯಾರಿಗೂ ತಿಳಿಯದೆ ಇರುವಂತಹ ಕೆಲವೊಂದಷ್ಟು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ.

12ನೇ ಶತಮಾನದಲ್ಲಿ ಜನರಲ್ಲಿ ಇದ್ದಂತಹ ಮೌಡ್ಯವನ್ನು ತಮ್ಮ ವಚನ ಗಳ ಮೂಲಕ ವರ್ಣಿಸಿ ಜನರಲ್ಲಿ ಜಾಗೃತಿ ಮೂಡಿಸಿದಂತಹ ಮಹಾನ್ ಸಮಾಜ ಸುಧಾರಕ ಬಸವಣ್ಣ ಇವರು ವಿಜಯಪುರ ಜಿಲ್ಲೆಯಲ್ಲಿರುವ ಬಸವನಬಾಗೇವಾಡಿ ಎಂಬ ಗ್ರಾಮದ ಒಂದು ಬ್ರಾಹ್ಮಣ ಕುಟುಂಬದಲ್ಲಿ ಜನಿಸುತ್ತಾರೆ. ಕೆಲವರು ಇವರು ತಾಯಿಯ ಮನೆಯಾದ ಇಂಗಳೇಶ್ವರ ಗ್ರಾಮದಲ್ಲಿ ಜನಿಸಿದ್ದರು ಎಂದು ಹೇಳುತ್ತಾರೆ.

ಬಸವಣ್ಣ ಅವರ ತಂದೆಯ ಹೆಸರು ಮಾದರಸ ತಾಯಿ ಮಾದಲಾಂಬಿಕೆ ಇವರಿಗೆ ನಾಗಮ್ಮ ಎಂಬ ಅಕ್ಕ ಕೂಡ ಇದ್ದರು. ಅಕ್ಕ ನಾಗಮ್ಮ ಹಾಗೂ ಭಾವ ಶಿವ ಸ್ವಾಮಿಯ ಜೊತೆಯಲ್ಲಿ ಬಾಲ್ಯದ ಹೆಚ್ಚಿನ ಸಮಯವನ್ನು ಕಳೆದರು. ಬಸವಣ್ಣ ಅವರಿಗೆ 8 ವರ್ಷ ತುಂಬಿದಾಗ ಮನೆಯಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಮನೆಯಲ್ಲಿ ಹಿರಿಯರು ಜನಿವಾರವನ್ನು ಹಾಕಲು ನಿರ್ಧರಿಸುತ್ತಾರೆ. ಆಗ ಬಸವಣ್ಣ ಅವರು

ನನಗೆ ಜನಿವಾರವನ್ನು ಹಾಕುವ ಮೊದಲು ಅಕ್ಕನಿಗೆ ಜನಿವಾರವನ್ನು ಹಾಕಿ ಏಕೆಂದರೆ ಅವರು ನನಗಿಂತ ದೊಡ್ಡವರು ಎಂದು ಹಠ ಹಿಡಿದರು ಆಗ ಹಿರಿಯರು ಹಾಗೆಲ್ಲ ಹೆಣ್ಣು ಮಕ್ಕಳಿಗೆ ಹಾಕುವುದಕ್ಕೆ ಆಗುವುದಿಲ್ಲ ಎಂದು ಬುದ್ಧಿ ಹೇಳಿದರು. ಇದನ್ನು ಕೇಳಿದಂತಹ ಬಸವಣ್ಣ ಅವರಿಗೆ ತುಂಬಾ ಸಿಟ್ಟು ಬಂತು. ಸಮಾಜದಲ್ಲಿರುವಂತಹ ಲಿಂಗ ತಾರತಮ್ಯ ಜಾತಿ ವ್ಯವಸ್ಥೆ ಶ್ರೀಮಂತ ಬಡತನ ಎಂಬ ತಾರತಮ್ಯದಿಂದ

See also  ಯಾವ ಲಗ್ನ ರಾಶಿಯವರಿಗೆ ಯಾವ ವಯಸ್ಸಲ್ಲಿ ಮದುವೆ ಇಲ್ಲಿದೆ ಕೂತುಹಲಕಾರಿ ವಿಷಯ..

ಬೇಸರಗೊಂಡಂತಹ ಅವರು ಮನೆಯಿಂದ ಹೊರಬಂದರು ಅಲ್ಲಿಂದ ಅವರು ಸೀದಾ ಹೋಗಿದ್ದು ಕೂಡಲಸಂಗಮಕ್ಕೆ. ಬಸವಣ್ಣ ಅವರು 12 ವರ್ಷ ಕೂಡಲಸಂಗಮ ದೇವಸ್ಥಾನದಲ್ಲಿ ಅಧ್ಯಯನವನ್ನು ಮಾಡುತ್ತಿ ದ್ದರು ತಮ್ಮ ಅಧ್ಯಯನ ಮುಗಿದ ಮೇಲೆ ಲಕುಲಿಷ ಪಶುಪಾಟ ಸಂಪ್ರ ದಾಯದ ಒಂದು ಶೈವ ಕಲಿಕೆಯನ್ನು ಸಂಗಮೇಶ್ವರದಲ್ಲಿ ಮುಗಿಸಿದರು. ನಂತರ ತಾಯಿಯ ಸೋದರ ಸಂಬಂಧಿಯಾದ ಗಂಗಾಂಬಿಕೆ ಎನ್ನುವವ ರನ್ನು ಮದುವೆಯಾದರು. ಇವರು ಕಳಚೂರಿ ರಾಜ ಬಿಜ್ಜಳನ ಪ್ರಧಾನಮಂತ್ರಿಯ ಮಗಳಾಗಿದ್ದರು.

ಬಸವಣ್ಣ ಅವರು 12 ವರ್ಷಗಳ ಕಾಲ ಕೂಡಲಸಂಗಮದಲ್ಲಿ ಅಧ್ಯಯ ನವನ್ನು ಮಾಡುತ್ತಾ ಅನೇಕ ವಿಚಾರಗಳನ್ನು ಕಲಿತರು ಅವರ ದೃಷ್ಟಿ ಯಲ್ಲಿ ದೇವನು ಒಬ್ಬ ಮತ್ತು ಅವನು ಮನುಷ್ಯನೊಳಗೆ ಇದ್ದಾನೆಯೇ ಹೊರತು ದೇವಸ್ಥಾನಗಳಲ್ಲಿ ಇಲ್ಲ. ಅಲ್ಲದೆ ಪ್ರತಿಯೊಬ್ಬ ಮನುಷ್ಯನು ಕೆಲಸ ಮಾಡಿಯೇ ಜೀವನವನ್ನು ನಡೆಸಬೇಕು. ಅದು ಬಿಟ್ಟು ಆಲಸ್ಯ ಜೀವನವನ್ನು ನಡೆಸಬಾರದು ಎಂದು ಹೇಳಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.crossorigin="anonymous">