ಮುತ್ತೈದೆಯರು ನಿತ್ಯ ತಲೆ ಸ್ನಾನ ಮಾಡಿಯೇ ಪೂಜೆ ಮಾಡಬೇಕಾ ? ಶಾಸ್ತ್ರ ಏನ್ ಹೇಳುತ್ತೆ ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಮುತ್ತೈದೆಯರು ನಿತ್ಯ ತಲೆ ಸ್ನಾನ ಮಾಡಿಯೇ ಪೂಜೆ ಮಾಡಬೇಕಾ? ಶಾಸ್ತ್ರದ ಹಿನ್ನೆಲೆ ಏನು……?

ನಾವು ಯಾವುದೇ ವಿಧಾನವನ್ನು ಅನುಸರಿಸಬೇಕು ಎಂದರೆ ಅದನ್ನು ಶಾಸ್ತ್ರದ ರೂಪವಾಗಿ ತಿಳಿದು ಆನಂತರ ಅದೇ ವಿಧಾನದಲ್ಲಿ ಎಲ್ಲಾ ಪೂಜೆಗಳನ್ನು ಮಾಡುತ್ತೇವೆ. ಹೌದು ಶಾಸ್ತ್ರಗಳಲ್ಲಿ ತಿಳಿಸಿರುವ ಪ್ರಕಾರ ನಾವು ಯಾವುದೇ ರೀತಿಯ ಪಾಪ ಕರ್ಮಗಳನ್ನು ದೂರ ಮಾಡಿಕೊಳ್ಳ ಬೇಕು ಎಂದರೆ ನಮಗೆ ಒಳ್ಳೆಯದಾಗಬೇಕು ಎಂದರೆ

ಸ್ನಾನ ಮಾಡಿ ದೇವರ ಧ್ಯಾನವನ್ನು ಅಂದರೆ ಪೂಜೆ ಮಾಡುವುದು ಒಳ್ಳೆಯದು. ಈ ರೀತಿ ಮಾಡುವುದರಿಂದ ನಮ್ಮ ಎಲ್ಲ ಪಾಪ ಕರ್ಮಗಳು ಕೂಡ ದೂರವಾಗುತ್ತದೆ. ಆದ್ದರಿಂದ ನಾವು ಮುಕ್ತಿಯನ್ನು ಪಡೆದು ಮುಂದಿನ ದಿನಗಳಲ್ಲಿ ನಾವು ಯಶಸ್ಸನ್ನು ಕಾಣಬಹುದು ಎನ್ನುವುದರ ಅರ್ಥ ಇದಾಗಿರುತ್ತದೆ. ಆದ್ದರಿಂದ ಪ್ರತಿನಿತ್ಯ ಸ್ನಾನ ಮಾಡುವುದು ಒಳ್ಳೆ ಯದು. ಅದೇ ರೀತಿಯಾಗಿ ವಿಶೇಷವಾದಂತಹ ದಿನಗಳಲ್ಲಿ ತಲೆ ಸ್ನಾನ ಮಾಡಿ ಪೂಜೆಯನ್ನು ಮಾಡುವುದು ಶ್ರೇಷ್ಠ ಎಂದು ಶಾಸ್ತ್ರಪುರಾಣಗಳಲ್ಲಿ ತಿಳಿಸಲಾಗಿದೆ.

ಅದರಲ್ಲೂ ಪ್ರತಿನಿತ್ಯ ದೇವರ ಮನೆಯಲ್ಲಿ ದೀಪಾರಾಧನೆಯನ್ನು ಮಾಡಬೇಕು ಎಂದರೆ ಪ್ರತಿನಿತ್ಯ ತಲೆ ಸ್ನಾನ ಮಾಡುವ ಅವಶ್ಯಕತೆ ಇಲ್ಲ. ಬದಲಿಗೆ ಸ್ನಾನ ಮಾಡಿ ಮಡಿ ಬಟ್ಟೆಯನ್ನು ಧರಿಸಿ ಸೂರ್ಯ ಉದಯಿಸು ವುದಕ್ಕೂ ಮುನ್ನ ದೇವರ ಪೂಜೆಯನ್ನು ಮಾಡುವುದು ಒಳ್ಳೆಯದು. ಈ ರೀತಿ ಮಾಡುವುದರಿಂದ ನಿಮ್ಮ ಎಲ್ಲ ಇಷ್ಟಾರ್ಥಗಳು ಕೂಡ ನೆರವೇರುತ್ತದೆ.

ಅದೇ ರೀತಿಯಾಗಿ ನೀವೇನಾದರೂ ಪಿತೃ ಆರಾಧನೆಯನ್ನು ಮಾಡುತ್ತಿ ದ್ದರೆ ಮನೆಯಲ್ಲಿ ಯಾವುದಾದರೂ ಶುಭ ಕಾರ್ಯ ಹಾಗೂ ಹಬ್ಬದ ದಿನಗಳಲ್ಲಿ ಹಾಗೂ ಯಾವುದಾದರು ಅನುಷ್ಠಾನ ಹೋಮ ಹವನ ಗಳನ್ನು ಮಾಡುತ್ತಿದ್ದರೆ ಈ ರೀತಿಯ ಮನೆಯಲ್ಲಿ ಶುಭಕಾರ್ಯಗಳು ಏನಾದರೂ ನಡೆಯುತ್ತಿದ್ದರೆ. ಅಂತಹ ಸಮಯದಲ್ಲಿ ಕಡ್ಡಾಯವಾಗಿ ಮಡಿಯಾಗಿ ತಲೆ ಸ್ನಾನ ಮಾಡಿ ಆನಂತರ ದೇವತಾ ಕಾರ್ಯಗಳನ್ನು ಮಾಡುವುದು ಒಳ್ಳೆಯದು.

ಹಾಗೇನಾದರು ನೀವು ಈ ವಿಧಾನವನ್ನು ಅನುಸರಿಸದೇ ಇದ್ದರೆ ನಿಮಗೆ ಆ ಒಂದು ಪೂಜೆಯ ಯಾವುದೇ ಶುಭಫಲ ಎನ್ನುವುದು ಸಿಗುವುದಿಲ್ಲ. ಅದರಿಂದ ಯಾವುದೇ ರೀತಿಯ ಪ್ರಯೋಜನ ಸಿಗುವುದಿಲ್ಲ. ಆದ್ದರಿಂದ ಇಂತಹ ಕೆಲವೊಂದಷ್ಟು ಶಾಸ್ತ್ರದ ವಿಧಿ ವಿಧಾನಗಳನ್ನು ಅನುಸರಿಸು ವುದು ಉತ್ತಮ. ಯಾವುದೇ ಒಂದು ವಿಧಾನವನ್ನು ಅನುಸರಿಸಬೇಕು ಎಂದರೆ ಅದಕ್ಕೆ ಬಹಳ ಪ್ರಮುಖವಾದಂತಹ ಕಾರಣವಿರುತ್ತದೆ ಆದ್ದರಿಂದ ಹಿಂದಿನವರು ಮಾಡಿರುವಂತಹ ಈ ಒಂದು ವಿಧಾನಗಳನ್ನು ನಾವು ಅನುಸರಿಸುವುದು ಒಳ್ಳೆಯದು.

ಆದ್ದರಿಂದ ಪ್ರತಿಯೊಬ್ಬರೂ ಈ ವಿಧಾನಗಳನ್ನು ಅನುಸರಿಸುವುದು ಒಳ್ಳೆಯದು ಈ ಪ್ರಯೋಜನಗಳನ್ನು ಪಡೆದುಕೊಳ್ಳದೆ ಇರುವುದಕ್ಕಿಂತ ಈ ವಿಧಾನಗಳನ್ನು ತಪ್ಪದೇ ಒಳ್ಳೆಯ ಮನಸ್ಸಿನಿಂದ ನನಗೆ ಒಳ್ಳೆಯದಾ ಗಲಿ ಎಂದು ಹೇಳುತ್ತಾ ಇವೆಲ್ಲವನ್ನು ಕೂಡ ಮಾಡುವುದರಿಂದ ಅದರಿಂದ ಇನ್ನೂ ಉತ್ತಮವಾದ ಯಶಸ್ಸನ್ನು ಅಂದರೆ ಪ್ರಗತಿಯನ್ನು ಕಾಣಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *