ಹುಟ್ಟಿದ ವಾರ ಸ್ತ್ರೀ ಮನಸ್ಥಿತಿ……||
1.ಭಾನುವಾರ – ಭಾನುವಾರ ಹುಟ್ಟಿದ ಹುಡುಗಿಯರು ತುಂಬಾ ಬುದ್ಧಿ ವಂತರು. ಇವರ ಜ್ಞಾಪಕ ಶಕ್ತಿ ಮತ್ತು ಊಹಾಶಕ್ತಿ ತುಂಬಾ ಹೆಚ್ಚಾಗಿರು ತ್ತದೆ. 2. ಸೋಮವಾರ – ಸೋಮವಾರ ಹುಟ್ಟಿದ ಹುಡುಗಿಯರು ತುಂಬಾ ತುಂಬಾ ಸೂಕ್ಷ್ಮವಂತರು. ಇವರಿಗೆ ಯೋಚನೆಗಳು ಜಾಸ್ತಿ. ಇವರು ಯಾವುದೇ ಕೆಲಸವನ್ನು ಬೇಗ ಕಲಿತುಕೊಳ್ಳುವರು. ಅಧಿಕವಾಗಿ ಮಾನಸಿಕ ಒತ್ತಡೆಗೆ ಗುರಿಯಾಗುತ್ತಾರೆ.
3. ಮಂಗಳವಾರ – ಮಂಗಳವಾರ ಹುಟ್ಟಿದ ಹುಡುಗಿಯರು ತುಂಬಾ ಚುರುಕಾಗಿ ಇರುತ್ತಾರೆ. ಇವರು ಹೊಸ ಹೊಸ ವಿಷಯಗಳನ್ನು ಕಲಿತು ಕೊಳ್ಳಲು ತುಂಬಾ ಉತ್ಸಾಹಕರಾಗಿರುತ್ತಾರೆ. 4. ಬುಧವಾರ- ಬುಧವಾರ ಹುಟ್ಟಿದ ಹುಡುಗಿಯರು ಯಾವಾಗಲೂ ಖುಷಿಯಾಗಿ ಹೆಚ್ಚು ಮಾತನಾಡಲು ಇಷ್ಟಪಡುತ್ತಾರೆ. ಇವರು ಒಂದು ವಿಷಯವನ್ನು ಪದೇಪದೇ ಯೋಚನೆ ಮಾಡುವುದಿಲ್ಲ. ಈ ಕೆಲಸವೇ ಒಂದೊಂದು ಸಲ ಇವರಿಗೆ ಕಷ್ಟದಲ್ಲಿ ಹಾಕುತ್ತದೆ.
5. ಗುರುವಾರ – ಗುರುವಾರ ಹುಟ್ಟಿದ ಹುಡುಗಿಯರು ತುಂಬಾ ಉತ್ಸಾಹಕರಾಗಿರುತ್ತಾರೆ ಮತ್ತು ಚುರುಕಾಗಿರುತ್ತಾರೆ. ಯಾವಾಗಲೂ ಖುಷಿಯಾಗಿ ಮತ್ತು ಮಾತನಾಡಲು ಬಯಸುತ್ತಾರೆ. ಮಾತನಾಡಲು ಇಷ್ಟ ಪಡುತ್ತಾರೆ. ಅದಕ್ಕೆ ಇವರ ಸುತ್ತಮುತ್ತಲು ಜನರು ಇರುತ್ತಾರೆ. 6. ಶುಕ್ರವಾರ – ಶುಕ್ರವಾರ ಹುಟ್ಟಿದ ಹುಡುಗಿಯರು ತುಂಬಾ ಆಕರ್ಷಣೀಯವಾಗಿ ಇರುತ್ತಾರೆ. ಒಳ್ಳೆಯ ಗುಣ ಇವರಲ್ಲಿ ಇರುತ್ತದೆ. ಇವರು ತುಂಬಾ ಬುದ್ದಿವಂತರು.
6. ಶನಿವಾರ- ಶನಿವಾರ ಹುಟ್ಟಿದ ಹುಡುಗಿಯರು ತುಂಬಾ ಧೈರ್ಯ ವಂತರು, ಜೀವನದಲ್ಲಿ ಎಷ್ಟೇ ಕಷ್ಟ ನಷ್ಟಗಳು ಬಂದರೂ ಎದುರಾಗಿ ನಿಲ್ಲುತ್ತಾರೆ ಮತ್ತು ಜಯವನ್ನು ಸಾಧಿಸುತ್ತಾರೆ. ಇವರು ನಂಬಿಕೆಯಿಂದ ಇರುತ್ತಾರೆ. ಸ್ನೇಹಕ್ಕೆ ಪ್ರಾಣ ಬಿಡುತ್ತಾರೆ. ಹೀಗೆ ಪ್ರತಿಯೊಂದು ದಿನವು ಜನಿಸಿದಂತಹ ವ್ಯಕ್ತಿಗಳ ಸ್ವಭಾವ ಒಂದೊಂದು ರೀತಿ ಇರುತ್ತದೆ ಎಲ್ಲಾ ದಿನ ಹುಟ್ಟಿದರು ಒಬ್ಬೊಬ್ಬರದ್ದು ಒಂದೊಂದು ಮನಸ್ಥಿತಿ ಇರುತ್ತದೆ. ಆದರೆ ಎಲ್ಲರದು ಒಂದೇ ರೀತಿ ಇರಬೇಕು ಎಂದು ಹೇಳಲು ಸಾಧ್ಯವಿಲ್ಲ.
ಯಾವುದೇ ಒಂದು ಮಗು ಹುಟ್ಟಿದ ತಕ್ಷಣ ಆ ಮಗು ಹುಟ್ಟಿದಂತಹ ಸಮಯ, ದಿನಾಂಕ, ವಾರ, ಎಲ್ಲವೂ ಕೂಡ ಬಹಳ ಮುಖ್ಯವಾಗಿರುತ್ತದೆ ಹಾಗೂ ಆ ಸಮಯ ಅವೆಲ್ಲವೂ ಕೂಡ ಆ ಮಗುವಿನ ಎಲ್ಲ ಭವಿಷ್ಯ ವನ್ನು ನಿರ್ಧರಿಸುವುದಕ್ಕೆ ಕಾರಣವಾಗಿರುತ್ತದೆ ಎಂದೇ ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ. ಆದ್ದರಿಂದಲೇ ಪ್ರತಿಯೊಬ್ಬರು ಯಾವುದೇ ಒಂದು ಮಗು ಹುಟ್ಟಿದ ತಕ್ಷಣ ಆ ಮಗು ಹುಟ್ಟಿದ ಸಮಯ, ದಿನಾಂಕ, ಎಲ್ಲವನ್ನು ಸಹ ನೆನಪಿಟ್ಟುಕೊಳ್ಳುತ್ತಾರೆ.
ಹಾಗೂ ಆ ಸಮಯದ ಆಧಾರದ ಮೇಲೆ ಆ ಮಗುವಿನ ಮುಂದಿನ ಭವಿಷ್ಯವೂ ಕೂಡ ನಿರ್ಧಾರವಾಗುತ್ತದೆ. ಆದ್ದರಿಂದಲೇ ಪ್ರತಿಯೊಬ್ಬರು ಇದನ್ನು ಸದಾ ಕಾಲ ನೆನಪಿನಲ್ಲಿಟ್ಟು ಕೊಳ್ಳುತ್ತಾರೆ ಹಾಗೇನಾದರೂ ಆ ಮಗುವಿನ ನಡವಳಿಕೆ ಹಾವಾ ಭಾವದಲ್ಲಿ ವ್ಯತ್ಯಾಸ ಇದ್ದರೆ ಆ ಒಂದು ಹುಟ್ಟಿದ ದಿನಾಂಕ ಸಮಯ ಎಲ್ಲವನ್ನು ತೆಗೆದು ಕೊಂಡು ಹೋಗಿ ಶಾಸ್ತ್ರ ವನ್ನು ಕೇಳಿ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.