ಸಾರಿಗೆ ಇಲಾಖೆಗೆ ಫ್ರೀ ಬಸ್ ಸೇವೆಯಿಂದ ಮೂರೆ ದಿನಕ್ಕೆ ಇಷ್ಟು ನಷ್ಟ ಆದ್ರೆ ಮುಂದಿನ ದಿನಗಳ ಕಥೆ……||
ರಾಜ್ಯದಲ್ಲಿ ಶಕ್ತಿ ಯೋಜನೆಗೆ ಚಾಲನೆ ಸಿಕ್ಕಿ ಇವತ್ತಿಗೆ ಮೂರು ದಿನ. ಶಕ್ತಿ ಯೋಜನೆಗೆ ಅಭೂತ ಪೂರ್ವವಾದಂತಹ ಬೆಂಬಲ ಸಿಕ್ಕಿದ್ದು ಮಹಿಳೆಯರು ತುಂಬಾ ಖುಷಿಯಿಂದ ಪ್ರಯಾಣವನ್ನು ಬೆಳೆಸುತ್ತಾ ಇದ್ದಾರೆ. ಭಾನುವಾರ ಮಧ್ಯಾನದಿಂದ ರಾಜ್ಯದಲ್ಲಿ ಮಹಿಳೆಯರ ಉಚಿತ ಪ್ರಯಾಣ ಶುರುವಾಯಿತು.
ಭಾನುವಾರ ರಜಾ ದಿನ ಆಗಿದ್ದರಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿ ಇರಲಿಲ್ಲ. ಸೋಮವಾರ ಸಾಮಾನ್ಯ ದಿನಗಳಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚಾಗಿ ಇತ್ತು. ಸೋಮವಾರ ಒಂದೇ ದಿನ ಶಕ್ತಿ ಯೋಜನೆಯ ಅಡಿ 41,32,776 ಮಹಿಳೆಯರು ಸಾರಿಗೆ ಬಸ್ ನಲ್ಲಿ ಪ್ರಯಾಣ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ನಾಲ್ಕು ನಿಗಮಗಳಿಂದ 8,83,53,443 ರೂಪಾಯಿ ಖರ್ಚು ಆಗಿದೆ ಎಂದು ಅಂದಾಜಿಸಲಾಗಿದೆ.
ಹೀಗಿರುವಾಗ ಸಾರಿಗೆ ಇಲಾಖೆಗೆ ಆದ ನಷ್ಟ ಎಷ್ಟು ಎನ್ನುವುದರ ಬಗ್ಗೆ ಕೂಡ ಲೆಕ್ಕಾಚಾರ ಶುರುವಾಗಿದೆ. ಕೆ ಎಸ್ ಆರ್ ಟಿ ಸಿ ಯಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ 11,40,057 ಇತ್ತು ಇದರಿಂದ ಆಗಿರುವಂತಹ ನಷ್ಟ ಎಷ್ಟು ಗೊತ್ತಾ 35,78,46,77 ರೂಪಾಯಿ ಇನ್ನು ಬಿಎಂಟಿಸಿಯಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ 17,58,887 ರೂಪಾಯಿ ಅಂದರೆ ಬಿಎಂಟಿಸಿಗೆ ಆಗಿರುವಂತಹ ನಷ್ಟ ಎಷ್ಟು ಎಂದರೆ 1,75,33,234.
ಇನ್ನು NWKRTC ಮಹಿಳಾ ಪ್ರಯಾಣಿಕರ ಸಂಖ್ಯೆ ಎಷ್ಟಿತ್ತು ಎಂದರೆ 8,31,840. ಇನ್ನು ಇದರಿಂದ ಆದಂತಹ ನಷ್ಟ ಎಷ್ಟು ಎಂದರೆ 2,10,66,638 ರೂಪಾಯಿ. ಇನ್ನು ಕೆಕೆಆರ್‌ಟಿಸಿ ಯಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಎಷ್ಟಿತ್ತು ಎಂದರೆ 4,04,042. ಇನ್ನು ಇದರಿಂದ ಕೆಕೆಆರ್‌ಟಿಸಿ ಅವರಿಗೆ ಆಗಿರುವಂತಹ ನಷ್ಟ ಎಷ್ಟು ಎಂದರೆ 1,39,68,885 ರೂಪಾಯಿ.
ಅಂದರೆ ಒಟ್ಟು ಮಹಿಳಾ ಪ್ರಯಾಣಿಕರ ಸಂಖ್ಯೆ 41,34,776 ಒಟ್ಟಾರೆಯಾಗಿ ಹೇಳುವುದಾದರೆ ರಾಜ್ಯ ಸಾರಿಗೆ ನಿಗಮ ಇಲಾಖೆಗೆ ಆದ ನಷ್ಟ ಕೇವಲ ಮೂರೇ ದಿನದ ಅಂತರದಲ್ಲಿ 8,83,53,434 ರೂಪಾಯಿ
ಹೀಗಾಗಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಗಳಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿ ಕಾರಿದ್ದಾರೆ. ಕರ್ನಾಟಕ ರಾಜ್ಯದ ಹಣಕಾಸಿನ ಪರಿಸ್ಥಿತಿ ಯಾವ ರೀತಿ ಇದೇ ಹಾಗೂ ಒಟ್ಟು ಎಷ್ಟು ಸಾಲದಲ್ಲಿ ನಮ್ಮ ರಾಜ್ಯ ಇದೆ.
ಪ್ರತಿ ವರ್ಷ ಇದಕ್ಕೆ ಎಷ್ಟು ಬಡ್ಡಿ ಕಟ್ಟಬೇಕು ಇದೆಲ್ಲವನ್ನು ಕೂಡ ಆಲೋಚನೆ ಮಾಡಿ ಸರ್ಕಾರ ಈ ಒಂದು ಯೋಜನೆಗಳನ್ನು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಆದರೆ ಇದರ ಬಗ್ಗೆ ಯಾವುದೇ ಆಲೋಚನೆ ಇಲ್ಲದೆ ಈ ಯೋಜನೆಗಳನ್ನು ಜಾರಿಗೊಳಿಸುವುದು ತಪ್ಪು ಹಾಗೂ ಇದರ ಬಗ್ಗೆ ಜನರು ಕೂಡ ಹೆಚ್ಚು ಆಲೋಚನೆ ಮಾಡುವುದು ಒಳ್ಳೆಯದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣ ವಾಗಿ ವೀಕ್ಷಿಸಿ.