ಮಂತ್ರಾಲಯಕ್ಕೆ ತೆರಳಿದಾಗ ಈ ಎಲ್ಲಾ ಕ್ಷೇತ್ರಗಳಿಗೂ ತಪ್ಪದೇ ಭೇಟಿ ನೀಡಿ..ಮಂತ್ರಾಲಯದ ಸುತ್ತ ಇರುವ ಪುಣ್ಯ ಕ್ಷೇತ್ರಗಳು - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಮಂತ್ರಾಲಯಕ್ಕೆ ತೆರಳಿದಾಗ ಈ ಎಲ್ಲಾ ಕ್ಷೇತ್ರಗಳಿಗೂ ತಪ್ಪದೆ ಭೇಟಿ ನೀಡಿ ||

ನಮ್ಮ ನೆರೆಯ ರಾಜ್ಯ ಆಂಧ್ರಪ್ರದೇಶದ ಕರ್ನೂರು ಜಿಲ್ಲೆಯ ಅದೋನಿ ತಾಲೂಕಿನಲ್ಲಿ ತುಂಗಭದ್ರಾ ನದಿಯ ತೀರದಲ್ಲಿ ಇರುವಂತಹ ಮಂತ್ರಾಲ ಯ ಕ್ಷೇತ್ರವು ಶ್ರೀ ರಾಘವೇಂದ್ರ ಸ್ವಾಮಿಗಳ ಮಹಿಮೆಯಿಂದಲೇ ಪ್ರಸಿದ್ಧವಾದoತಹ ಪುಣ್ಯಕ್ಷೇತ್ರ. ನಮ್ಮ ಕರ್ನಾಟಕದ ರಾಯಚೂರಿ ನಿಂದ ಮಂತ್ರಾಲಯ ಕ್ಷೇತ್ರ ಕೇವಲ 42 ಕಿಲೋಮೀಟರ್ ದೂರದಲ್ಲಿದೆ.

ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಭಕ್ತ ಪ್ರಹ್ಲಾದ ಅವತಾರವೇ ಆಗಿ ದ್ದಾರೆ. ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಸಶರೀರವಾಗಿ ಮಂತ್ರಾಲ ಯದಲ್ಲಿ ಕ್ರಿಸ್ತಶಕ 1671 ರ ಶ್ರಾವಣ ಮಾಸದ ಬಹಳ ಬಿದಿಗೆಯ ಗುರುವಾರ ದಂದು ಬೃಂದಾವನ ಹಸ್ತರಾದರು. ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಶರೀರವಾಗಿ ಬೃಂದಾವನ ಹಸ್ತರಾದ ನಂತರವೂ ಸಹ 700 ವರ್ಷಗಳ ಕಾಲ ಜೀವಂತರಾಗಿ ತಮ್ಮ ಭಕ್ತಾದಿಗಳನ್ನು ಅನುಗ್ರಹಿಸುತ್ತಾರೆ

ತಮ್ಮ ಭಕ್ತರಿಗೆ ನೀಡಿರುವ ಮಾತಿನಂತೆಯೇ ಇಂದಿಗೂ ಸಹ ಗುರುರಾ ಯರು ಸಮಾಧಿ ಸ್ಥಿತಿಯಲ್ಲಿ ಜೀವಂತರಾಗಿದ್ದು ಅವರನ್ನು ನಂಬಿ ಬರುವಂತಹ ಭಕ್ತಾದಿಗಳ ಸಕಲ ಕಷ್ಟಗಳನ್ನು ಕೂಡ ದೂರ ಮಾಡುತ್ತಾ ಬರುತ್ತಿದ್ದಾರೆ. ಹೀಗಾಗಿಯೇ ಅವರ ನೆಲೆಸಿರುವಂತಹ ಬೃಂದಾವನ ಅಪಾರ ಮಹಿಮೆ ಉಳ್ಳಂತಹ ಸ್ಥಳವಾಗಿದೆ. ಲಕ್ಷಾಂತರ ಭಕ್ತಾದಿಗಳು ನಮ್ಮ ಕರ್ನಾಟಕ ನೆರೆಯ ಆಂಧ್ರಪ್ರದೇಶ ತಮಿಳುನಾಡು ತೆಲಂಗಾಣ ಹಾಗೂ ಮಹಾರಾಷ್ಟ್ರದ ರಾಜ್ಯಗಳಿಂದಲೂ ಮಂತ್ರಾಲಯಕ್ಕೆ ಆಗಮಿಸಿ

ಗುರುರಾಯರ ದರ್ಶನವನ್ನು ಪಡೆದು ಗುರುರಾಯರ ಉಪಸ್ಥಿತಿಯನ್ನು ಕುಂತು ಮಂತ್ರಾಲಯದಲ್ಲಿ ಅನುಭವಿಸುತ್ತಾರೆ. ಹಾಗಾದರೆ ಈ ದಿನ ಮಂತ್ರಾಲಯಕ್ಕೆ ತೆರಳಿದವರೆಲ್ಲ ಭೇಟಿ ನೀಡಬಹುದಾದಂತಹ ಹಾಗೂ ಮಂತ್ರಾಲಯಕ್ಕೆ ಸಮೀಪ ಇರುವಂತಹ ಪ್ರಸಿದ್ಧ 10 ಪುಣ್ಯ ಸ್ಥಳಗಳ ಬಗ್ಗೆ ಮಾಹಿತಿಯನ್ನು ನೀಡಲು ಹೊರಟಿದ್ದೇವೆ. ಮಂಚಾಲಮ್ಮ ದೇವಸ್ಥಾನ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆಗಮನಕ್ಕೂ ಮೊದಲು ಮಂತ್ರಾಲಯಕ್ಕೆ ಮಂಚಾಲೆ ಎಂಬ ಹೆಸರು ಇತ್ತು

ಮಂಚಾಲಮ್ಮ ದುರ್ಗಾ ದೇವಿಯ ಮತ್ತೊಂದು ಪ್ರತಿರೂಪ. ಈ ಪ್ರದೇಶ ಹಿಂದೆ ಹಿರಣ್ಯ ಕಶ್ಯಪನ ರಾಜ್ಯವಾಗಿತ್ತು ಎಂದು ಇಲ್ಲಿರುವ ಮಂಚಾಲ ಮ್ಮ ದೇವಿ ಹಾಗೂ ಆಕೆಯ ಕುಲದೇವಿ ಆಗಿದ್ದರೂ ಎಂದು ಭಕ್ತ ಪ್ರಹಲ್ಲಾದರೂ ಇಲ್ಲಿ ತಮ್ಮ ಕುಲದೇವತೆಯನ್ನು ಪೂಜಿಸುತ್ತಾ ಬಂದು ನೆಲೆಸಿದ್ದರು ಎಂದು ಉಲ್ಲೇಖಿಸಲಾಗುತ್ತದೆ. ರಾಯರೂ ಕೂಡ ಮಂಚಾಲಮ್ಮನವರ ಅನುಭೂತಿ ಹಾಗೂ ಆಶೀರ್ವಾದವನ್ನು ಪಡೆದ ನಂತರವೇ ಮಂತ್ರಾಲಯದಲ್ಲಿ ಬೃಂದಾವಸ್ದರಾದರು.

ನಂತರ ಇದು ಮಂತ್ರಾಲಯ ಎಂದೇ ಖ್ಯಾತಿಯನ್ನು ಪಡೆದುಕೊಂಡಿತ್ತು. ರಾಯರ ಬೃಂದಾವನದಿಂದ ಸ್ವಲ್ಪ ದೂರದಲ್ಲಿಯೇ ಮಂಚಾಲಮ್ಮ ನವರ ಗುಡಿ ಸ್ಥಾಪಿಸಲಾಗಿದೆ. ಮಂತ್ರಾಲಯಕ್ಕೆ ಆಗಮಿಸುವ ಭಕ್ತಾದಿ ಗಳು ಮೊದಲು ಗ್ರಾಮದೇವತೆ ಮಂಚಾಲಮ್ಮನ ದರ್ಶನ ದರ್ಶನವನ್ನು ಪಡೆದು ಅನಂತರ ಗುರುರಾಯರ ದರ್ಶನವನ್ನು ಪಡೆಯುವುದು ಇಲ್ಲಿನ ವಾಡಿಕೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *