ಈ ದೇವಸ್ಥಾನದಲ್ಲಿ ಹುಂಡಿ ಇಲ್ಲ ಕಾಣಿಕೆ ಹಾಕುವಂತಿಲ್ಲ ವರ್ಷದಲ್ಲಿ ಒಂದೇ ಬಾರಿ ದರ್ಶನ ಕೊಡುವಂತಹ ಕರ್ನಾಟಕದ ದೇವಿ……||
ನಮ್ಮ ಭಾರತ ದೇಶದಲ್ಲಿ ಲಕ್ಷಾಂತರ ದೇವಿ ದೇವಸ್ಥಾನ ಇದೆ. ಕರ್ನಾಟಕ ದಲ್ಲಿ ಸಾವಿರಾರು ಸಂಖ್ಯೆಯಲ್ಲಿ ದೇವಿ ದೇವಸ್ಥಾನಗಳು ಕಂಡುಬರುತ್ತದೆ. ಎಲ್ಲ ದೇವಸ್ಥಾನಗಳಿಗೂ ಕೂಡ ಅದರದೇ ಆದ ವಿಶೇಷತೆ ಮತ್ತು ವೈಶಿಷ್ಟ್ಯತೆ ಇರುತ್ತದೆ. ಆದರೆ ಈ ದಿನ ನಾವು ಹೇಳುತ್ತಿರುವಂತಹ ಕರ್ನಾಟಕದ ಈ ದೇವಿ ತುಂಬಾ ಪವಾಡಗಳಿಂದ ಕೂಡಿದ್ದಾಳೆ ಎಂದೇ ಹೇಳಬಹುದು.
ನೀವು ಊಹೆ ಕೂಡ ಮಾಡಲು ಸಾಧ್ಯವಿಲ್ಲ ಈ ರೀತಿಯ ಅದ್ಭುತವಾದ ದೇವಸ್ಥಾನ ಹಾಗೂ ದೇವಿ ನಮ್ಮ ಕರ್ನಾಟಕದಲ್ಲಿ ಇದೆ ಎಂದು. ಹಾಗಾದರೆ ಅಷ್ಟಕ್ಕೂ ಈ ಒಂದು ದೇವಸ್ಥಾನ ನಮ್ಮ ಕರ್ನಾಟಕದಲ್ಲಿ ಎಲ್ಲಿದೆ ಹಾಗೂ ಇದರ ವಿಳಾಸ ಯಾವುದು? ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.
ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಮಾಡಾಲು ಎಂಬ ಗ್ರಾಮದಲ್ಲಿ ಈ ದೇವಸ್ಥಾನ ಇದೆ. ಈ ದೇವಸ್ಥಾನದ ಹೆಸರು “ಮಾಡಾಲು ಗೌರಮ್ಮ”. ಭಾರತ ದೇಶದ ಅತ್ಯಂತ ನಿಗೂಢ ಹಾಗೂ ಅಪರೂಪ ದೇವಸ್ಥಾನ ಎಂದೇ ಪರಿಗಣಿಸಲಾಗಿದೆ. ಈ ಒಂದು ದೇವಸ್ಥಾನಕ್ಕೆ ಹಲವಾರು ಕಡೆಗಳಿಂದ ಹೋಗಬಹುದು. ಅದರಲ್ಲೂ ಬೆಂಗಳೂರಿನಿಂದ ಈ ದೇವಸ್ಥಾನಕ್ಕೆ 193 ಕಿಲೋಮೀಟರ್ ದೂರದಲ್ಲಿದೆ.
ಹಾಗೂ ಹಾಸನದಿಂದ 76 ಕಿ.ಮೀ, ದಾವಣಗೆರೆಯಿಂದ 139 ಕಿಲೋ ಮೀಟರ್ ಹಾಗೂ ಶಿವಮೊಗ್ಗದಿಂದ 119 ಕಿಲೋಮೀಟರ್ ದೂರವಾಗು ತ್ತದೆ. ಈ ಒಂದು ದೇವಿ ದೇವಸ್ಥಾನಕ್ಕೆ ಹೋಗಲು. ದುಡ್ಡನ್ನು ಅಪೇಕ್ಷೆ ಮಾಡದ ಕರ್ನಾಟಕದ ಏಕೈಕ ದೇವಸ್ಥಾನ ಭಾರತ ದೇಶದ ಎರಡನೇ ದೇವಸ್ಥಾನ. ದೇವಸ್ಥಾನಗಳಲ್ಲಿ ಭಕ್ತಿಯಿಂದ ಕಾಣಿಕೆಯನ್ನು ಹಾಕುವುದು ಸಹಜ ಹಾಗೂ ಇದು ಎಲ್ಲರಿಗೂ ಗೊತ್ತಿರುವಂತಹ ವಿಚಾರ ಆದರೆ ಈ ದೇವಸ್ಥಾನದಲ್ಲಿ ಹಾಗಿಲ್ಲ.
ಕಾಣಿಕೆಯಾಗಲಿ ಅಥವಾ ಬೇರೆ ಯಾವುದೇ ಬೆಲೆ ಬಾಳುವಂತಹ ವಸ್ತು ವನ್ನು ಈ ದೇವಸ್ಥಾನದ ಹುಂಡಿಯಲ್ಲಿ ಹಾಕುವಂತಿಲ್ಲ. ಈ ದೇವಸ್ಥಾನದ ಲ್ಲಿ ನೆಲೆಸಿರುವಂತಹ ದೇವಿಯು ಭಕ್ತಾದಿಗಳ ಕೋರಿಕೆಯನ್ನು ಈಡೇರಿ ಸಲು ಭಕ್ತಾದಿಗಳು ಕೇವಲ ಕರ್ಪೂರವೊಂದನ್ನು ತೆಗೆದುಕೊಂಡು ಹೋದರೆ ಸಾಕು. ದೇವಸ್ಥಾನಕ್ಕೆ ಬರುವಂತಹ ಭಕ್ತಾದಿಗಳು ಕಾಣಿಕೆಯ ಬದಲು ಕರ್ಪೂರವನ್ನು ಅರ್ಪಿಸಬೇಕು. ಮತ್ತೊಂದು ಅಚ್ಚರಿ ವಿಚಾರ ಏನೆಂದರೆ.
ಭಕ್ತಾದಿಗಳಿಗೆ ದೇವಿ ದರ್ಶನ ಕೊಡುವುದು ವರ್ಷದಲ್ಲಿ ಕೇವಲ ಹತ್ತು ದಿನಗಳು ಮಾತ್ರ. ಈ ಹತ್ತು ದಿನಗಳಲ್ಲಿ ಲಕ್ಷಾಂತರ ಭಕ್ತರು ಇಲ್ಲಿಗೆ ಬೇರೆ ಬೇರೆ ರಾಷ್ಟ್ರಗಳಿಂದ ಹಾಗೂ ಬೇರೆ ಬೇರೆ ದೇಶಗಳಿಂದಲೂ ಅಧಿಕ ಸಂಖ್ಯೆಯಲ್ಲಿ ಎಲ್ಲಿಗೆ ಬರುತ್ತಾರೆ. ವಿದೇಶಿ ಭಕ್ತರೊಬ್ಬರು ಈ ದೇವಿಗೆ ಮನಸ್ಸೋತು. ” ದ ಇನ್ಸ್ಪಿರೇಷನ್ ಆಫ್ ಗಾಡೆಸ್ಟ್ ದೇವಿ ಎಂಬ ಪುಸ್ತಕವನ್ನು ಬರೆದಿದ್ದಾರೆ”. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.