ಕುಂಭ ರಾಶಿ ಜುಲೈ ಮಾಸಭವಿಷ್ಯ ಒಳ್ಳೆಯ ವಿಚಾರಗಳು ಈ ತಿಂಗಳು ನಿಮಗೆ ಹತ್ತಿರವಾಗುತ್ತೆ..! - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಕುಂಭ ರಾಶಿ ಜುಲೈ ಮಾಸ ಭವಿಷ್ಯ…..|| ಕುಂಭ ರಾಶಿಗೆ ಒಳ್ಳೆಯ ವಿಚಾರಗಳು ಹತ್ತಿರ ಆಗುತ್ತಿದೆಯಾ……?

ಕುಂಭ ರಾಶಿಯವರಿಗೆ ಈ ಒಂದು ಜುಲೈ ತಿಂಗಳು ಬಹಳ ಅದೃಷ್ಟವನ್ನು ತಂದು ಕೊಡುವಂತಹ ತಿಂಗಳು ಎಂದೇ ಹೇಳಬಹುದು. ಹೌದು ಯಾರಿಲ್ಲ ಕೆಲವೊಂದಷ್ಟು ಕಷ್ಟಗಳನ್ನು ಅನುಭವಿಸಿದ್ದೀರೋ ಅವರೆಲ್ಲರೂ ಕೂಡ ನಿಮ್ಮ ಕಷ್ಟದಿಂದ ಸ್ವಲ್ಪಮಟ್ಟಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ನೆಗೆಟಿವ್ ವಿಚಾರಗಳನ್ನು ಎಲ್ಲವನ್ನು ಸಹ ದೂರ ಮಾಡುತ್ತದೆ.

ಹಾಗೂ ಯಾವುದು ಕೆಟ್ಟದ್ದು ಇಲ್ಲ ಒಳ್ಳೆಯದು ಇಲ್ಲ ಮಧ್ಯಮ ಮಟ್ಟದಲ್ಲಿ ಜೀವನ ಸಾಗಿಸುತ್ತಿರುವಂತಹ ಕುಂಭ ರಾಶಿಯವರಿಗೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗುತ್ತದೆ ಎನ್ನುವಂತಹ ಸೂಚನೆಗಳು ಈ ತಿಂಗಳಿನಲ್ಲಿ ನಿಮಗೆ ಸಿಗುತ್ತದೆ. ಸಾಮಾನ್ಯವಾಗಿ ಹೆಚ್ಚಿನ ತಿಂಗಳು ಗಳು ನಿಮಗೆ ಮಿಶ್ರಫಲವನ್ನೇ ಕೊಡುತ್ತವೆ. ಆದರೆ ಜುಲೈ ತಿಂಗಳು ಬಹಳ ವಿಭಿನ್ನ ಎಂದೇ ಹೇಳಬಹುದು.

ಅದರಲ್ಲೂ ಬೇಕಾಗಿರುವಂತದ್ದು ದೂರ ಇರುವುದು, ದೂರ ಇರಬೇಕಾಗಿ ರುವಂತದ್ದು ಹತ್ತಿರ ಇರುವುದು. ಈ ಒಂದು ಪರಿಸ್ಥಿತಿ ಕುಂಭ ರಾಶಿಯ ವರಿಗೆ ಹೆಚ್ಚು ಖುಷಿಯನ್ನು ತಂದು ಕೊಡುತ್ತದೆ ಎಂದು ಹೇಳಬಹುದು. ನಿಮಗೆ ಜುಲೈ ತಿಂಗಳು ಆರಂಭದ ದಿನಗಳಲ್ಲಿ ಸ್ವಲ್ಪಮಟ್ಟಿಗೆ ಮಿಶ್ರಫಲ ಗಳನ್ನು ಕೊಡುವಂತಹ ವಾರಗಳು ಎಂದೇ ಹೇಳಬಹುದು. ಅದರಲ್ಲೂ ನೀವು ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಉತ್ತಮವಾದ ಯಶಸ್ಸು ಸಿಗುತ್ತದೆ.

ಕೆಲಸದ ಬಗ್ಗೆ ಸ್ವಲ್ಪ ಒತ್ತಡ ಹೆಚ್ಚಾದರೂ ನಿಮಗೆ ಆ ಕೆಲಸದಿಂದ ಉತ್ತಮವಾದ ಯಶಸ್ಸು ಪ್ರಗತಿ ಎನ್ನುವುದು ಸಿಗುತ್ತದೆ. ವ್ಯವಹಾರಸ್ತರಿಗೆ ಯಾವುದಾದರೂ ಒಂದು ಮೂಲದಿಂದ ಹಣಕಾಸಿನ ಒಳ ಹರಿವು ಎನ್ನುವುದು ಹೆಚ್ಚಾಗುತ್ತದೆ. ತೃತೀಯದಲ್ಲಿ ನಿಮಗೆ ರಾಹು ಇದ್ದಾನೆ ಇದರಿಂದ ವ್ಯಾಪಾರ ವ್ಯವಹಾರ ಮಾಡುವವರಿಗೆ ಅಷ್ಟೇನೂ ದೊಡ್ಡ ಮಟ್ಟದ ಸಮಸ್ಯೆ ಉಂಟಾಗುವುದಿಲ್ಲ. ಜನ್ಮ ಶನಿ ನಡೆಯುತ್ತಿದ್ದರೂ ಕೂಡ ಏರುಪೇರನ್ನು ಕಾಣಬಹುದು.

ಹಾಗೂ ಕೆಲವೊಮ್ಮೆ ಕೈಗೆ ಬಂದಂತಹ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಹ ಪರಿಸ್ಥಿತಿಗಳು ಸಹ ಬರಬಹುದು. ಆಗ ರಾಹು ನಿಮಗೆ ಅವೆಲ್ಲವನ್ನು ಸಹ ಸರಿಪಡಿಸುತ್ತಾನೆ. ಒಂದು ರೀತಿಯ ಹೋರಾಟದ ಜೀವನ ಎಂದು ಹೇಳಿದರು ತಪ್ಪಾಗುವುದಿಲ್ಲ. ಆದರೆ ನಿಮಗೆ ಹಣಕಾಸಿನ ಸಮಸ್ಯೆ ಏನು ಬರುವುದಿಲ್ಲ. ಮೊದಲೇ ಹೇಳಿದಂತೆ ಆರಂಭದಲ್ಲಿ ನಿಮಗೆ ಸ್ವಲ್ಪ ತೊಂದರೆಗಳು ಎಂದು ಹೇಳಿದ್ದೆವು. ಆದರೆ ಕಷ್ಟಪಟ್ಟು ಕೆಲಸ ಮಾಡಿದರೆ ಅವೆಲ್ಲವೂ ಸಹ ದೂರವಾಗುತ್ತದೆ.

ಏಕೆಂದರೆ ಆರನೇ ಮನೆಯಲ್ಲಿರುವಂತಹ ಬುಧ ನಿಮ್ಮ ಯಶಸ್ವಿಗೆ ದಾರಿದೀಪವನ್ನು ತೋರಿಸುತ್ತಾನೆ. ಆದರೆ ಸಮಸ್ಯೆ ಇರುವಂಥದ್ದು ನಿಮ್ಮ ಕುಟುಂಬದಲ್ಲಿ ಏಕೆ ಎಂದರೆ ಶುಕ್ರ ಮತ್ತು ಕುಜ ಒಟ್ಟಿಗೆ ಇರುವಂತದ್ದು ಇದರಿಂದ ಜುಲೈ ತಿಂಗಳಲ್ಲಿ ಸ್ವಲ್ಪಮಟ್ಟಿಗೆ ಒತ್ತಡ ಎನ್ನುವುದು ಹೆಚ್ಚಾಗಿರುತ್ತದೆ. ಈ ಸಮಯದಲ್ಲಿ ತಂದೆ ತಾಯಿಗಳಿಗೂ ಮಕ್ಕಳಿಗೆ ಸಂಘರ್ಷ ಉಂಟಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *