ಹಳೆಯ ಬಾಟಲ್ ಇದ್ರೆ ಸಾಕು ಪಾತ್ರೆ ತೊಳೆಯುವ ಕೆಲಸ ನಿಮಿಷಗಳಲ್ಲಿ ಮುಗಿಯುತ್ತೆ

ಹಳೆಯ ಬಾಟಲ್ ಇದ್ದರೆ ಸಾಕು ಪಾತ್ರೆ ತೊಳೆಯುವ ಕೆಲಸ ನಿಮಿಷದಲ್ಲಿ ಮುಗಿಯುತ್ತೆ…….||

WhatsApp Group Join Now
Telegram Group Join Now

ಪ್ರತಿಯೊಬ್ಬರೂ ಕೂಡ ಪಾತ್ರೆಯನ್ನು ತೊಳೆಯುವುದಕ್ಕೆ ಹಲವಾರು ರೀತಿಯ ಕೆಮಿಕಲ್ ಆಯಿಲ್ ಗಳನ್ನು ಹಾಗೂ ಅದನ್ನು ತೊಳೆಯುವು ದಕ್ಕೆ ಕೆಲವೊಂದು ಬ್ರಷ್ ಗಳನ್ನು ಉಪಯೋಗಿಸುತ್ತಾರೆ. ಆದರೆ ಆ ಬ್ರಷ್ ಗಳು ಹಳೆಯದಾಗುತ್ತಾ ಅದರಿಂದ ನಾವು ಪಾತ್ರ ತೊಳೆದರೆ ನಮ್ಮ ಕೈಗಳು ಗಾಯ ಆಗುತ್ತಿರುತ್ತದೆ ಅದರಲ್ಲೂ ಸ್ಟೀಲ್ ಜುಂಗುಗಳು

ನಮ್ಮ ಕೈಯನ್ನು ಗಾಯ ಮಾಡುತ್ತಿರುತ್ತದೆ. ಆದ್ದರಿಂದ ಅದನ್ನು ನೇರವಾಗಿ ಉಪಯೋಗಿಸಲು ಸಾಧ್ಯವಾಗುವುದಿಲ್ಲ ಆದರೆ ಈಗ ನಾವು ಹೇಳುವಂತಹ ಈ ಒಂದು ವಿಧಾನದಲ್ಲಿ ನೀವು ಇದನ್ನು ಉಪಯೋಗಿಸಿ ದರೆ ನಿಮ್ಮ ಕೈಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಹಾಗೂ ಅದು ಹೆಚ್ಚು ದಿನಗಳ ಕಾಲ ಬಾಳಿಕೆಗೆ ಬರುತ್ತದೆ ಎಂದು ಹೇಳಬಹುದು. ಹಾಗಾದರೆ ಅದನ್ನು ಹೇಗೆ ಉಪಯೋಗಿಸಬೇಕು ಎಂದು ಈ ಕೆಳಗೆ ತಿಳಿಯೋಣ.

ಯಾವುದಾದರೂ ಹಳೆ ಪ್ಲಾಸ್ಟಿಕ್ ಬಾಟಲ್ ಇದ್ದರೆ ಮೇಲ್ಭಾಗವನ್ನು ಅಂದರೆ ಕ್ಯಾಪ್ ಇರುವಂತಹ ಮೇಲ್ಭಾಗವನ್ನು ಕತ್ತರಿಸಿ ತೆಗೆದುಕೊಳ್ಳಬೇಕು ಆನಂತರ ಸ್ಟೀಲ್ ಜುಂಗುವಿಗೆ ದಾರವನ್ನು ಹಾಕಿ ಅದನ್ನು ಕ್ಯಾಪ್ ಭಾಗ ದಿಂದ ದಾರ ಎಳೆದು ಕಟ್ಟಿಕೊಳ್ಳಬೇಕು ನಂತರ ಕ್ಯಾಪ್ ಮೇಲ್ಭಾಗವನ್ನು ಹಿಡಿದುಕೊಂಡು ಆ ಸ್ಟೀಲ್ ಜುಂಗಿನಲ್ಲಿ ಪಾತ್ರೆ ತೊಳೆಯುವುದರಿಂದ ನಿಮ್ಮ ಕೈಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ.

See also  ಹದ್ದು ಮೀರಿದ ಕಲ್ಪನೆ..ಪುನರ್ಜನ್ಮಕ್ಕಾಗಿ ಅದು ಅಷ್ಟು ಯಾತನೆ ಅನುಭವಿಸುತ್ತಾ ? ಇದು ಗರುಡನ ಜಾತಿಯ ಮಾಹಿತಿ

ಹಾಗೂ ಅದನ್ನು ತೊಳೆದು ಒಂದು ಕಡೆ ನೇತು ಹಾಕುವುದರಿಂದ ಅದು ಹೆಚ್ಚು ದಿನಗಳ ಕಾಲ ಬಾಳಿಕೆಗೆ ಬರುತ್ತದೆ ಎಂದು ಹೇಳಬಹುದು. ಹೆಚ್ಚಿನ ಜನ ಅದನ್ನು ಪಾತ್ರೆ ತೊಳೆದು ಅದನ್ನು ಸೋಪಿನ ಒಳಗಡೆಯೇ ಇಡುತ್ತಾರೆ ಅದು ಸದಾ ಕಾಲ ಸೋಪಿನಲ್ಲಿಯೇ ಇರುವುದರಿಂದ ಹೆಚ್ಚು ನೀರಿನಂಶದಲ್ಲಿಯೇ ಇರುವುದರಿಂದ ಅದು ಬೇಗನೆ ಹಾಳಾಗುತ್ತದೆ. ಹಾಗೂ ಅದು ಸಣ್ಣ ಸಣ್ಣದಾಗಿ ಬೀಳುತ್ತಿರುತ್ತದೆ.

ಆದ್ದರಿಂದ ಈ ಒಂದು ವಿಧಾನವನ್ನು ಅನುಸರಿಸುವುದರಿಂದ ಅದು ಹೆಚ್ಚು ದಿನಗಳ ಕಾಲ ಬಾಳಿಕೆಗೆ ಬರುತ್ತದೆ ಎಂದು ಹೇಳಬಹುದು. ಇನ್ನು ಬಾತ್ರೂಮ್ ನಲ್ಲಿರುವಂತಹ ಟೈಲ್ಸ್ ಗಳನ್ನು ತೊಳೆಯುವುದಕ್ಕೆ ಮಾರು ಕಟ್ಟೆಗಳಲ್ಲಿ ಸಿಗುವಂತಹ ಕೆಲವೊಂದು ಬ್ರಷ್ ಗಳನ್ನು ತಂದು ನಾವು ಟೈಲ್ಸ್ ಕ್ಲೀನ್ ಮಾಡುತ್ತೇವೆ. ಆದರೆ ಪಾತ್ರೆ ತೊಳೆಯುವಂತಹ ಹಸಿರು ಸ್ಕ್ರಬ್ಬರ್ ಅನ್ನು ನೀವು ಬಳಸಿಕೊಂಡು ನೀವೇ ನಿಮ್ಮ ಮನೆಯಲ್ಲಿ ಟೈಲ್ಸ್ ತೊಳೆಯುವಂತಹ ಬ್ರಷ್ ತಯಾರಿಸಿಕೊಳ್ಳಬಹುದು.

ಹೌದು ಮೊದಲೇ ಹೇಳಿದಂತೆ ಒಂದು ಪ್ಲಾಸ್ಟಿಕ್ ಬಾಟಲ್ ತೆಗೆದು ಕೊಂಡು ಅದರ ಮೇಲ್ಭಾಗವನ್ನು ಕ್ಯಾಪ್ ಇರುವಂತಹ ಮೇಲ್ಭಾಗವನ್ನು ಕತ್ತರಿಸಿಕೊಳ್ಳಬೇಕು ಅದನ್ನು ಬಿಸಿ ಮಾಡಿ ಗ್ರೀನ್ ಸ್ಕ್ರಬರ್ ಮೇಲೆ ಅಂಟಿಸಿಕೊಳ್ಳಬೇಕು ಈ ರೀತಿ ಮಾಡುವುದರಿಂದ ಗ್ರೀನ್ ಸ್ಕ್ರಬರ್ ಆ ಬಾಟಲ್ ಗೆ ಅಂಟಿಕೊಳ್ಳುತ್ತದೆ ಇದನ್ನು ಉಪಯೋಗಿಸಿ ಟೈಲ್ಸ್ ಎಲ್ಲವನ್ನು ಸುಲಭವಾಗಿ ಸ್ವಚ್ಛ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಇಲ್ಲಿದೆ ನೋಡಿ ಅತಿ ಸುಲಭವಾದ ಅಡುಗೆ ಸೀಕ್ರೆಟ್ ಗಳು..ತೆಂಗಿನಕಾಯಿಯ ಅರ್ಧಕ್ಕೆ ಸೀಳಲು,ಕಲಬೆರಕೆ ಕಂಡುಹಿಡಿಯಲು..

[irp]


crossorigin="anonymous">