ಇತಿಹಾಸದಲ್ಲೇ ನಡೆದ ಅತ್ಯಂತ ಭಯಂಕರವಾದ ಘಟನೆ..! ಸಮುದ್ರದ ಮೇಲೆ ವಿಮಾನದ ಇಂಧನ ಖಾಲಿ ||
ಏರ್ ಟ್ರಾನ್ಸ್ಲಟ್ ಫ್ಲೈಟ್ 236 ಎಂಬುವ ವಿಮಾನ ಟೊರೊಂಟೊ ಇಂದ ಲಿಸ್ಬೋ ಕಡೆಗೆ ಹೋಗುತ್ತಾ ಇತ್ತು. ಅದು ಮಧ್ಯರಾತ್ರಿಯ ಸಮಯ ಅಟ್ಲಾಂಟಿಕ್ ಸಮುದ್ರದ ಮಧ್ಯದಲ್ಲಿ 39,000 ಅಡಿ ಮೇಲೆ ಆ ವಿಮಾನ ಸಾಗುತ್ತಾ ಇತ್ತು. ಎಲ್ಲವೂ ಸರಿಯಾಗಿತ್ತು. ಸಾಮಾನ್ಯ ದಿನಗಳಲ್ಲಿ ಯಾವ ರೀತಿ ಹಾರುತ್ತಾ ಇತ್ತೋ ಅದೇ ರೀತಿ ಹೋಗ್ತಾ ಇತ್ತು.
ಎಲ್ಲವೂ ಸಾಮಾನ್ಯವಾಗಿ ಇತ್ತು. ಅಟ್ಲಾಂಟಿಕ್ ಸಮುದ್ರ ಎಂದರೆ ಅದು ತುಂಬಾನೇ ದೊಡ್ಡವಾದ ಸಮುದ್ರ ಅದನ್ನು ದಾಟಿ ಹೋಗಲು ತುಂಬಾ ಸಮಯ ಹಿಡಿಯುತ್ತದೆ. ಹೀಗಿರುವಾಗ ಪೈಲೆಟ್ ಗೆ ವಿಮಾನದಲ್ಲಿ ಇಂಧನ ಖಾಲಿ ಆಗುತ್ತಾ ಬರುತ್ತಾ ಇದೆ ಎಂಬ ವಿಚಾರ ಗೊತ್ತಾಗುತ್ತದೆ. ಅಟ್ಲಾಂಟಿಕ್ ಸಮುದ್ರದ ಮಧ್ಯಭಾಗದಲ್ಲಿ ಇಂಧನ ಕಾಲಿಯಾಯಿತು ಎಂದರೆ ಸಾವು
ಬಿಟ್ಟು ಯಾವುದೇ ಬೇರೆ ಆಯ್ಕೆ ಇಲ್ಲ. ಅಷ್ಟಕ್ಕೂ ಅವತ್ತು ಏನಾಯ್ತು ಇಂಧನ ಕಾಲಿಯಾದ ವಿಚಾರ ಯಾಕೆ ಮೊದಲೇ ಗೊತ್ತಾಗಲಿಲ್ಲ. ಈ ವಿಮಾನದ ಕಥೆ ಮುಂದೇನಾಯ್ತು ಎಲ್ಲವನ್ನು ಈ ಕೆಳಗಿನಂತೆ ತಿಳಿಯೋಣ. ಅದು 2001 ಆಗಸ್ಟ್ 23 ಟೊರೊಂಟೊ ದ ವಿಮಾನ ನಿಲ್ದಾಣದಿಂದ ಏರ್ ಟ್ರಾನ್ಸ್ಲಟ್ ಏರ್ ಬಸ್ A330 ವನ್ನು ಟೊರೆಂಟೊಯಿಂದ ನಿಮ್ಹಾನ್ಸ್ ಗೆ ಪ್ರಯಾಣ ಬೆಳೆಸಲು ಪ್ರಿಪೇರ್ ಮಾಡುತ್ತಾ ಇದ್ದರು.
ಅದು 7 ಗಂಟೆಯ ನಾನ್ ಸ್ಟಾಪ್ ಪ್ರಯಾಣ. ಹೀಗಾಗಿ 48 ಮೆಟ್ರಿಕ್ ಟನ್ ಫಿಯಲ್ ಅನ್ನು ಹಾಕಲಾಗುತ್ತದೆ. ಎಲ್ಲಾ ಪ್ರಿಪರೇಷನ್ ಆದ ನಂತರ ಬೋರ್ಡಿಂಗ್ ಶುರುವಾಗುತ್ತದೆ. ಸಮಯ ರಾತ್ರಿ 9:00 ಆಗಿತ್ತು. ಈ ವಿಮಾನದಲ್ಲಿ 293 ಪ್ರಯಾಣಿಕರು ಇದ್ದರು ರಾಬರ್ಟ್ ಪಿಚೆ ವಿಮಾನದ ಪೈಲೆಟ್ ಆಗಿದ್ದರು. ಇವರಿಗೆ 13,000 ಗಂಟೆಗಳ ಫ್ಲೈಟ್ ಎಕ್ಸ್ಪೀರಿಯನ್ಸ್ ಇತ್ತು.
ನಿಮಗೆ ಗೊತ್ತಿರಲಿ ವಿಮಾನದಲ್ಲಿ ಎಕ್ಸ್ಪೀರಿಯನ್ಸ್ ಅನ್ನು ಗಂಟೆಗಳ ಲೆಕ್ಕದಲ್ಲಿ ಹೇಳುತ್ತಾರೆ. ಇನ್ನು ಕೋ ಪೈಲೆಟ್ ಡರ್ಕಿಗೂ ಕೂಡ 5000 ಗಂಟೆಗಳ ಎಕ್ಸ್ಪೀರಿಯನ್ಸ್ ಇತ್ತು. ಅದರಲ್ಲೂ ಇವರು ಇದೇ ವಿಮಾನ ದಲ್ಲಿ ಹೆಚ್ಚು ಕೆಲಸ ಮಾಡಿದರು. ವಿಮಾನ ಕೂಡ ತುಂಬಾನೇ ಹೊಸದು. ಆದರೆ ಈ ವಿಮಾನವನ್ನು ಫೀಡ್ ಮಾಡಿ ಎರಡು ವರ್ಷ ಆಗಿತ್ತು.
ವಿಮಾನ ಹಾರಟ ಶುರು ಮಾಡುವುದಕ್ಕಿಂತ ಮುಂಚೆ ಎಲ್ಲಾ ವಿಧಾನದಲ್ಲೂ ಕೂಡ ಚೆಕ್ಕಿಂಗ್ ನಡೆಯುತ್ತದೆ. ಈ ವಿಮಾನದಲ್ಲಿಯೂ ಕೂಡ ಚೆಕ್ಕಿಂಗ್ ಮಾಡಿದ ನಂತರವೇ ಹಾರಾಟ ಶುರುವಾಗಿದ್ದು. ನಾವು ಮೊದಲೇ ಹೇಳಿದಂತೆ ಇದನ್ನು ಲಾಂಗ್ ಫ್ಲೈಟ್ ಎಂದು ಹೇಳುತ್ತಾರೆ. ಲಾಂಗ್ ಫ್ಲೈಟ್ ಅಲ್ಲಿ ಪೈಲೆಟ್ ಗಳಿಗೆ ಹೆಚ್ಚು ಕೆಲಸ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.