ರಿಯಲ್ ಭೂ ಚಕ್ರ ಗೆಡ್ಡೆ ಹೇಗಿರುತ್ತೆ ಗೊತ್ತಾ? ಭೂ ಚಕ್ರ ಅಂತ ನೀವು ತಿಂದದ್ದು ಏನು ಗೊತ್ತಾ…….?
ನಮ್ಮ ಸಮಾಜ ಎಷ್ಟೇ ಮುಂದುವರೆದರೂ ಕೂಡ ಜನ ಬಣ್ಣದ ಮಾತುಗಳಿಗೆ ನಾಟಕದ ನುಡಿಗಳಿಗೆ ಇನ್ನೂ ಕೂಡ ಮರುಳಾಗುತ್ತಲೇ ಇದ್ದಾರೆ. ಜನರ ಈ ವಿಧವಾದ ಮನೋಭಾವವನ್ನು ಕೆಲವು ಜನ ಖದೀಮ ಕಳ್ಳರು ತಮ್ಮ ಬಂಡವಾಳವನ್ನಾಗಿ ಮಾಡಿಕೊಂಡು ಏಮಾರಿಸುತ್ತಿದ್ದಾರೆ.
ಈ ರೀತಿ ಜನರ ಮೂರ್ಖತನವನ್ನು ಆದರಿಸಿ ವರದಿಯಾಗುತ್ತಿರು ವಂತಹ ಹೊಸ ಹೊಸ ಬಗೆಯ ಸ್ಕ್ಯಾಮ್ ಗಳಲ್ಲಿ ಭೂ ಚಕ್ರ ಗೆಡ್ಡೆ ಮಾರಾಟದ ಜಾಲ ಕೂಡ ಒಂದು. ಈ ಬಗ್ಗೆ ಇತ್ತೀಚಿಗೆ ನೀವು ಕೂಡ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಇತರೆ ಸುದ್ದಿ ಮಾಧ್ಯಮಗಳ ವರದಿಗಳಲ್ಲಿ ಕೇಳಿರಬಹುದು. ಈ ಸ್ಕ್ಯಾಮ್ ಇತ್ತೀಚಿಗೆ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗುತ್ತಿದೆ.
ಭೂ ಚಕ್ರ ಗೆಡ್ಡೆ ಎಂದು ರಸ್ತೆ ಬದಿಗಳಲ್ಲಿ ಬೆಳೆಯುವಂತಹ ಕತ್ತಳೆ ಗಿಡದ ಕಾಂಡವನ್ನು ಏಮಾರಿಸಿ ಮಾರಾಟ ಮಾಡುತ್ತಿದ್ದಂತಹ ಜಾಲವೊಂದು ಬಹಳ ಇತ್ತೀಚಿಗೆ ರಾಜ್ಯದ ನಾನಾ ಕಡೆ ಹೆಚ್ಚುತ್ತಲೆ ಇದ್ದಾರೆ. ಇವರು ಕತ್ತಳೆ ಗಿಡಕ್ಕೆ ಯಾವುದೋ ಒಂದು ರಾಸಾಯನಿಕ ಪದಾರ್ಥವನ್ನು ಹಾಕಿ ಮಾಡಿ ಅದು ಭೂ ಚಕ್ರ ಗೆಡ್ಡೆ ಹಾಗೆ ಕಾಣುವಂತೆ ಮಾಡಿ ಅದನ್ನು ಮಾರಾಟ ಮಾಡುತ್ತಾರೆ.
ಅದಕ್ಕೆ ನಿಂಬೆ ರಸವನ್ನು ಹಾಕಿ ಸಕ್ಕರೆಯನ್ನು ಹಾಕಿ ತೆಳುವಾಗಿ ಕತ್ತರಿಸಿ ಅದರ ಪೇಪರ್ ಲೇಯರ್ ಅನ್ನು ಒಂದು ಪೀಸ್‌ಗೆ ತಲ 10 ರೂಪಾಯಿ ಅಂತೆ ಮಾರಾಟ ಮಾಡುತ್ತಿದ್ದಾರೆ. ಅದು ರುಚಿ ಇರುವುದರಿಂದ ಜನ ಅದರ ಸತ್ಯಾಸತ್ಯತೆಯನ್ನು ಒಂದು ಚೂರು ಕೂಡ ಯೋಚನೆ ಮಾಡದೆ ಅದನ್ನು ಚಪ್ಪರಿಸಿಕೊಂಡು ತಿನ್ನುತ್ತಾರೆ. ಇಂತಹ ಮೋಸ ಯಾಕಾಗಿ ನಡೆಯುತ್ತಿದೆ. ಈ ಕತ್ತಳೆ ಗಿಡದ ಗೆಡ್ಡೆಗೂ ಹಾಗೂ
ಭೂ ಚಕ್ರ ಗಿಡದ ಗೆಡ್ಡೆಗೂ ವ್ಯತ್ಯಾಸ ಏನು? ಇವುಗಳನ್ನು ಸೇವಿಸುವುದು ಯೋಗ್ಯನ? ಇವುಗಳನ್ನು ಎಲ್ಲಿ ಬೆಳೆಯುತ್ತಾರೆ ಎನ್ನುವ ಮುಂತಾದ ಸಂಗತಿಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿಯೋಣ. ಮೊದಲನೆಯ ದಾಗಿ ಈ ವಂಚನೆಗಳು ನಡೆಯುವುದಕ್ಕೆ ಮುಖ್ಯ ಕಾರಣ ಏನು ಎಂದರೆ ಈ ಗೆಡ್ಡೆಗಳ ಬಗ್ಗೆ ಬಹುತೇಕ ಜನರಲ್ಲಿ ಇರುವಂತಹ ಮಾಹಿತಿ ಹಾಗೂ ಸೂಕ್ತ ಜ್ಞಾನದ ಕೊರತೆ.
ಜನ ಬಜಾರ್ ನಲ್ಲಿ ಯಾವುದೇ ಒಂದು ವಸ್ತು ಬರಲಿ ಅದು ಸೇವಿಸು ವಂತಹ ಪದಾರ್ಥವಾಗಿರಬಹುದು ಅಥವಾ ಬೇರೆ ಯಾವುದೇ ಬಳಕೆ ಯ ವಸ್ತುವಾಗಿರಬಹುದು ಜನ ಅದರ ಖರೀದಿಗೆ ತಕ್ಷಣವೇ ಮುಂದಾಗು ತ್ತಾರೆ. ಅನೇಕ ಜನರಿಗೆ ಈ ಭೂ ಚಕ್ರ ಗಡ್ಡೆ ಏನು ಎಂದು ಕೂಡ ತಿಳಿದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.