ನವಗ್ರಹಗಳಿಗೆ ಅಪ್ಪಿತಪ್ಪಿಯೂ ತಪ್ಪಾಗಿ ಪ್ರದಕ್ಷಿಣೆ ಹಾಕಬೇಡಿ ಎಚ್ಚರ..! ನವಗ್ರಹಗಳ ಕೃಪೆ ಇಲ್ಲದಿದ್ದರೆ ತಿಪರ್ಲಾಗ ಹಾಕಿದ್ರು ಕೂಡ ಒಳ್ಳೆದಾಗೊಲ್ಲ

ನವಗ್ರಹಗಳ ಬಗ್ಗೆ ತಿಳಿದಿರಲೇಬೇಕಾದ ಕೆಲವೊಂದಷ್ಟು ಮಾಹಿತಿಗಳು…..!!

WhatsApp Group Join Now
Telegram Group Join Now

ಪ್ರತಿಯೊಬ್ಬರೂ ಕೂಡ ನವಗ್ರಹಗಳನ್ನು ಆರಾಧಿಸಲೇಬೇಕು ಏಕೆ ಎಂದರೆ ನಮ್ಮ ಭೂಮಿ ಇರುವುದು ಈ ನವಗ್ರಹಗಳಿಂದಲೇ ಎಂದೇ ನಂಬಲಾಗಿದೆ. ಆದ್ದರಿಂದ ನವಗ್ರಹಗಳಿಗೆ ಸಂಬಂಧಿಸಿದಂತಹ ಕೆಲವೊಂದು ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ ಹಾಗಾದರೆ ಈ ದಿನ ನವಗ್ರಹಗಳಿಗೆ ಸಂಬಂಧಿಸಿದ ಕೆಲವು ಮಾಹಿತಿಗಳನ್ನು ತಿಳಿದುಕೊಳ್ಳೋಣ.

ನವಗ್ರಹಗಳು ಯಾವುದು ಹಾಗೂ ಅದು ಯಾವ ಧಾನ್ಯಗಳನ್ನು ಸೂಚಿಸುತ್ತದೆ ಎಂದರೆ ಒಳಗೊಂಡಿರುತ್ತದೆ ಎನ್ನುವುದನ್ನು ಮೊದಲು ತಿಳಿಯೋಣ. ಮೊದಲನೆಯದಾಗಿ ಸೂರ್ಯ ಹೌದು ಗೋಧಿಯನ್ನು ನಾವು ಸೂರ್ಯನಿಗೆ ಹೋಲಿಸಲಾಗುತ್ತದೆ. ಇನ್ನು ಎರಡನೆಯದಾಗಿ ಚಂದ್ರ, ಚಂದ್ರನನ್ನು ಅಕ್ಕಿ ಪ್ರತಿನಿಧಿಸುತ್ತದೆ. ಇನ್ನು ಮಂಗಳ ಗ್ರಹ ಬೆಲ್ಲ ಸಹಿತ ತೊಗರಿ ಬೆಳೆಯನ್ನು ಪ್ರತಿನಿಧಿಸುತ್ತದೆ. ಬುಧ ಗೃಹವು ಹೆಸರು ಬೇಳೆಯನ್ನು ಪ್ರತಿನಿಧಿಸುತ್ತದೆ.

ಗುರು ಗ್ರಹವು ಕಡಲೆಯನ್ನು ಪ್ರತಿನಿಧಿಸುತ್ತದೆ ಹಾಗೂ ಶುಕ್ರನು ಅವರೆಕಾಳನ್ನು ಪ್ರತಿನಿಧಿಸುತ್ತದೆ. ಶನಿ ಗ್ರಹವು ಎಳ್ಳನ್ನು ಪ್ರತಿನಿಧಿಸುತ್ತದೆ, ಹೌದು, ಶನಿ ಗ್ರಹದ ದೋಷವನ್ನು ದೂರ ಮಾಡಿಕೊಳ್ಳಬೇಕು ಎಂದರೆ ಪ್ರತಿಯೊಬ್ಬರೂ ಕೂಡ ಎಳ್ಳನ್ನು ಕಪ್ಪು ಬಟ್ಟೆಯಲ್ಲಿ ಹಾಕಿ ಅದನ್ನು ಶನಿವಾರ ಶನಿ ದೇವರ ದೇವಸ್ಥಾನದಲ್ಲಿ ಹಚ್ಚುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳು ಕೂಡ ದೂರವಾಗುತ್ತದೆ. ಹಾಗೂ ಜೀವನದಲ್ಲಿ ಎದುರಾಗುವಂತಹ ಎಲ್ಲಾ ಸಂಕಷ್ಟಗಳು ಸಹ ದೂರವಾಗುತ್ತದೆ.

ರಾಹು ಗ್ರಹ ಉದ್ದನ್ನು ಪ್ರತಿನಿಧಿಸುತ್ತದೆ. ಇನ್ನು ಕೊನೆಯದಾಗಿ ಕೇತು ಗ್ರಹವು ಹುರುಳಿಕಾಳನ್ನು ಪ್ರತಿನಿಧಿಸುತ್ತದೆ ಹೀಗೆ ಯಾರೆಲ್ಲ ಯಾವ ಕೆಲವು ಗ್ರಹಗಳಿಂದ ದೋಷವನ್ನು ಹೊಂದಿರುತ್ತಾರೆ ಅಂತವರು ಆ ಗ್ರಹಕ್ಕೆ ಪ್ರತಿನಿಧಿಸುವಂತಹ ಕೆಲವೊಂದು ಸಮಸ್ಯೆಗಳನ್ನು ಸಹ ದೂರ ಮಾಡಿಕೊಳ್ಳಬಹುದು ಎಂದು ಶಾಸ್ತ್ರ ಪುರಾಣಗಳು ತಿಳಿಸುತ್ತದೆ. ಹಾಗೂ ಈ ಒಂದು ಪದ್ಧತಿ ಈಗಲೂ ಕೂಡ ಜಾರಿಯಲ್ಲಿ ಇದೆ ಎಂದು ಹೇಳಬಹುದು. ಇನ್ನು ನವಗ್ರಹ ವಸ್ತ್ರದ ಬಣ್ಣಗಳು ಯಾವುದು ಎಂದು ಈ ಕೆಳಗೆ ತಿಳಿಯೋಣ.

ಸೂರ್ಯ – ಕೆಂಪು, ಚಂದ್ರ – ಬಿಳಿ, ಮಂಗಳ – ಕೆಂಪು, ಬುಧ – ಹಸಿರು, ಗುರು – ಹಳದಿ, ಶುಕ್ರ – ಬಿಳಿ, ಶನಿ – ನೀಲಿ, ರಾಹು – ಕಪ್ಪು, ಕೇತು – ಚಿತ್ರ ಹೀಗೆ ಪ್ರತಿಯೊಂದು ಗ್ರಹಗಳು ಕೂಡ ಒಂದು ಬಣ್ಣವನ್ನು ಹೊಂದಿರುತ್ತದೆ. ಇನ್ನು ನವಗ್ರಹ ರತ್ನಗಳು ಯಾವುದು ಎಂದರೆ. ಸೂರ್ಯ – ಮಾಣಿಕ್ಯ, ಚಂದ್ರ – ಮುತ್ತು, ಮಂಗಳ – ಹವಳ, ಬುಧ – ಪಚ್ಚೆ, ಗುರು – ಕನಕ ಪುಷ್ಯರಾಗ, ಶುಕ್ರ – ವಜ್ರ, ಶನಿ – ನೀಲ, ರಾಹು – ಗೋಮೇಧಿಕ, ಕೇತು – ವೈಡೂರ್ಯ. ನವಗ್ರಹ ಪತ್ರೆಗಳು ಯಾವುದೆಂದರೆ, ಸೂರ್ಯ – ಎಕ್ಕದ ಗಿಡ, ಚಂದ್ರ – ಮುತ್ತುಗದ ಮರ, ಮಂಗಳ – ಬೈರೆ, ಬುಧ – ಉತ್ತರಾಣಿ, ಗುರು – ಅಶ್ವತ್ಥ (ಅರಳಿ) , ಶುಕ್ರ – ಅತ್ತಿ, ಶನಿ – ಬನ್ನಿ, ರಾಹು – ಗರಿಕೆ, ಕೇತು – ದರ್ಬೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]