ಬ್ರಹ್ಮ ಮೂಹೂರ್ತದಲ್ಲಿ ಎದ್ದೇಳುವುದರಿಂದ ಆಗುವ ಉಪಯೋಗಗಳು ಏನ್ ಗೊತ್ತಾ ? ನಿಮ್ಮ ತಲೆ ತಿರುಗಿಸುವ ಮುಂಜಾನೆಯ ರಹಸ್ಯ

ಬ್ರಹ್ಮ ಮುಹೂರ್ತದಲ್ಲಿ ಎದ್ದೇಳುವುದರಿಂದ ಆಗುವ ಉಪಯೋಗಗಳು…..!!

WhatsApp Group Join Now
Telegram Group Join Now

ಬ್ರಹ್ಮ ಮುಹೂರ್ತವನ್ನು ಅಮೃತಕಾಲ ಎಂದು ಕರೆಯುತ್ತಾರೆ. ಅಮೃತ ಕಾಲ ಸೂರ್ಯೋದಯಕ್ಕೆ 90 ನಿಮಿಷಗಳ ಮುಂಚೆ ಬರುತ್ತದೆ. ಬ್ರಹ್ಮ ಮುಹೂರ್ತದಲ್ಲಿ ನಿದ್ದೆಯಿಂದ ಎದ್ದು ಕೆಲಸ ಮಾಡುವವರ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ ಹಾಗೂ ಅವರು ಜಾಸ್ತಿ ಕಾಲ ಜೀವಿಸುತ್ತಾರೆ. ಆಯುರ್ವೇದ ಶಾಸ್ತ್ರದಲ್ಲಿ ಇದನ್ನು ಹೇಳಿದ್ದಾರೆ. ಹಾಗಾಗಿ ಈ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದು ಮನುಷ್ಯನ ಕರ್ತವ್ಯವಾಗಿದೆ.

ಬ್ರಹ್ಮ ಮುಹೂರ್ತ ಕಾಲವನ್ನು ಅಭ್ಯಾಸ ಮಾಡಿಕೊಳ್ಳಿ ಆಗ ನಡೆಯು ವಂತಹ ಅದ್ಭುತಗಳನ್ನು ನೀವು ಕೂಡ ನಂಬಲ್ಲ. ಊಹಿಸಲಾಗದೆ ಇರುವಂತಹ ವಿಷಯವನ್ನು ಸಾಧಿಸುತ್ತೀರಾ. ಹಾಗೂ ಅಂದುಕೊಂಡ ಯಾವುದೇ ಸ್ಥಳಗಳಲ್ಲಿ ಯಶಸ್ಸನ್ನು ಕೂಡ ಸಾಧಿಸುತ್ತೀರಾ. ಬ್ರಹ್ಮ ಮುಹೂರ್ತ ಕಾಲದಲ್ಲಿ ಮಾಡುವಂತಹ ಪ್ರತಿಯೊಂದು ಕೆಲಸವು ಕೂಡ ಯಶಸ್ಸನ್ನು ಕಾಣುತ್ತದೆ. ಆದ್ದರಿಂದ ಈ ಸಮಯವನ್ನು ಸೃಷ್ಟಿಕರ್ತ ಸಮಯ ಎಂದು ಕರೆಯುತ್ತಾರೆ.

ಪ್ರಾಚೀನ ವಿಜ್ಞಾನ ಆಧುನಿಕ ವಿಜ್ಞಾನ ಎರಡನ್ನು ಪ್ರಮಾಣವಾಗಿ ತೆಗೆದುಕೊಂಡು ನಿರೂಪಿಸಿದ ಮಹತ್ತರವಾದ ವಿಷಯಗಳನ್ನು ಈ ದಿನ ತಿಳಿದುಕೊಳ್ಳೋಣ. ಮನುಷ್ಯರು ಬ್ರಹ್ಮ ಮುಹೂರ್ತದ ಸಮಯದಲ್ಲಿ ನಿದ್ದೆಯಿಂದ ಎದ್ದು ಧ್ಯಾನ ವೇದ ಪಠಣಗಳನ್ನು ಮಾಡಬೇಕು. ಈ ಸಮಯದಲ್ಲಿ ಧಾರ್ಮಿಕ ಗ್ರಂಥಗಳನ್ನು ಓದುವುದು ಯೋಗ ಧ್ಯಾನ ಪ್ರಾಣಾಯಾಮವನ್ನು ಮಾಡುವುದು ನಮ್ಮ ಗುರಿಯ ಮೇಲೆ ಪ್ಲಾನ್ ಮಾಡಿಕೊಳ್ಳುವುದು, ಈ ರೀತಿಯ ಕೆಲವೊಂದಷ್ಟು ಅಭ್ಯಾಸಗಳನ್ನು ಮಾಡಬೇಕು.

ಬ್ರಹ್ಮ ಮುಹೂರ್ತವನ್ನು ಇಷ್ಟು ಶಕ್ತಿವಂತವಾಗಿ ಮಾಡುತ್ತಿರುವಂತಹ ಆ ರಹಸ್ಯಗಳು ಯಾವುದು ಎಂದು ಈಗ ತಿಳಿಯೋಣ. ಹಾಗೇನಾದರೂ ನೀವು ಆ ರಹಸ್ಯಗಳನ್ನು ಅನುಸರಿಸುತ್ತಿದ್ದರೆ ಆ ವಿಶ್ವದ ಜೊತೆ ನಡೆಯುತ್ತೀರಾ ಎಂದೇ ಹೇಳಬಹುದು. ಮೊದಲನೆಯದಾಗಿ ಎದ್ಭಾವಂ ತದ್ಭವತಿ ಎಂಬ ಮಾತನ್ನು ನೀವು ಕೇಳಿಯೇ ಇರುತ್ತೀರ. ಅದೇ ಈ ಲಾ ಆಫ್ ಅಟ್ರಾಕ್ಷನ್. ನೀವು ಏನನ್ನ ಆಲೋಚನೆ ಮಾಡುತ್ತಿರೋ ಅದನ್ನು ನೀವು ತಿರುಗಿ ಪಡೆದುಕೊಳ್ಳುತ್ತೀರಾ.

ದಿನಕ್ಕೆ ನಾವು ಎಷ್ಟೋ ಆಲೋಚನೆಗಳನ್ನು ಮಾಡುತ್ತಿರುತ್ತೀವಿ. ಅದಕ್ಕೂ ಹಾಗೂ ಬ್ರಹ್ಮ ಮುಹೂರ್ತಕ್ಕೂ ಏನು ಲಿಂಕ್ ಇದೆ ಎಂದು ನಿಮಗೆ ಅನಿಸಬಹುದು. ಉದಾಹರಣೆಗೆ ಈ ವಿಶ್ವವೆಲ್ಲ ಸೇರಿ ಒಂದು ಮೊಬೈಲ್ ಟವರ್ ಎಂದು ಕೊಳ್ಳಿ. ನಮ್ಮ ಮೆದುಳನ್ನು ಮೊಬೈಲ್ ಫೋನ್ಸ್ ಎಂದು ಭಾವಿಸಿ. ಹಗಲಿನ ಸಮಯ ಜನರು ಎಚ್ಚರವಾಗಿ ಇರುತ್ತಾರೆ. ಆ ಸಮಯದಲ್ಲಿ

ಮೆದುಳುಗಳೆಲ್ಲ ಸಿಗ್ನಲ್ ಗಳನ್ನು ವಿಶ್ವದಲ್ಲಿ ಕಳುಹಿಸುತ್ತಾ ಇರುತ್ತದೆ. ಇಲ್ಲಿ ಸಿಗ್ನಲ್ಸ್ ಎಂದರೆ ನಿಮ್ಮ ಆಲೋಚನೆಗಳು. ಎಲ್ಲರೂ ಎಚ್ಚರ ಇರು ವಂತಹ ಸಮಯದಲ್ಲಿ ನೀವು ಮುಖ್ಯವಾದ ಯಾವುದಾದರೂ ಒಂದು ಆಲೋಚನೆಯನ್ನೋ ವಿಶ್ವದಲ್ಲಿ ಕಳುಹಿಸುತ್ತಾ ಇದ್ದರೆ ಅದು ನಿಜ ಜೀವನದಲ್ಲಿ ಬರುವುದಕ್ಕೆ ತುಂಬಾ ಸಮಯವನ್ನು ತೆಗೆದುಕೊಳ್ಳುತ್ತಿರು ತ್ತದೆ. ಅದೇ ಎಲ್ಲರೂ ನಿದ್ದೆ ಮಾಡುತ್ತಿದ್ದಾಗ ಅಂದರೆ ಬ್ರಹ್ಮ ಮುಹೂರ್ತ ದಲ್ಲಿ ವಿಶ್ವ ತರಂಗಗಳು ನಿಮ್ಮ ಆಲೋಚನೆಗಳನ್ನು ಕಳಿಸಿದರೆ ಆ ಆಲೋಚನೆಗಳು ಅದು ನಿಜವಾಗುವದಕ್ಕೆ ಅವಕಾಶಗಳು ಜಾಸ್ತಿ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]