ನಿತ್ಯ ಹೆಣ್ಣು ಮಕ್ಕಳು ಪತಿಯ ಆಯುಷ್ಯ ಅಭಿವೃದ್ಧಿಗೆ ಈ ಎರಡು ಸಾಲಿನ ಶ್ಲೋಕ ತಪ್ಪದೇ ಹೇಳಿ…..||
ಹಿಂದೂ ಧರ್ಮದಲ್ಲಿ ಪ್ರತಿಯೊಬ್ಬ ಮಹಿಳೆಯು ಕೂಡ ತನ್ನ ಪತಿಯ ಆರೋಗ್ಯ ಆಯುಷ್ಯ ಅಭಿವೃದ್ಧಿಯಾಗಲಿ ಅವರು ಯಾವ ಕೆಲಸವನ್ನು ಮಾಡುತ್ತಿರುತ್ತಾರೋ ಅದರಲ್ಲಿ ಯಶಸ್ಸು ಸಿಗಲಿ ಎಂದು ಹಲವಾರು ವಿಧಾನಗಳನ್ನು ಅನುಸರಿಸುತ್ತಿರುತ್ತಾರೆ. ಹಾಗೂ ಅವರು ಸಂತೋಷ ವಾಗಿ ನೆಮ್ಮದಿಯ ಜೀವನ ನಡೆಸಲಿ ಎಂದು ದೇವರಲ್ಲಿ ಕೇಳಿಕೊಳ್ಳು ತ್ತಿರುತ್ತಾರೆ.
ಹೌದು ಪ್ರತಿಯೊಬ್ಬ ಮಹಿಳೆಯು ಕೂಡ ತಾನು ಮದುವೆಯಾದ ನಂತರ ತನ್ನ ಪತಿಯ ಪ್ರತಿಯೊಂದು ವಿಚಾರದಲ್ಲಿಯೂ ಕೂಡ ಒಳ್ಳೆಯ ವಿಚಾರವಾಗಿ ಅವರಿಗೆ ಒಳ್ಳೆಯದಾಗಲಿ ಎಂದು ಕೇಳಿಕೊಳ್ಳುತ್ತಲೇ ಇರುತ್ತಾರೆ. ಅದೇ ರೀತಿಯಾಗಿ ಈ ದಿನ ನಾವು ಹೇಳುವಂತಹ ಈ ಎರಡು ಸಾಲಿನ ಶ್ಲೋಕವನ್ನು ನೀವು ಪ್ರತಿನಿತ್ಯ ಹೇಳಿಕೊಂಡಿದ್ದೆ ಆದರೆ ನಿಮ್ಮ ಪತಿಯ ಆಯಸ್ಸು, ವೃದ್ಧಿಯಾಗುತ್ತದೆ ಹಾಗೇನಾದರೂ ನಿಮ್ಮ ಪತಿಯ
ಆಯಸ್ಸಿನಲ್ಲಿ ಏನಾದರೂ ದೋಷ ಇದ್ದರೆ ಅಥವಾ ಅವರಿಗೆ ಯಾವುದೇ ರೀತಿಯ ಸಮಸ್ಯೆ ಉಂಟಾಗುತ್ತದೆ ಎಂದಿದ್ದರೆ ಅದು ನಿವಾರಣೆಯಾಗು ತ್ತದೆ. ಹೌದು ಅಷ್ಟು ಶಕ್ತಿಯುತವಾಗಿದೆ ಈ ಒಂದು ಶ್ಲೋಕ ಹಾಗಾದರೆ ಈ ಒಂದು ಶ್ಲೋಕವನ್ನು ಯಾವಾಗ ಹೇಳಬೇಕು ಎಷ್ಟು ಬಾರಿ ಹೇಳಬೇಕು ಯಾವ ದಿನದಂದು ಹೇಳಬೇಕು ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ.
ಈ ಒಂದು ಶ್ಲೋಕವು ವೇದದಲ್ಲಿ ದೇವಿಯನ್ನು ಹೊಗಳಿರುವಂತಹ ಒಂದು ವಿಶೇಷವಾಗಿರುವಂತಹ ಮಂತ್ರ ಎಂದೇ ಹೇಳಬಹುದು. ಹಾಗಾಗಿ ಮನೆಯಲ್ಲಿರುವಂತಹ ಮಹಿಳೆಯರು ಪ್ರತಿನಿತ್ಯ ಈ ಒಂದು ಶ್ಲೋಕವನ್ನು ಹೇಳುವುದರಿಂದ ಮನೆ ದಿನೇ ದಿನೇ ಅಭಿವೃದ್ಧಿಯಾಗುತ್ತಾ ಹೋಗುತ್ತದೆ. ಈ ಒಂದು ಶ್ಲೋಕವನ್ನು ಕೇವಲ ಮಹಿಳೆಯರು ಮಾತ್ರ ಹೇಳಬೇಕು ಎಂದೇನಿಲ್ಲ ಬದಲಿಗೆ ಮನೆಯಲ್ಲಿರುವಂತಹ ಹೆಣ್ಣು ಮಕ್ಕಳಾಗಿರಬಹುದು ವಿಧವಾ ಸ್ತ್ರೀಯರು ಪ್ರತಿಯೊಬ್ಬರೂ ಕೂಡ ಹೇಳಬಹುದು.
ಮನೆಯಲ್ಲಿರುವಂತಹ ತಾಯಂದಿರು ತಮ್ಮ ಮಕ್ಕಳು ಚಿಕ್ಕವರಿದ್ದಾಗಲೇ ಈ ರೀತಿಯಾದಂತಹ ಕೆಲವೊಂಷ್ಟು ಒಳ್ಳೆಯ ವಿಚಾರಗಳನ್ನು ಕಲಿಸ ಬೇಕು ದೇವರಿಗೆ ಸಂಬಂಧಪಟ್ಟಂತಹ ಕೆಲವೊಂದು ಮಾಹಿತಿಗಳನ್ನು ಅವರಿಗೆ ಚಿಕ್ಕ ವಯಸ್ಸಿನಿಂದಲೇ ಅಭ್ಯಾಸ ಮಾಡಿದರೆ ಅದು ಅವರ ಜೀವನ ಪರ್ಯಂತ ನೆನಪಿನಲ್ಲಿ ಇರುತ್ತದೆ ಹಾಗೂ ಅವರು ಅದನ್ನು ತಮ್ಮ ಜೀವನ ಪರ್ಯಂತ ಅನುಸರಿಸುತ್ತಿರುತ್ತಾರೆ.
ಹಾಗಾದರೆ ಆ ಒಂದು ಸ್ತೋತ್ರ ಯಾವುದು ಎಂದು ಈಗ ನೋಡೋಣ. “ಸರ್ವ ಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತುತೆ” ಈ ಒಂದು ಸ್ತೋತ್ರವನ್ನು ಪ್ರತಿನಿತ್ಯ ಬೆಳಗಿನ ಸಮಯ ಪೂಜೆ ಮಾಡುವಂತಹ ಸಮಯದಲ್ಲಿ ಹೆಣ್ಣು ಮಕ್ಕಳು ಹೇಳಬೇಕು ಈ ರೀತಿ ಹೇಳುವುದರಿಂದ ನಿಮ್ಮ ಮನೆಯಲ್ಲಿ ಅಭಿವೃದ್ಧಿ ಎನ್ನುವುದು ಉಂಟಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.