ಮಹಿಳೆಯರ ಫ್ರೀ ಟಿಕೆಟ್ ಗೆ 9 ದಿನಕ್ಕೆ ನೂರು ಕೋಟಿ ಶಕ್ತಿ ಯೋಜನೆಯ ಯಶಸ್ಸು ಮತ್ತು ಸಮಸ್ಯೆಗಳ ಬಗ್ಗೆ ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಮಹಿಳೆಯರ ಫ್ರೀ ಟಿಕೆಟ್ ಗೆ 9 ದಿನಕ್ಕೆ 100 ಕೋಟಿ ಶಕ್ತಿ ಯೋಜನೆ ಯಶಸ್ಸು ಮತ್ತು ಸಮಸ್ಯೆಗಳ ಬಗ್ಗೆ ನಿಮಗೆ ಗೊತ್ತಾ?

ಈಗಾಗಲೇ ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಶಕ್ತಿ ಯೋಜನೆಗೆ ಚಾಲನೆ ಸಿಕ್ಕಿ 9 ದಿನಗಳು ಕಳೆದಿದೆ. ಆ ಯೋಜನೆ ಸಂಪೂರ್ಣ ಚಿತ್ರಣ ಸ್ವಲ್ಪ ಸ್ವಲ್ಪ ಜನರಿಗೆ ಸಿಗುತ್ತಾ ಇದೆ. ಮೊದಲಿಗೆ ಮಹಿಳೆಯರ ಫ್ರೀ ಪ್ರಯಾಣದ ಬಗ್ಗೆ ಪರ ವಿರೋಧ ಚರ್ಚೆಗಳು ಆರಂಭವಾಗಿದೆ.

ಇನ್ನು ಕೆಲವು ಮಂದಿಗೆ ಈ ಯೋಜನೆ ನಿಜಕ್ಕೂ ಅನುಕೂಲ ಮಾಡಿ ಕೊಡುತ್ತಾ ಇದೆ ಎಂದು ಅನಿಸುವುದಕ್ಕೆ ಶುರುವಾಯಿತು. ಆದರೆ ದಿನ ಕಳೆದಂತೆ ಈ ಯೋಜನೆ ಜಾರಿಗೆ ಮಾಡಿದ ಎಡವಟ್ಟುಗಳು ಅರ್ಥ ವಾಗುವುದಕ್ಕೆ ಶುರುವಾಯಿತು. ಅದು ಎಷ್ಟರ ಮಟ್ಟಿಗೆ ಎಂದರೆ KSRTC ಬಸ್ ಗಳು ತುಂಬಿ ತುಳುಕುತ್ತಿವೆ. ಬಸ್ ಗಳ ಡೋರುಗಳು ಕಿತ್ತು ಬೀಳುತ್ತಾ ಇವೆ.

ಇದಕ್ಕೆ ಪೈಪೋಟಿಯನ್ನು ನಡೆಸುತ್ತಾ ಇರುವಂತಹ ಹೆಣ್ಣು ಮಕ್ಕಳು ಬಸ್ ಗಳ ಒಳಗೆ ತೂರುವುದಕ್ಕೆ ಶುರು ಮಾಡಿದ್ದಾರೆ. ಹಾಗೂ ಹಾಗೆ ಮಾಡಿ ಮಾಡದೆ ಇದ್ದರೆ ಬಸ್ ಗಳನ್ನು ಹತ್ತುವುದಕ್ಕೆ ಸಾಧ್ಯವಾಗದೆ ಬಸ್ಸುಗಳು ತುಂಬುತ್ತಾ ಇವೆ. ಆದರೆ ಇಲ್ಲಿ ಬಸ್ಸುಗಳ ಸಂಖ್ಯೆ ಹೆಚ್ಚಾಗುತ್ತಾ ಇಲ್ಲ ಆದರೆ ಪ್ರಯಾಣಿಕರ ಸಂಖ್ಯೆ ಮೊದಲಿಗಿಂತಲೂ ದುಪ್ಪಟ್ಟಾಗುತ್ತಾ ಇರುವುದು ಗೊತ್ತಾಗುತ್ತದೆ. ಮೊನ್ನೆ ಬಸ್ಸಿನಿಂದ ಬಿದ್ದ ಒಬ್ಬ ವೃದ್ಧರು

ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದೆಲ್ಲವನ್ನು ಕಂಡ ಸಾರಿಗೆ ಇಲಾಖೆ ಯವರು ಈಗ ಸಂಸ್ಥೆಗೆ ಒಂದಷ್ಟು ನಿರ್ಬಂಧಗಳನ್ನು ವಿಧಿಸುವುದಕ್ಕೆ ಮುಂದಾಗುತ್ತ ಇವೆ ಎಂದು ಸುದ್ದಿಗಳು ಬರುತ್ತಿವೆ. ಹಾಗಾದರೆ ಏನಿದು ಶಕ್ತಿ ಯೋಜನೆಗಳ ಸಮಸ್ಯೆ. ಇಲ್ಲಿ ಒಂದಷ್ಟು ಮಂದಿಗೆ ಉಪಯೋಗ ಆಗಿದೆ ಅಂತಹ ಈ ಯೋಜನೆ ಹೇಗೆ ವ್ಯವಸ್ಥೆಯ ಪರಿಣಾಮವನ್ನು ಉಂಟು ಮಾಡುತ್ತಾ ಇದೆ. ಈ ಯೋಜನೆಯಿಂದ

ಸದ್ಯಕ್ಕೆ ಆಗುತ್ತಾ ಇರುವಂತಹ ಸಮಸ್ಯೆಗಳೇನು? ಮತ್ತು ಅದರ ಕಾರಣ ಗಳೇನು ಎಂಬುದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿಯುತ್ತಾ ಹೋಗೋಣ. ಶಕ್ತಿ ಯೋಜನೆ ಸಂಪೂರ್ಣವಾಗಿ ಯಶಸ್ವಿಯಾಗಿದೆ ಬೆಂಗಳೂರಿಗೆ ದಿನನಿತ್ಯ ಕೆಲಸಕ್ಕೆ ಹೋಗುತ್ತಾ ಇರುವಂತಹ ಮಹಿಳೆ ಯರು ಈ ಯೋಜನೆಯ ಸಂಪೂರ್ಣ ಉಪಯುಕ್ತವನ್ನು ಪಡೆದು ಕೊಳ್ಳುತ್ತಿದ್ದಾರೆ. ಆದರೆ ಹೊರ ವಲಯಗಳಲ್ಲಿ ಇರುವ ಗಾರ್ಮೆಂಟ್ಸ್ ಸೇರಿದ ಹಾಗೆ ನಾನಾ ಕಂಪನಿಗಳಿಗೆ ಗ್ರಾಮಾಂತರ ಪ್ರದೇಶಗಳಿಂದ

ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ರಾಮನಗರ, ಚನ್ನ ಪಟ್ಟಣ, ತುಮಕೂರು, ಮುಂತಾದ ಕಡೆಗಳಿಂದ ಬರುತ್ತಾ ಇದ್ದಂತಹ ಮಹಿಳಾ ಪ್ರಯಾಣಿಕರಿಗೆ ಒಂದಷ್ಟು ಹಣ ಉಳಿತಾಯ ಆಗುತ್ತಾ ಇದೆ. ಅವರಲ್ಲಿ ಸಾಕಷ್ಟು ಜನ ರೈಲುಗಳಲ್ಲಿ ಪ್ರಯಾಣ ಮಾಡುತ್ತಿದ್ದರು. ಆದರೆ ಈಗ ಬಸ್ಸುಗಳು ಫ್ರೀ ಇರುವುದರಿಂದ ಹಾಗೂ ರೈಲಿಗೆ ಕಾಯದೆ ಇರುವಂತಹ ಕೆಲಸದಿಂದ ಈಗ ಬಸ್ಸುಗಳಲ್ಲಿ ಓಡಾಡುತ್ತಾ ಇದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *