ಹಣ ಇಡುವ ಬೀರುವಿನಲ್ಲಿ ಈ ಒಂದು ವಸ್ತು ಯಾರಿಗೂ ತಿಳಿಯದಂತೆ ಇಡಿ..ಹಣ ಹುಡುಕಿ ಬರುತ್ತೆ

ಹಣ ಇಡುವ ಬೀರುವಿನಲ್ಲಿ ಈ ಒಂದು ವಸ್ತುವನ್ನು ಯಾರಿಗೂ ತಿಳಿಯದಂತೆ ಇಡಿ||ಹಣ ಹುಡುಕಿ ಬರುತ್ತೆ||

WhatsApp Group Join Now
Telegram Group Join Now

ಹಣ ನಮ್ಮ ಅಗತ್ಯತೆಯನ್ನು ಪೂರೈಸುವ ವಸ್ತು. ಹಣ ಎನ್ನುವ ವಸ್ತು ಇಲ್ಲದೆ ಯಾರು ಕೂಡ ನೆಮ್ಮದಿಯನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯ ವಿಲ್ಲ. ಹಾಗಾಗಿ ಹಣ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಗೂ ಅತ್ಯಗತ್ಯ. ಹಣವಿಲ್ಲದೆ ಜೀವನದಲ್ಲಿ ಏನನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಲಕ್ಷ್ಮಿ ದೇವಿಯ ಪ್ರತಿರೂಪವಾದಂತಹ ಹಣ ಹಾಗೂ ಹಣದ ಪೆಟ್ಟಿಗೆಯ ನ್ನು ಮನೆಯಲ್ಲಿ

ವಿಶೇಷ ಸ್ಥಾನದಲ್ಲಿ ಇಟ್ಟು ಪೂಜಿಸಬೇಕು ಅಂತ ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾವು ಮನೆಯಲ್ಲಿ ಹಣವನ್ನು ಯಾವ ಸ್ಥಳದಲ್ಲಿ ಮತ್ತು ಯಾವ ದಿಕ್ಕಿನಲ್ಲಿ ಇಡುತ್ತೇವೆ ಎನ್ನುವುದರ ಆಧಾರದ ಮೇಲೆ ಸಂತೋಷ ಮತ್ತು ಸಮೃದ್ಧಿ ವೃದ್ಧಿಯಾಗುತ್ತದೆ. ಜೀವನದಲ್ಲಿ ಎಂದಿಗೂ ಹಣದ ಕೊರತೆ ಆಗಬಾರದು ವ್ಯಾಪಾರ ಮತ್ತು ವೃತ್ತಿಯಲ್ಲಿ ನಿರಂತರವಾಗಿ ಅಭಿವೃದ್ಧಿ ಇರಬೇಕು ಎಂದರೆ

ಕೆಲವೊಂದು ವಿಧಾನಗಳನ್ನು ಅನುಸರಿಸಬೇಕು. ಆ ವಿಧಾನಗಳು ಯಾವುವು ಎನ್ನುವುದನ್ನು ಈ ದಿನ ತಿಳಿದುಕೊಳ್ಳೋಣ. ಮನೆಯಲ್ಲಿನ ಹಣ ಒಡವೆಗಳನ್ನು ಇಡುವಂತಹ ಬೀರು ಅಥವಾ ತಿಜೋರಿಗಳ ವಿಷಯದಲ್ಲೂ ಕೆಲವು ವಾಸ್ತು ಪಾಲನೆ ಮುಖ್ಯವಾಗಿರುತ್ತದೆ. ಮನೆಯ ಕೋಣೆಯ ಯಾವುದಾದರೂ ಒಂದು ಮೂಲೆಯಲ್ಲಿ ಈ ಬೀರು ಇದ್ದರಾಯ್ತು ಎಂದು ಉದಾಸೀನ ಮಾಡಿದರೆ ನಮ್ಮಲ್ಲಿ ಆರ್ಥಿಕ ಸಂಕಷ್ಟ ಎದುರಾಗುವುದು.

ಇದೇ ಕಾರಣಕ್ಕೆ ಮನೆಯ ಸಂಪತ್ತನ್ನು ಹೊಂದಿರುವಂತಹ ಈ ಬೀರು ಗಳು ಸರಿಯಾದ ವಾಸ್ತು ದಿಕ್ಕಿನಲ್ಲಿ ಇರಬೇಕು ಅಂತ ಹೇಳಲಾಗುತ್ತದೆ. ಮನೆಯ ಕೊಠಡಿಯ ಉದ್ದಳತೆ ಹಾಗೂ ಮನೆಯ ಕೆಲವು ವಸ್ತುಗಳನ್ನು ಜೋಡಿಸುವಾಗ ನಮಗೆ ಹೇಗೆ ಅನುಕೂಲವಾಗುತ್ತದೆಯೋ ಹಾಗೆ ವಸ್ತುಗಳನ್ನು ಜೋಡಿಸಿಕೊಳ್ಳುತ್ತೇವೆ ಆದರೆ ಹೀಗೆ ಮಾಡುವುದು ತಪ್ಪು ಇದರಿಂದ ನಮ್ಮ ಹಣದ ಅರಿವು ನಮ್ಮ ಐಶ್ವರ್ಯ ಕುಂಠಿತವಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ.

See also  ನಿಮ್ಮ ಇಷ್ಟ ದೇವರನ್ನು ನೆನೆದು ಭಕ್ತಿಯಿಂದ ಸಂಖ್ಯೆ ಆರಿಸಿಕೊಳ್ಳಿ ಹಣ ಉದ್ಯೋಗ ಪ್ರೀತಿ ಮುಂದೆ ಹೇಗಿರಲಿದೆ ನೋಡಿ

ವಾಸ್ತು ಶಾಸ್ತ್ರದ ಪ್ರಕಾರ ಹಣವನ್ನು ಇಡುವಂತಹ ಪೆಟ್ಟಿಗೆ ಅಥವಾ ಬೀರು ವನ್ನು ನೈರುತ್ಯ ದಿಕ್ಕಿನಲ್ಲಿ ಇಡಬೇಕು. ಆಗ ತಾಯಿ ಲಕ್ಷ್ಮಿ ದೇವಿಯು ಆಕರ್ಷಿತಳಾಗುತ್ತಾಳೆ. ಮನೆಯಲ್ಲಿ ಯಾವುದೇ ಕುಂದು ಕೊರತೆ ಉಂಟಾಗುವುದಿಲ್ಲ. ಅಗತ್ಯಕ್ಕೆ ಬೇಕಾಗಿರುವಷ್ಟು ಹಣದ ಹರಿವು ನಿರಂತರವಾಗಿರುತ್ತದೆ ಅಂತ ಹೇಳಲಾಗುತ್ತದೆ. ಹಣವನ್ನು ಇಡುವಂತಹ ಬೀರು ಅಥವಾ ಪೆಟ್ಟಿಗೆಯನ್ನು ಈಶಾನ್ಯ ದಿಕ್ಕಿನಲ್ಲಿ ಇಡಬಾರದು. ಹೀಗೆ ಇಟ್ಟರೆ ಹಣದ ಕೊರತೆ ಹಾಗೂ ಸಮಸ್ಯೆ ಆಗಾಗ ತಲೆದೂರುತ್ತಲೇ ಇರುತ್ತದೆ.

ಹಣವನ್ನು ಇಡುವಂತಹ ಪೆಟ್ಟಿಗೆ ಅಥವಾ ಬೀರುವನ್ನು ತೆರೆಯುವಂತಹ ದಿಕ್ಕು ಕೂಡ ಅತ್ಯಂತ ಪ್ರಮುಖ ಸ್ಥಾನವನ್ನು ವಹಿಸುತ್ತದೆ. ಬೀರುವಿನ ಬಾಗಿಲನ್ನು ತೆಗೆಯುವಾಗ ಅದರ ಬಾಗಿಲು ದಕ್ಷಿಣಕ್ಕೆ ತೆಗೆಯುವ ರೀತಿ ಇರಬಾರದು. ದಕ್ಷಿಣ ದಿಕ್ಕಿನಲ್ಲಿ ಬಾಗಿಲು ತೆರೆಯುವ ಮನೆಯಲ್ಲಿ ಲಕ್ಷ್ಮಿ ದೇವಿಯು ವಾಸಿಸುವುದಿಲ್ಲ ಅಂಥವರ ಮನೆಯಲ್ಲಿ ಹಣಕಾಸು ಕುಂಟಿತಗೊಳ್ಳುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">